ಕ್ರೈಸ್ಟ್ ಚರ್ಚ್: ಮಾನಸಿಕ ಆರೋಗ್ಯ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ಧಿಷ್ಟಾವಧಿಗೆ ಬೆನ್ ಸ್ಟೋಕ್ಸ್ ಬಿಡುವು ಪಡೆದ ಕೆಲವೇ ದಿನಗಳ ಬಳಿಕ ಅಂತಹದೇ ಘಟನೆ ನಡೆದಿದೆ. ಈ ಬಾರಿ ನ್ಯೂಜಿಲ್ಯಾಂಡ್ ತಂಡದ ಮಹಿಳಾ ಕ್ರಿಕೆಟರ್ ಅಮೆಲಿಯಾ ಕೆರ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಸೆಪ್ಟೆಂಬರ್ 2ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಸರಣಿಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ಕಿವೀಸ್ ಆಲ್ ರೌಂಡರ್ ಹೇಳಿದ್ದಾರೆ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತದ ಪುರುಷರ ಹಾಕಿ ತಂಡ
ನಾನು ನ್ಯೂಜಿಲ್ಯಾಂಡ್ ದೇಶದ ಪರವಾಗಿ ಆಡಲು ತುಂಬಾ ಇಷ್ಟಪಡುತ್ತೇನೆ. ಆದರೆ ಇದೀಗ ನನ್ನ ಮಾನಸಿಕ ಆರೋಗ್ಯದ ಸುಧಾರಣೆ ಬಹುಮುಖ್ಯ. ಹಾಗಾಗಿ ಆತ್ಮೀಯರ ಸಲಹೆಯನ್ನು ಪಡೆದು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ಅಮೆಲಿಯಾ ಹೇಳಿದ್ದಾರೆ.
ಕ್ರಿಕೆಟಿಗರು ಕೋವಿಡ್ ಕಾಲದಲ್ಲಿ ಬಯೋ ಬಬಲ್ ನಲ್ಲಿ ಹೆಚ್ಚಿನ ಕಾಲ ಕಳೆಯುವ ಕಾರಣ ಮಾನಸಿಕವಾಗಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಕಳೆದ ವಾರವಷ್ಟೇ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ಧಿಷ್ಟಾವಧಿ ಬ್ರೇಕ್ ಪಡೆದಿದ್ದರು.
ಇಂಗ್ಲೆಂಡ್ ನಲ್ಲಿ ನ್ಯೂಜಿಲ್ಯಾಂಡ್ ವನಿತಾ ತಂಡ ಮೂರು ಟಿ ಟ್ವೆಂಟಿ ಪಂದ್ಯಗಳ ಸರಣಿ ಮತ್ತು ಐದು ಏಕದಿನ ಪಂದ್ಯಗಳ ಸರಣಿ ಆಡಲಿದೆ.