ಚಿತ್ತಾಪುರ: ಕೇಂದ್ರ ಸರ್ಕಾರಕ್ಕೆ ಅಲ್ಪಸಂಖ್ಯಾತರ ಕುರಿತು ವಿಶೇಷ ಕಾಳಜಿ ತೋರಿಸುತ್ತಿದ್ದು, ಅವರಿಗೆ ಒಳ್ಳೆಯದು ಮಾಡಬೇಕು ಎನ್ನುವ ಮನಸ್ಸಿದ್ದಲ್ಲಿ ಅಲ್ಪಸಂಖ್ಯಾತರ ಮಕ್ಕಳಿಗೆ ಉದ್ಯೋಗ ಅವಕಾಶ, ಶಿಕ್ಷಣ ಸಿಗಲು ವಿಶೇಷ ಕಾನೂನು ಜಾರಿ ಮಾಡಿ ಎಂದು ಯುನೈಟೆಡ್ ಮುಸ್ಲಿಂ ಪೋರಂ ಅಧ್ಯಕ್ಷ ಮುಕ್ತಾರ ಪಟೇಲ್ ಹೇಳಿದರು.
ಪಟ್ಟಣದಲ್ಲಿ ತ್ರಿವಳಿ ತಲಾಖ್ ಕುರಿತು ನಡೆದ ಬೃಹತ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಮುಸ್ಲಿಂ ಸಮುದಾಯದವರು ತೀರ ಬಡತನ ರೇಖೆಗಿಂತ ಕೆಳಗಿದ್ದು, ಒಪ್ಪತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹವರ ವಿರುದ್ಧ ಕಾಳಜಿ ತೊರದೇ ಮುಸ್ಲಿಂ ಮಹಿಳೆಯರಿಗೆ ಮಾರಕವಾಗುವ ಕಾನೂನು ಮಂಡನೆಗೆ ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.
ತ್ರಿವಳಿ ತಲಾಖ್ ಮಸೂದೆ ಮಂಡನೆಯಿಂದ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ. ತ್ರಿವಳಿ ತಲಾಖ್ ಜಾರಿಯಿಂದ ಅಶಿಕ್ಷಕರಾಗಿರುವ ನಮ್ಮ ಸಮಾಜವು ಮತ್ತಷ್ಟು ತೊಂದರೆಗೆ ಒಳಗಾಗುತ್ತದೆ. ಮುಸ್ಲಿಂ ಮುದಾಯದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಸದಸ್ಯ ಶಿವಾಜಿ ಕಾಶಿ, ಮಲ್ಲಿಕಾರ್ಜುನ ಬಮ್ಮನಳ್ಳಿ, ಬಾಬು ಕಾಶಿ, ಜಿಲ್ಲಾ ಹೆಲ್ಪಲೈನ್ ಅಧ್ಯಕ್ಷ ಇಬ್ರಾಹಿಂ ಮಾತನಾಡಿದರು. ನಂತರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಮಲ್ಲೇಶಾ ತಂಗಾ ಅವರಿಗೆ ಸಲ್ಲಿಸಿದರು.
ಪುರಸಭೆ ಉಪಾಧ್ಯಕ್ಷ ಮಹ್ಮದ ರಸೂಲ್ ಮಸ್ತಫಾ, ಪುರಸಭೆ ಸದಸ್ಯರಾದ ಶಿವಕಾಂತ ಬೆಣ್ಣೂರಕರ್, ಜಫರುಲ್ ಹಸನ್, ಎಂ.ಎ. ರಶೀದ, ಶೇಖ ಬಬ್ಲೂ, ಡಾ| ಅಬ್ದುಲ್ ಕರೀಂ, ಫಾರೂಕ್ ಡಕಾರೆ, ರಶೀದ್ ಫಠಾಣ, ಅಯ್ಯುಬ್ ಕೇಬಲ್, ಎಂ.ಡಿ. ವಸೀಂಖಾನ್, ರಫಿಕ್ ಲಿಂಕ್, ಮಹ್ಮದ್ ಮೋಸಿನ್, ಮಹ್ಮದ ಇಬ್ರಾಹಿಂ ಶೇಖ್, ನಜೀರ್ ಆಡಕಿ, ಸಲೀಂ ಇಟಗಾ, ಭೀಮರಾಯ ಹೊತಿನಮಡಿ, ಅಷ್ಪಾಕ್ ಅಹ್ಮದ, ಅಜುಂ ಖಾಜಿ, ಎಂ.ಎ ಕಲೀಂ, ಮುಸ್ತಾಕ್ ಮೌಲಾನಾ, ಯಾಸಿನ್ ಮೌಲಾನಾ, ವಾಹಬ್ ಮೌಲಾನಾ ಇದ್ದರು.