Advertisement

ಅಮೆರಿಕ ಶಟ್‌ಡೌನ್‌: ಮತ್ತೆ ಉಂಟಾದ ಆಡಳಿತಾತ್ಮಕ ಬಿಕ್ಕಟ್ಟು

11:01 AM Jan 21, 2018 | Team Udayavani |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಸ್ಥಾನ ವಹಿಸಿ ಡೊನಾಲ್ಡ್‌ ಟ್ರಂಪ್‌ ವರ್ಷ ಪೂರೈಸುತ್ತಿ ದ್ದಂತೆಯೇ ಅಲ್ಪಾವಧಿಯ ಹಣಕಾಸು ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು (ಷಟ್‌ಡೌನ್‌) ಉಂಟಾಗಿದೆ. ಅಮೆರಿಕದ ಸೆನೆಟ್‌ನಲ್ಲಿ ಮಸೂದೆ ತಿರಸ್ಕೃತಗೊಂಡಂತೆ, ಸರಕಾರದ ಎಲ್ಲ ವಿಭಾಗಗಳೂ ಸ್ಥಗಿತಗೊಂಡಿವೆ. 5 ವರ್ಷಗಳ ಬಳಿಕ ಈ ರೀತಿಯ ಬಿಕ್ಕಟ್ಟು ಉಂಟಾಗಿದೆ. ಅಮೆರಿಕದ ಸಂಸತ್‌ ಮತ್ತು ಹೌಸ್‌ ಆಫ್ ರೆಪ್ರಸೆಂಟೆಟಿವ್ಸ್‌ ಒಂದೇ ಪಕ್ಷದನಿಯಂತ್ರಣದಲ್ಲಿರುವಾಗ ಈ ರೀತಿಯ ಬಿಕ್ಕಟ್ಟು ಉಂಟಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.

Advertisement

ಅಮೆರಿಕ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಪೆಂಟಗನ್‌ ಮತ್ತು ಸರಕಾರದ ಇತರ ಕಚೇರಿಗಳಿಗೆ ಅಲ್ಪಾವಧಿಗೆ ಹಣಕಾಸಿನ ನೆರವು ನೀಡುವ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದ್ದು, ರಿಪಬ್ಲಿಕನ್‌ ಪಕ್ಷದ ಕೆಲ ಸಂಸದರು ಡೆಮಾಕ್ರಾಟ್‌ ಸಂಸದರ ಜತೆ ಕೈಜೋಡಿಸಿದ ಪರಿಣಾಮ ಮಸೂದೆ ಅಂಗೀಕಾರ ಸಾಧ್ಯವಾಗಲಿಲ್ಲ. ಮಸೂದೆ ಅಂಗೀಕಾರಕ್ಕೆ 60 ಮತಗಳ ಅಗತ್ಯವಿತ್ತು. ಸೆನೆಟ್‌ನಲ್ಲಿ 50-48 ಮತಗಳ ಅಂತರಿಂದ ಮಸೂದೆ ತಡೆಹಿಡಿಯಲ್ಪಟ್ಟಿತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಧ್ಯಕ್ಷ ಟ್ರಂಪ್‌, ಡೆಮಾಕ್ರಾಟ್‌ ಸಂಸದರೇ ಬಿಕ್ಕಟ್ಟಿಗೆ ಕಾರಣ ಎಂದು ದೂರಿದ್ದಾರೆ. ಮುಂದಿನ ವಾರ ದಾವೋಸ್‌ ಭೇಟಿ ಹೊರತಾಗಿ ಉಳಿದ ಎಲ್ಲ ಕಾರ್ಯಕ್ರಮಗಳನ್ನು ಟ್ರಂಪ್‌ ರದ್ದು ಮಾಡಿದ್ದಾರೆ.

ಕಾರಣವೇನು?

 ಅಕ್ರಮ ವಲಸಿಗರನ್ನು ಗಡಿ ಪಾರು ಮಾಡಬೇಕು ಎಂಬುದು ಅಧ್ಯಕ್ಷ ಟ್ರಂಪ್‌ರ ರಿಪಬ್ಲಿಕನ್‌ ಪಕ್ಷದ ಯೋಜನೆ. ಅದನ್ನು ಜಾರಿ ಮಾಡುವ ಮುನ್ನ ತಮ್ಮ ಜತೆ ಸಮಾಲೋಚನೆ ನಡೆಸಬೇಕು ಎಂದು ಡೆಮಾಕ್ರಾಟ್‌ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದಾರೆ. ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಈ ಬಿಕ್ಕಟ್ಟಿನ ನೇರ ಪರಿಣಾಮ ಸೋಮವಾರದಿಂದ ಕಂಡುಬರಲಿದೆ. 8 ಲಕ್ಷಕ್ಕೂ ಹೆಚ್ಚು ಸರಕಾರಿ ನೌಕರರಿಗೆ ಸಂಬಳರಹಿತ ರಜೆ ನೀಡಲಾಗುತ್ತದೆ. ಅಗತ್ಯ ಸೇವೆಗಳಷ್ಟೇ ಇರಲಿವೆ.

