Advertisement

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

09:16 PM Nov 12, 2024 | Team Udayavani |

ನ್ಯೂಯಾರ್ಕ್‌: ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಖ್ಯಾತಿ ಪಡೆದಿರುವ ದುಬೈನ ಬುರ್ಜ್‌ ಖಲೀಫಾವನ್ನು ಮೀರಿಸುವ ಕಟ್ಟಡವೊಂದನ್ನು ನಿರ್ಮಿಸಲು ಅಮೆರಿಕ ಮುಂದಾಗಿದೆ. ಆದರೆ ಎತ್ತರದಲ್ಲಿ ಅಲ್ಲ, ಬದಲಿಗೆ ಉದ್ದದಲ್ಲಿ!

Advertisement

ಹೌದು, ಮ್ಯಾನ್‌ಹ್ಯಾಟನ್‌ನಲ್ಲಿ “ದಿ ಬಿಗ್‌ ಬೆಂಡ್‌’ ಎಂಬ ಕಟ್ಟಡ ನಿರ್ಮಿಸಲು ಎಲ್ಲ ತಯಾರಿಗಳೂ ನಡೆಯುತ್ತಿದ್ದು, ಇದು ನಿರ್ಮಾಣವಾದರೆ ವಿಶ್ವದ ಅತಿ ಉದ್ದದ ಕಟ್ಟಡ ಎಂಬ ಖ್ಯಾತಿಗೆ ಇದು ಪಾತ್ರವಾಗಲಿದೆ. ಬಹಳ ವಿಶಿಷ್ಟವಾಗಿ ಈ ಕಟ್ಟಡದ ವಿನ್ಯಾಸ ತಯಾರಿಸಲಾಗಿದ್ದು, ಇಂಗ್ಲೀಷ್‌ನ “ಯು’ ಆಕಾರದಲ್ಲಿ ಇದನ್ನು ಕಟ್ಟಲು ಯೋಜಿಸಲಾಗಿದೆ. ಹಾಗಾಗಿ ಪೂರ್ಣ ಕಟ್ಟಡದ ಉದ್ದ 4 ಸಾವಿರ ಅಡಿಗಳಿರಲಿವೆ.

ಆದರೆ ಅಷ್ಟು ಎತ್ತರದಲ್ಲಿ ಕಟ್ಟಡ ನಿರ್ಮಾಣವಾಗುವುದಿಲ್ಲ. ಬದಲಿಗೆ ಅರ್ಧ ಕಟ್ಟಡವಾದ ಬಳಿಕ ಇದು ಬಾಗಿ ಮತ್ತೆ ನೆಲಕ್ಕೆ ಬರಲಿದೆ. ಈ ವಿಶಿಷ್ಟ ಪರಿಕಲ್ಪನೆಯ ಪ್ರಸ್ತಾಪವನ್ನು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಒಯಿಯೋ ಪ್ರಸ್ತಾಪಿಸಿದೆ. ಕಟ್ಟಡ ಎತ್ತರವಿದ್ದಷ್ಟೂ ಅದರ ವೆಚ್ಚವೂ ಹೆಚ್ಚು.  ಹಾಗಾಗಿ ವೆಚ್ಚ ಉಳಿಸಲು ಈ ವಿಶಿಷ್ಟ ವಿನ್ಯಾಸ ಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next