Advertisement

ತಾಲಿಬಾನ್‌ ಮನವೊಲಿಸಿ

10:43 AM Dec 04, 2018 | Team Udayavani |

ಇಸ್ಲಾಮಾಬಾದ್‌: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರ ಸಂಘಟನೆಯನ್ನು ಮಾತುಕತೆಗೆ ಬರುವಂತೆ ಮನವೊಲಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪಾಕ್‌ ಪ್ರಧಾನಿ ಇಮ್ರಾನ್‌ಖಾನ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 17 ವರ್ಷಗಳ ಕಾಲ ತಾಲಿಬಾನ್‌ ಜತೆಗಿನ ಯುದ್ಧದಿಂದ ಪಾಕಿಸ್ಥಾನ, ಅಮೆರಿಕಕ್ಕೂ ಭಾರಿ ತೊಂದರೆಯಾಗಿದೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ. ಆಲ್‌-ಕಾಯಿದಾ ಉಗ್ರ ಉಸಾಮ ಬಿನ್‌ ಲಾದನ್‌ ಅಬೋಟಾಬಾದ್‌ನಲ್ಲಿ ಅಡಗಲು ಪಾಕ್‌ ನೆರವಾಗಿತ್ತು ಎಂದು ಆರೋಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next