ನಮ್ಮ ಸರಕಾರ ತೆರಿಗೆ ಕಡಿತ ಮಾಡಿದ ಲಾಭ ಸಿಗಬಾರದು ಎಂದು ಡೆಮಾಕ್ರಾಟ್‌ ಸದಸ್ಯರು ಇಂಥ ಪ್ರಯತ್ನ ನಡೆಸುತ್ತಿದ್ದಾರೆ. ತೆರಿಗೆ ಕಡಿತದಿಂದ ದೇಶದ ಅರ್ಥವ್ಯವಸ್ಥೆಗೆ ನೆರವಾಗಲಿದೆಯೇ ಹೊರತು ಧಕ್ಕೆಯಾಗಲಾರದು.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Advertisement

ಸರಕಾರಕ್ಕೆ ಧನಸಹಾಯ ಮಾಡು ವುದು, ಸೇನೆಗೆ ನೆರವಾಗುವುದು ಡೆಮಾಕ್ರಾಟ್‌ ಸಂಸದರಿಗೆ ಬೇಕಾಗಿಲ್ಲ. ಆರೋಗ್ಯ ಸೇವೆಗೆ ಹಾನಿ ಉಂಟು ಮಾಡುವುದು ಅವರ ಆದ್ಯತೆ. ಅಕ್ರಮ ವಲಸಿಗರು ದೇಶದಲ್ಲಿ ತುಂಬಬೇಕು ಎನ್ನುವುದೇ ಅವರಿಗೆ ಬೇಕಾಗಿದೆ.
ಮಿಚ್‌ ಮೆಕ್‌ಕೊನೆಲ್‌, ಸೆನೆಟ್‌ ನಾಯಕ

ಹಿಂದಿನ “ಸ್ತಬ್ಧ’ ಚಿತ್ರಣ
2013 ಅಕ್ಟೋಬರ್‌
 ಅಧ್ಯಕ್ಷ ಒಬಾಮರ ಮಹತ್ವಾಕಾಂಕ್ಷಿ ಆರೋಗ್ಯ ರಕ್ಷಣಾ ಕಾಯ್ದೆಗೆ ಪ್ರತಿರೋಧ ವ್ಯಕ್ತವಾಗಿತ್ತು. 16 ದಿನಗಳ ಕಾಲ ಆಂಶಿಕವಾಗಿ ಸರಕಾರಿ ವ್ಯವಸ್ಥೆ ಬಂದ್‌ ಆಗಿತ್ತು. 8.50 ಲಕ್ಷ ಸರಕಾರಿ ನೌಕರರು ವೇತನವಿಲ್ಲದೇ ಮನೆಯಲ್ಲಿ ಉಳಿಯಬೇಕಾಯಿತು. 15,957 ಕೋಟಿ ರೂ. (2.5 ಬಿಲಿಯನ್‌ ಡಾಲರ್‌) ನಷ್ಟ ಉಂಟಾಗಿತ್ತು.

ಡಿಸೆಂಬರ್‌ 1995- ಜನವರಿ 1996: ಮುಂಗಡ ಪತ್ರ ಗಾತ್ರ ಕುಗ್ಗಿಸಬೇಕು ಎಂದು ರಿಪಬ್ಲಿಕನ್‌ ಪಕ್ಷ ಸ್ಪೀಕರ್‌ ನ್ಯೂ ಗಿಂಗ್ರಿಚ್‌ ಪಟ್ಟು ಹಿಡಿದ ಕಾರಣ 3 ವಾರ‌ ಕಾಲ ಷಟ್‌ಡೌನ್‌ ಆಯಿತು. ಆಗಿನ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಬಜೆಟ್‌ಗೆ ಸಹಿ ಹಾಕಲೇಬೇಕಾ ಯಿತು. ಉದ್ಯಾನವನ, ಪಾಸ್‌ಪೋರ್ಟ್‌ ನವೀಕರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತೊಂದರೆ ಉಂಟಾಗಿದ್ದವು.

1995 ನವೆಂಬರ್‌
 5 ದಿನಗಳ ಕಾಲ ಕ್ಲಿಂಟನ್‌ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಧ್ಯಾಂತರ ಬಜೆಟ್‌ಗೆ ಸಂಬಂಧಿಸಿ ಬಿಕ್ಕಟ್ಟು ಉಂಟಾಗಿತ್ತು. ಆರೋಗ್ಯ ವಿಮೆ ಪ್ರೀಮಿಯಂ ಮೊತ್ತ ಹೆಚ್ಚಳಕ್ಕೆ ಸಂಬಂಧಿಸಿದ ಬಿಕ್ಕಟ್ಟು ಒಂದು ತಿಂಗಳ ವರೆಗೆ ಮುಂದುವರಿದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next