Advertisement
ನಂತರ ಮಾತನಾಡುದ ಅವರು, ಆಂಬ್ಯುಲೆನ್ಸ್ ಸೇವೆಯಿಂದ ನಗರದ ಓಲ್ಡ್ ಸಿಟಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಯಲ್ಲಿ ಕೆಕೆಆರ್‌ಡಿಬಿ ಶಾಸಕರ 2 ಕೋಟಿ ರೂ. ಅನುದಾನದಡಿ ಆಂಬ್ಯುಲೆನ್ಸ್, ಆಮ್ಲಜನಕ ಸಹಿತ ಹಾಸಿಗೆ, ಎಕ್ಸ್‌ರೇ, ಡಿಜಿಟಲ್ ಎಕ್ಸ್‌ರೇ ಯಂತ್ರ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣ ಅಳವಡಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
ಶಾಸಕ ರಹೀಂಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸಿದರು. ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ಶಹಾಗಂಜ್ ಕಮಾನ್, ಗವಾನ್ ಚೌಕ್, ಚೌಬಾರಾ, ಸರ್ಕಾರಿ ಪ್ರೌಢಶಾಲೆ, ಸಿದ್ದಿ ತಾಲೀಂ, ನಯಾ ಕಮಾನ್, ವಿದ್ಯಾನಗರ- ಚಿದ್ರಿ ರಸ್ತೆ, ಹಳೇ ಆದರ್ಶ ಕಾಲೋನಿ ರಸ್ತೆ, ಗುಂಪಾ ರಿಂಗ್ ರಸ್ತೆ ಸೇರಿದಂತೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದರು.
ಹಾಳಾದ ರಸ್ತೆ ದುರಸ್ತಿಪಡಿಸಬೇಕು. ಚರಂಡಿಗಳು ತುಂಬಿಕೊಳ್ಳುತ್ತಿರುವ ಕಾರಣ ಬೃಹತ್ ಚರಂಡಿ ನಿರ್ಮಿಸಬೇಕು. ಕಾಲಕಾಲಕ್ಕೆ ಚರಂಡಿ ಶುಚಿಗೊಳಿಸಬೇಕು. ಕಾಲೋನಿಗಳಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ಅನೇಕರು ಮನವಿ ಮಾಡಿದರು.
ನಗರದಲ್ಲಿ ಚರಂಡಿ ಸಮಸ್ಯೆ ಇರುವ ಕಡೆಗಳಲ್ಲಿ ನಗರೋತ್ಥಾನ ಯೋಜನೆ ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ಬೃಹತ್ ಚರಂಡಿ ನಿರ್ಮಿಸಲಾಗುವುದು. ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ರಹೀಂ ಖಾನ್ ಭರವಸೆ ನೀಡಿದರು.
ಚರಂಡಿ ಸ್ವಚ್ಛತೆ, ನಗರ ನೈರ್ಮಲ್ಯಕ್ಕೆ ಕ್ರಮ ಕೈಗೊಳ್ಳಲು ಪೌರಾಯುಕ್ತರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಹಮ್ಮದ್ ಗೌಸ್, ಅಬ್ದುಲ್ ಅಜಿಜ್ ಮುನ್ನಾ, ಶೌಕತ್ ಅಲಿ, ಡಿಯುಡಿಸಿ ಪಿಡಿ, ಪೌರಾಯುಕ್ತ ಹಾಗೂ ಅಧಿಕಾರಿಗಳು ಇದ್ದರು.