Advertisement

ಅಮೆರಿಕದಲ್ಲಿ ಅಪರಿಚಿತ ಹಂತಕರಿಂದ ಗಾಯಕ ಜಹೆಸಹ್‌ ಕಗ್ಗೊಲೆ

11:37 AM Jun 19, 2018 | udayavani editorial |

ನ್ಯೂಯಾರ್ಕ್‌ : ಅಮೆರಿಕದ ಮಯಾಮಿಯಲ್ಲಿ  20ರ ಹರೆಯದ ರಾಪರ್‌ ಜಹೆಸಹ್‌ ಅನ್‌ಫ್ರಾಯ್‌ ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವುದಾಗಿ ವರದಿಯಾಗಿದೆ. 

Advertisement

ಸೋಮವಾರ ಈ ಘಟನೆ ನಡೆದಿತ್ತು. ಆಗ ಜಹೆಸಹ್‌ ಅವರು ಮಯಾಮಿಯಲ್ಲಿನ ಮೋಟಾರ್‌ ಸೈಕಲ್‌ ಅಂಗಡಿಯೊಂದರಲ್ಲಿ ಇದ್ದರು. ಅವನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆ  ಎಂದು ವರದಿ ತಿಳಿಸಿದೆ.

ಈ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ಜಹೆಸಹ್‌  ಅವರನ್ನು ಗುಂಡಿಕ್ಕಿ ಕೊಂದ ಗುಂಪಿನವರಿಗೆ ಹಲವು ಕಲಾವಿದರೊಂದಿಗೆ ವೈಷಮ್ಯ ಇದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next