Advertisement

ಮಹತ್ವಾಕಾಂಕ್ಷೆಯ ಅಜಿತ್‌ ಪವಾರ್‌

09:11 AM Jul 04, 2023 | Team Udayavani |

ಅಜಿತ್‌ ಅನಂತ ರಾವ್‌ ಪವಾರ್‌ ಹೀಗೆಂದರೆ ಯಾರು ಎಂದು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಆದರೆ ಅಜಿತ್‌ ಪವಾರ್‌ ಎಂದರೆ “ನಾಲ್ಕು ಬಾರಿ ಮಹಾರಾಷ್ಟ್ರ ಡಿಸಿಎಂ ಆಗಿದ್ದವರು’ ಎಂದು ಗುರುತಿಸಿಕೊಳ್ಳುತ್ತಾರೆ. ಮಹಾರಾಷ್ಟ್ರದ ರಾಜಕೀಯ, ಅಷ್ಟೇ ಏಕೆ ಈಗ ದೇಶಾದ್ಯಂತ ಸುದ್ದಿಯಲ್ಲಿ ಇರುವವರು. ಮಹಾರಾಷ್ಟ್ರದ ರಾಜಕೀಯ ಭೀಷ್ಮ ಶರದ್‌ ಪವಾರ್‌ ಅವರ ಅಣ್ಣ ಅನಂತ ರಾವ್‌ ಪವಾರ್‌ ಪುತ್ರನೇ ಅಜಿತ್‌ ಪವಾರ್‌. ಶರದ್‌ ಪವಾರ್‌ ಸ್ಥಾಪಿಸಿದ ಎನ್‌ಸಿಪಿಯ ಪ್ರಮುಖ ನೇತಾರರಾಗಿ ಗುರುತಿಸಿ ಕೊಂಡವರು. ಇತ್ತೀಚೆಗೆ ಶರದ್‌ ಅವರು ಪುತ್ರಿ ಸುಪ್ರಿಯಾ ಸುಳೆ, ರಾಜ್ಯಸಭಾ ಸದಸ್ಯ ಪ್ರಫ‌ುಲ್‌ ಪಟೇಲ್‌ ಅವರನ್ನು ಕಾರ್ಯಾಧ್ಯಕ್ಷ ರನ್ನಾಗಿ ನೇಮಿಸಿದ್ದ ಸಂದರ್ಭದಲ್ಲಿ ಮುನಿಸಿಕೊಂಡು ಸಭೆಯಿಂದ ಹೊರ ನಡೆದಿದ್ದರು ಎಂಬ ವರ್ತಮಾನಗಳಿವೆ.

Advertisement

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಇತರ ಹಿಂದುಳಿಗ ವರ್ಗ (ಒಬಿಸಿ)ಕ್ಕೆ ಸೇರಿದ ಅಜಿತ್‌ ಪವಾರ್‌ ಅವರಿಗೆ ರಾಜ ಕೀಯ ವಾಗಿ ಮಹತ್ವಾಕಾಂಕ್ಷೆಗಳು ಇವೆ ಎನ್ನುವುದು ಬಹಿರಂಗ ಸತ್ಯ. ಹೇಳಿ ಕೇಳಿ ಮಹಾರಾಷ್ಟ್ರದಲ್ಲಿ ಸಹಕಾರ ಕ್ಷೇತ್ರ ಎಲ್ಲ ರೀತಿಯಲ್ಲಿ ಕೂಡ ಸಕ್ರಿಯವಾಗಿದೆ. ಅಜಿತ್‌ ಪವಾರ್‌ 1982ರಲ್ಲಿ ಸಹಕಾರ ಕ್ಷೇತ್ರ ಮೂಲಕ ನಿರ್ವಹಿಸುತ್ತಿದ್ದ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಪ್ರವೇಶಿಸಿ ರಾಜಕೀಯಕ್ಕೆ ಬಂದಿದ್ದರು.
ಸ್ವಾತಂತ್ರಾé ಅನಂತರದ ಮಹಾರಾಷ್ಟ್ರದ ಇದುವರೆಗಿನ ರಾಜ ಕೀಯ ಇತಿಹಾಸ ನೋಡಿದಾಗ ಐದನೇ ಬಾರಿ ಡಿಸಿಎಂ ಆದ ಮುಖಂಡರು ಇಲ್ಲ. 2010 ನ.11ರಿಂದ 2012 ಸೆ.25, 2012 ಡಿ.7ರಿಂದ 2014 ಸೆ.28 2019, ನ.23ರಿಂದ 2019 ನ.26, 2019 ಡಿ.30ರಿಂದ 2022 ಜೂ.29 ಮತ್ತು 2023 ಜು.2ರಿಂದ ಅಜಿತ್‌ ಪವಾರ್‌ ಸಾಂವಿಧಾನಿಕವಾಗಿ ಯಾವುದೇ ಮಹತ್ವ ಹೊಂದಿ ಲ್ಲದ, ಆದರೆ ರಾಜಕೀಯವಾಗಿ ಪ್ರಭಾವಯುತವಾಗಿ ರುವ ಉಪ ಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಏರಿಕೊಂಡಿ ದ್ದಾರೆ. 2019ರಲ್ಲಿ ಬಾರಾಮತಿ ಕ್ಷೇತ್ರದಿಂದ ವಿಧಾನಭೆಗೆ ಸ್ಪರ್ಧಿಸಿದ್ದ ಅಜಿತ್‌ ಅವರು ಮಹಾರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ಮತಗಳ ಅಂತರಿಂದ ಅಂದರೆ 1,66,000 ಮತಗಳ ಅಂತರ ದಿಂದ ಜಯಸಾಧಿಸಿದ್ದರು. 2019ರ ನವೆಂಬರ್‌ನಲ್ಲಿ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಅನುಮತಿ ಇಲ್ಲದೆ ಬಿಜೆಪಿಯ ಜತೆ ಸೇರಿ, ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಸಂದರ್ಭದಲ್ಲಿ ಅವರು ಕೇವಲ ಮೂರು ದಿನಗಳಿಗೆ ಹುದ್ದೆಯಲ್ಲಿದ್ದರು.

