ನ್ಯೂಜೆರ್ಸಿ: ಇಡೀ ಜಗತ್ತು ಇಂದು ಮನೆಗೆ ಸೀಮಿತವಾಗಿರುವಾಗ ಅಮೆರಿಕದಲ್ಲಿ ಹಿರಿಯರು ಮನೆ ಬಿಟ್ಟು ಓಡಾಡುತ್ತಿದ್ದಾರೆ.
ಇದು ವಿಚಿತ್ರ ಎನಿಸಬಹುದು. ಆದರೂ ನಿಜ. ಇಂಥ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸ್ಥಳೀಯ ಸರಕಾರಗಳಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ.
ಇತ್ತೀಚೆಗೆ 99 ವರ್ಷದ ನ್ಯೂಜೆರ್ಸಿಯ ವ್ಯಕ್ತಿ ಯೊಬ್ಬರು ಪಾರ್ಟಿಗೆ ಹೋಗಿದ್ದು, ಬಳಿಕ ಪೊಲೀಸರ ಅತಿಥಿಯಾಗಿ ದ್ದಾರೆ. ಇದೇ ನಗರದಲ್ಲಿ ಮತ್ತೂಂದು ಪ್ರಕರಣ ನಡೆದಿದ್ದು, ಶತಾಯುಷಿಯೊಬ್ಬರು ತಮ್ಮ ಆಪ್ತವಲಯದ ಒಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನು ಅರಿತ ಪೊಲೀಸರು ಮನೆಯಲ್ಲಿಯೇ ಇರಬೇಕಾದ ಆದೇಶವನ್ನು ಉಲ್ಲಂ ಸಿದ ಕಾರಣಕ್ಕೆ ಬಂಧಿಸಿದ್ದಾರೆ.
ಇದು ಇಲ್ಲಿಗೇ ಮುಗಿಯುವುದಿಲ್ಲ.
ಕೋವಿಡ್-19 ಸೋಂಕು ಹಿರಿಯ ಪ್ರಜೆಗಳಿಗೆ ತಗಲುವುದು ಬಹಳ ಸುಲಭ. ಹಾಗಾಗಿ ಹೊರಗೆ ಬರಬೇಡಿ ಎಂದು ಸೂಚಿಸಿದ್ದರೂ ಹೆಚ್ಚಾಗಿ ಹಿರಿಯರೇ ನಿರ್ದೇಶನಗಳನ್ನು ಮೀರುತ್ತಿರುವುದು ವಿಚಿತ್ರ ಎನಿಸಿದೆ. 95ರ ಹರೆಯದ ಅಲ್ಕೆ ಮುಯಿರ್‌ಹೆಡ್ ಅವರು ಈ ಹೋಂ ಕ್ವಾರಂಟೈನ್‌ನಿಂದ ಬೇಸತ್ತಿದ್ದಾರಂತೆ. ಅವರು ಇತ್ತೀಚೆಗೆ ತನ್ನ ಮನೆಯ ಸಮೀಪದ ಸಾಂತಾ ಫೆನಲ್ಲಿರುವ ಟ್ರೆಡರ್‌ಜೋಸ್ ಅವರನ್ನು ಭೇಟಿಯಾಗಿ ಬಂದಿದ್ದರಂತೆ.
ಸ್ವಯಂ ಏಕಾಂತ ಜಗತ್ತಿನಾದ್ಯಂತ ಇರುವ ಕಾರಣ ಮನೆ ಮಂದಿಯೆಲ್ಲಾ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಮನೆಯಲ್ಲಿರುವ ಹಿರಿಯರಿಗೆ ಸಮಯವೇ ಹೋಗುತ್ತಿಲ್ಲ. ಹೆಚ್ಚಿನ ಮನೆಯಲ್ಲಿ ಇಂದು ದಿನಸಿ ಸಾಮಗ್ರಿ ಗಳನ್ನೂ ಆನ್ ಲೈನ್‌ನಲ್ಲಿ ಕಾದಿರಿಸಲಾಗುತ್ತಿದೆ. ಅಮೆರಿಕದಲ್ಲಿ 245,600 ಸೋಂಕಿತ ಪ್ರಕರಣಗಳಿದ್ದು, 6,100 ಕ್ಕೂ ಹೆಚ್ಚು ರೋಗಿಗಳು ಸತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಅಮೆರಿಕದಲ್ಲಿ ವರದಿಯಾದ ಸಾವಿನ ಪ್ರಕರಣಗಳ ಪೈಕಿ 10ರಲ್ಲಿ 8 ಪ್ರಕರಣಗಳು 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರದ್ದಾಗಿದೆ.