Advertisement

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

12:09 AM Nov 29, 2024 | Team Udayavani |

ಹ್ಯೂಸ್ಟನ್‌: ಎಲೆಕ್ಟ್ರೋ-ಆಕ್ಯೂಪಂಕ್ಚರ್‌ ಸಾಧನ ಬಳಸಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿ ವಂಚಿಸಿದ್ದಕ್ಕಾಗಿ ಭಾರತೀಯ ಮೂಲದ ನರರೋಗ ತಜ್ಞರೊಬ್ಬರಿಗೆ ಅಮೆರಿಕದಲ್ಲಿ 17.7 ಕೋಟಿ ರೂ. ದಂಡ ವಿಧಿಸಲಾಗಿದೆ.

Advertisement

ಹ್ಯೂಸ್ಟನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ರಾಜೇಶ್‌ ಬಿಂದಾಲ್‌, ಶಸ್ತ್ರಚಿಕಿತ್ಸೆ ಮೂಲಕ ರೋಗಿಯ ಕಿವಿಗೆ ಅಳವಡಿಸಬೇಕಾದ ಸಾಧನಗಳನ್ನು ಶಸ್ತ್ರಚಿಕಿತ್ಸೆ ನಡೆಸದೆಯೇ ಕಿವಿಯ ಹಿಂದಕ್ಕೆ ಅಳವಡಿಸಿ, ಶಸ್ತ್ರಚಿಕಿತ್ಸೆ ನಡೆಸಿರುವುದಾಗಿ ಸುಳ್ಳು ಹೇಳಿದ್ದಾರೆ. ಕೆಲವು ಸಂದರ್ಭದಲ್ಲಿ ರಾಜೇಶ್‌ ಬದಲು ಸಹಾಯಕ ವೈದ್ಯ ಈ ಸಾಧನಗಳನ್ನು ಅಳವಡಿಸಿದ್ದಾರೆ ಎಂದೂ ಅಟಾರ್ನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next