Advertisement
ರಾಜ್ಯದಲ್ಲಿ ವರ್ಷಕ್ಕೆ 45 ದಶಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. 35 ದಶಲಕ್ಷ ಟನ್ ಮರಳು ಪೂರೈಕೆಯಾಗುತ್ತಿದ್ದು, ವ್ಯತ್ಯಾಸ ಸರಿತೂಗಿಸಲು ಎಂ ಸ್ಯಾಂಡ್‌ಗೆ ಉತ್ತೇಜನ ನೀಡಲಾಗುವುದು.ಕಾನೂನಿನ ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್ ಸ್ಥಾಪನೆಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮರಳು ಬ್ಲಾಕ್‌ಗಳಿಂದ ಮರಳು ತೆಗೆದು ಮಾರಾಟ ಮಾಡಲು ಹಟ್ಟಿ ಮೈನ್ಸ್‌ಗೆ 15 ಜಿಲ್ಲೆ ಹಾಗೂ ಮಿನರಲ್ಸ್ ಕಾರ್ಪೊರೇಷನ್‌ಗೆ 16 ಜಿಲ್ಲೆಗಳ ಹೊಣೆಗಾರಿಕೆ ವಹಿಸಲಾಗಿದೆ. ಪ್ರತೀಟನ್ ಮರಳು 800 ರೂಪಾಯಿಗೆ ಸಿಗುವಂತೆ ಮಾಡಲಾಗುತ್ತಿದೆ. ಮುಂದಿನ ಬೇಸಗೆ ವೇಳೆಗೆ ಮರಳು ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಯಾಗುತ್ತದೆ ಎಂದು ಹೇಳಿದರು.
Related Articles
ಗ್ರಾಮೀಣ ಭಾಗದಲ್ಲಿ ಸ್ಥಳೀಯವಾಗಿ ಸಿಗುವ ಮರಳು ಟನ್‌ಗೆ 300 ರೂ.ನಂತೆ ಮಾರಾಟ ಮಾಡಲು ಅನುಮತಿ ನೀಡಲು ಪಂಚಾಯತ್‌ಗಳಿಗೆ ಅಧಿಕಾರ ನೀಡಲಾಗಿದೆ. ಕೆಲವೊಂದು ಅಡೆತಡೆಗಳ ಬಗ್ಗೆ ದೂರುಗಳಿದ್ದು, ಯಾವುದೇ ತೊಂದರೆ ನೀಡದಂತೆ ಸೂಚನೆ ನೀಡಲಾಗುವುದು. ರಾಜ್ಯದಲ್ಲಿ ಗಣಿಗಾರಿಕೆ ಸಂಬಂಧ ಕೇಂದ್ರ ಸರಕಾರ 27 ಬ್ಲಾಕ್‌ಗಳಿಗೆ ಅನುಮತಿ ನೀಡಿದ್ದು, ಈಗಾಗಲೇ 12 ಬ್ಲಾಕ್ ಹರಾಜು ಯಶಸ್ವಿಯಾಗಿ ಮಾಡಲಾಗಿದೆ. ಉಳಿದ ಬ್ಲಾಕ್‌ಗಳಿಗೆ ಮರು ಹರಾಜು ಪ್ರಕ್ರಿಯೆ ಸದ್ಯದಲ್ಲೇ ಪ್ರಾರಂಭಿಸಲಾಗುವುದು ಎಂದು ಹಾಲಪ್ಪ ಆಚಾರ್ ಅವರು ಹೇಳಿದರು.
Advertisement
6308.31 ಕೋಟಿ ರೂ. ಸಂಗ್ರಹಗಣಿಗಾರಿಕೆಯಿಂದ 2021-22 ನೇ ಸಾಲಿನಲ್ಲಿ 4,357 ಕೋಟಿ ರೂ. ರಾಜಧನ ಸಂಗ್ರಹದ ಗುರಿಯಿದ್ದು, ಶೇ. 145ರಷ್ಟು ಅಂದರೆ 6308.31 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಸೋರಿಕೆ ತಡೆಗಟ್ಟಿ ಎಲ್ಲವನ್ನೂ ಕಾನೂನು ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದರು.