Advertisement

ಕ್ರಿಸ್ಮಸ್‌ ವೇಳೆಯಲ್ಲೇ ಸ್ಥಗಿತಗೊಂಡ ಅಮೆರಿಕ 

06:55 AM Dec 23, 2018 | Team Udayavani |

ವಾಷಿಂಗ್ಟನ್‌:ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ಮಂಡಿಸಿದ ಹಣಕಾಸು ಮಸೂದೆಗೆ ಅನುಮೋದನೆ ನೀಡಲು ಸಂಸತ್‌ ನಿರಾಕರಿಸಿದ್ದರಿಂದಾಗಿ ಕ್ರಿಸ್‌ಮಸ್‌ ಸಮಯದಲ್ಲೇ ಇಡೀ ಸರಕಾರದ ಕಾರ್ಯಕಲಾಪ ಸ್ಥಗಿತಗೊಂಡಿದೆ. 

Advertisement

ಶನಿವಾರ ತಡರಾತ್ರಿಯವರೆಗೂ ಸಂಸತ್‌ನಲ್ಲಿ ಭಾರಿ ಚರ್ಚೆ ನಡೆದಿತ್ತಾದರೂ, ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.

ಮೆಕ್ಸಿಕೋ ಗಡಿಯಲ್ಲಿ ಗಡಿ ಗೋಡೆ ನಿರ್ಮಿಸುವ ಸಂಬಂಧ 500 ಕೋಟಿ ಡಾಲರ್‌ ಮೀಸಲಿಡುವ ಪ್ರಸ್ತಾಪವನ್ನು ಡೆಮಾಕ್ರಾಟ್‌ಗಳು ವಿರೋಧಿಸಿದ್ದಾರೆ. ಹೀಗಾಗಿ ಮಸೂದೆಗೆ ಅನುಮೋದನೆ ಲಭ್ಯವಾಗಿಲ್ಲ. 8 ಲಕ್ಷ ಉದ್ಯೋಗಿಗಳು ಕ್ರಿಸ್‌ಮಸ್‌ ಸಮಯದಲ್ಲೇ ಸಂಬಳವಿಲ್ಲದೆ ಖಾಲಿ ಕೈಯಲ್ಲಿ ಮನೆಗೆ ಹೋಗುವಂ ತಾಗಿದೆ. ನಾಸಾ ಸೇರಿದಂತೆ ಬಹುತೇಕ ಸರ್ಕಾರಿ ಸಂಸ್ಥೆಗಳ ನೌಕರರಿಗೆ ರಜೆ ನೀಡಲಾಗಿದೆ.  ಭದ್ರತಾ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next