ದೇವದುರ್ಗ: ಗ್ರಾಮೀಣ ಭಾಗದ ಬಡರೋಗಿಗಳಿಗೆ ಸಕಾಲಕ್ಕೆ ಉತ್ತಮ ಆರೋಗ್ಯ ಸೇವೆ ಸಿಗುವ ನಿಟ್ಟಿನಲ್ಲಿ ಆಸ್ಪತ್ರೆ ಆಂಬ್ಯುಲೆನ್ಸ್ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಹೇಳಿದರು.
ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಆವರಣದಲ್ಲಿ ಎಂಎಲ್ಸಿ ಅನುದಾನದಲ್ಲಿ ನೂತನ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿರವಾರ ತಾಲೂಕಿನ ಸರ್ಕಾರಿ ಆಸ್ಪತ್ರೆಯೊಂದು ಆಂಬ್ಯುಲೆನ್ಸ್ ನೀಡಲಾಗಿದೆ. ಅಧಿಕಾರ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲಾಗಿದೆ. ಜ.4ರಂದು ಅಧಿಕಾರ ಅವಧಿ ಮುಗಿಯಲ್ಲಿದ್ದು, ಜನರ ಸೇವೆ ಮಾಡಿರುವ ತೃಪ್ತಿ ನನಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ ಜನಪರ ಹಲವು ಯೋಜನೆಗಳು ಜಾರಿಗೆ ತರಲಾಗಿದೆ. ಬದಲಾದ ಸರಕಾರದಿಂದ ಉತ್ತಮ ಯೋಜನೆಗಳು ಅನುಷ್ಠಾನದಲ್ಲಿ ವಿಳಂಬವಾಗಿವೆ. ರಾಜ್ಯದಲ್ಲಿ ಅಭಿವೃದ್ಧಿ ಉತ್ತಮ ಆಡಳಿತ ಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಆರ್‌ಡಿಡಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ಪುರಸಭೆ ಅಧ್ಯಕ್ಷ ಹನುಮಗೌಡ ಶಂಕರಬಂಡಿ, ಪಿಆರ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಗುಂಡುಗುರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ರಂಗಪ್ಪ ಗೋಸಲ್, ಮಾನಪ್ಪ ಮೇಸ್ತ್ರಿ, ಶರಣಗೌಡ ಗೌರಂಪೇಟೆ, ಖಾಜಾಹುಸೇನ್, ಶಿವಪ್ಪ ಮಜ್ಜಿಗಿ, ಚಂದ್ರಕಾಂತ್ ಬಿಲ್ಲವ್, ವೆಂಕಟೇಶ ಮಕ್ತಾಲ್ ಹಾಗೂ ಸಾಜೀದ್, ಅಜೀಮ್, ಮುನೀರ್ ಪಾಷ್ ಇದ್ದರು.