ಚಿಕ್ಕಬಳ್ಳಾಪುರ: ಜನರ ಆರೋಗ್ಯ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್ ಮಾದರಿಯಲ್ಲಿಯೇ ರಾಜ್ಯದಲ್ಲಿ ಪಶುಗಳ ಆರೋಗ್ಯ ರಕ್ಷಣೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಆ್ಯಂಬುಲೆನ್ಸ್‌ನ್ನು ಪ್ರತಿ ಜಿಲ್ಲೆಗೊಂದರಂತೆ ಶೀಘ್ರವೇ ಒದಗಿಸಲಾಗುವುದು ಎಂದು ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.
ನಗರದ ಹೊರ ವಲಯದ ನಂದಿ ಕ್ರಾಸ್ ನಲ್ಲಿರುವ ಮೆಗಾ ಡೇರಿಗೆ ಮಂಗಳವಾರ ಆಗಮಿಸಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡಿ, ಕೋವಿಡ್-19 ಸಲುವಾಗಿ ಪಶು ಆ್ಯಂಬು ಲೆನ್ಸ್ ಸೇವೆ ಆರಂಭಕ್ಕೆ ಅಡಚಣೆ ಉಂಟಾ ಗಿದ್ದು, ಸದ್ಯದಲ್ಲೇ ಈ ಹೊಸ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.
ಅಕ್ರಮ ನಡೆದಿಲ್ಲ: ಕೋವಿಡ್-19 ವಿಚಾರದಲ್ಲಿ ವೈದ್ಯಕೀಯ ಪರಿಕರಗಳ ಖàರಿದಿ ಯಲ್ಲಿ ಅಕ್ರಮ ಆಗಿದೆಯೆಂಬ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಹುರು ಳಿಲ್ಲ. ಯಾವುದೇ ಆಕ್ರಮ ಆಗಿಲ್ಲ. ಆಗಿದ್ದರೆ ತನಿಖೆ ನಡೆಸಲು ಸಿದರಿದ್ದೇವೆ ಎಂದರು. ರಾಜ್ಯದ ಹಲವೆಡೆ ಪಶುಗಳಿಗೆ ಕಾಲುಬಾಯಿ ಕಾಣಿಸಿಕೊಂಡಿರುವುದರಿಂದ ಕಾಲುಬಾಯಿ ಜ್ವರದ ಲಸಿಕೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.
ಪಶು ಸಂಪತ್ತು ರಕ್ಷಿಸಬೇಕು ಎಂಬುದು ಪ್ರಧಾನಿ ಮೋದಿ ಅವರ ಸಂಕಲ್ಪ ಎದರು. ವಕ್ಫ್ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಈ ಹಿಂದೆ ಅನ್ವರ್ ಮಾನ್ಪಡಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸಿ ವಕ್ಫ್ ಆಸ್ತಿ ಸಂರಕ್ಷಿಸಲಾಗುವುದು ಎಂದರು.
ಪ್ರತ್ಯೇಕ ಡೇರಿ ವಿಚಾರ ಗಮನಕ್ಕೆ ಬಂದಿಲ್ಲ: ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 13 ವರ್ಷ ಕಳೆಯುತ್ತಾ ಬಂದರೂ ಜಿಲ್ಲೆಗೆ ಪ್ರತ್ಯೇಕ ಡೇರಿ ಸ್ಥಾಪನೆ ಆಗಿಲ್ಲ. ಪ್ರತ್ಯೇಕ ಡೇರಿ ಸ್ಥಾಪನೆ ಮಾಡುವ ಬಗ್ಗೆ ನಿಮ್ಮ ಇಲಾಖೆಗೆ ಪ್ರಸ್ತಾವನೆ ಬಂದಿದೆಯಾ ಎಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಬೀದರ್ ಜಿಲ್ಲಾ ಮಂತ್ರಿ. ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ರಾಜ್ಯದಲ್ಲಿ ದಿನೇ ದಿನೆ ಕೋವಿಡ್ 19 ಹೆಚ್ಚಾಗುತ್ತಿದೆ. ಲಾಕ್‌ಡೌನ್ ಮಾಡಲು ಆಗಲ್ಲ. ನಮ್ಮ ಜೀವ ನಮ್ಮ ಕೈಯಲ್ಲಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಬೇಕು.
-ಪ್ರಭು ಬಿ.ಚವ್ಹಾಣ್, ಪಶು ಸಂಗೋಪನಾ ಸಚಿವ