Advertisement

ಅಮೆರಿಕದ ಗ್ರೀನ್‌ ಕಾರ್ಡ್‌ಗೆ ಕಾಯಬೇಕು ಬರೋಬ್ಬರಿ 150 ವರ್ಷ !

07:15 PM Jun 16, 2018 | Team Udayavani |

ವಾಷಿಂಗ್ಟನ್‌ : ಎಷ್ಟೇ ಉನ್ನತ ಮತ್ತು ಅತ್ಯಾಧುನಿಕ ಪದವಿಗಳನ್ನು ಪಡೆದರೂ ಅಮೆರಿಕದ ಗ್ರೀನ್‌ ಕಾರ್ಡ್‌ ಪಡೆಯಲು ಭಾರತೀಯರು ಇನ್ನು ಬರೋಬ್ಬರಿ 150 ವರ್ಷ ಕಾಯಬೇಕಾಗುತ್ತದೆ ಎಂಬ ವಿಷಯವೊಂದು ಇದೀಗ ಅಧ್ಯಯನವೊಂದರಿಂದ ಬಹಿರಂಗವಾಗಿದೆ.

Advertisement

ಗ್ರೀನ್‌ ಕಾರ್ಡ್‌ಗಾಗಿ ಅರ್ಜಿ ಹಾಕಿರುವ ಭಾರತೀಯರ ಸಂಖ್ಯೆಯನ್ನು  ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ ಬಹಿರಂಗಗೊಳಿಸಿದೆ. 2018ರ ಎಪ್ರಿಲ್‌ 20ರ ವೇಳೆಗೆ 6,32,219 ಭಾರತೀಯರು ತಮ್ಮ ಪತ್ನಿ, ಮಕ್ಕಳೊಂದಿಗೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್‌ ಕಾರ್ಡ್‌ ಗಾಗಿ ಅರ್ಜಿ ಹಾಕಿದ್ದಾರೆ.

ಇಷ್ಟು  ದೊಡ್ಡ ಸಂಖ್ಯೆಯ ಭಾರತೀಯರು ಕ್ಯೂ ನಲ್ಲಿ ಇರುವುದನ್ನು ಕಂಡರೆ ಗ್ರೀನ್‌ ಕಾರ್ಡ್‌ ಪಡೆಯಲು ಅರ್ಜಿದಾರರು ಇನ್ನು 150 ವರ್ಷ ಕಾಯಬೇಕಾಗಬಹುದು ಎಂದು ಅಂದಾಜಿಸಲಾಗಿದೆ. 

2107ರಲ್ಲಿ ವಿತರಿಸಲಾಗಿರುವ ಗ್ರೀನ್‌ ಕಾರ್ಡ್‌ ಅಂಕಿ ಅಂಶಗಳನ್ನು ಕೂಡ ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ವಾಷಿಂಗ್ಟನ್‌ ಕ್ಯಾಟೋ ಇನ್‌ಸ್ಟಿಟ್ಯೂಟ್‌ ನಾಮಾಂಕಿತ ಚಿಂತಕರ ಚಾವಡಿ ಈ ಅಧ್ಯಯನವನ್ನು ಕೈಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next