ಅವರ ಹೆಗ್ಗಳಿಕೆಯೋ ಅದೃಷ್ಟವೋ ಗೊತ್ತಿಲ್ಲ. ಕಾಂಗ್ರೆಸ್‌, ಬಿಜೆಪಿ, ಶಿವಸೇನೆ ನೇತೃತ್ವದ ಯಾವುದೇ ಮೈತ್ರಿ ಸರಕಾರ ಬರಲಿ 2010ರ ಬಳಿಕ ಅವರು ಅಧಿಕಾರದಲ್ಲಿ ಇದ್ದರು ಎನ್ನುವುದು ಕುತೂಹಲಕಾರಿ ವಿಚಾರವೂ ಹೌದು. ಒಂದಂತೂ ನಿಜ. ಚಿಕ್ಕಪ್ಪ ಶರದ್‌ ಪವಾರ್‌ ಕೈ ಬೆರಳುಗಳನ್ನು ಹಿಡಿದು ರಾಜಕೀಯದಲ್ಲಿ ಪುಟ್ಟ ಹೆಜ್ಜೆಗಳನ್ನು ಇರಿಸಿಕೊಂಡು ಬಂದ ಅಜಿತ್‌ ಈಗ ಆ ರಾಜ್ಯದ ರಾಜಕೀಯದಲ್ಲಿ ವ್ಯಾಪಕವಾಗಿ ಬೆಳೆದಿದ್ದಾರೆ ಎನ್ನುವುದು ಶರದ್‌ ಪವಾರ್‌ಗೂ ಗೊತ್ತು.

ಮಹಾರಾಷ್ಟ್ರ ಹಾಲಿ ಸಿಎಂ ಏಕನಾಥ ಶಿಂಧೆ ನೇತೃತ್ವದ ಗುಂಪು ಶಿವಸೇನೆಯನ್ನು ಒಡೆದು ಬಿಜೆಪಿ ಜತೆಗೆ ಮೈತ್ರಿ ಮಾಡಿ  ಕೊಂಡಿದ್ದನ್ನು ಪ್ರಶ್ನಿಸಿ ಸುಪ್ರೀಂì ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ಮೇಯಲ್ಲಿ ತೀರ್ಪು ಪ್ರಕಟ ಮಾಡುವುದಕ್ಕಿಂತ ಮೊದಲು ಅಜಿತ್‌ ತಮ್ಮ ಬಣದ ಶಾಸಕರ ಜತೆಗೆ ಬಿಜೆಪಿಗೆ ಸೇರ್ಪ ಡೆಯಾಗುತ್ತಾರೆ ಎನ್ನಲಾಗುತ್ತಿತ್ತು.

ಮೂಲಗಳ ಪ್ರಕಾರ 2020 ಜೂ.30ರಿಂದಲೇ ಇಂಥ ಒಂದು ಮಾಸ್ಟರ್‌ ಸ್ಟ್ರೋಕ್‌ ನೀಡುವ ಬಗ್ಗೆ ಅಜಿತ್‌ ಮನಸ್ಸಿ ನಲ್ಲಿಯೇ ಸೂತ್ರ ಸಿದ್ಧಪಡಿಸಿಟ್ಟುಕೊಂಡಿದ್ದರು. ಡಿಸಿಎಂ ದೇವೇಂದ್ರ ಫ‌ಡ್ನವೀಸ್‌, ಸಿಎಂ ಏಕನಾಥ ಶಿಂಧೆ ಜತೆಗೆ ಚರ್ಚಿಸಿದ್ದರು. ಕಳೆದ ತಿಂಗಳು ಮುಂಬಯಿಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ ನೀಡಿದ್ದ ವೇಳೆ ಅಜಿತ್‌ ಪವಾರ್‌ ಮಾತ್ರ ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಭೆ ಯಲ್ಲಿಯೇ ಕೋರಿಕೆ ಸಲ್ಲಿಸಿದ್ದರು. ಜತೆಗೆ ವಿಪಕ್ಷ ನಾಯಕ ಸ್ಥಾನ ದಿಂದ ಮುಕ್ತಿಗೊಳಿಸಿ. ಸಂಘಟನೆಯ ಹೊಣೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಮತ್ತೂಮ್ಮೆ ಡಿಸಿಎಂ ಆಗಿ, ತಮ್ಮ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next