Advertisement

ಅಂಬೇಡ್ಕರ್‌ ತತ್ವಾದರ್ಶ ಪಾಲಿಸಿ: ಶಾಸಕ ಮಹೇಶ್‌

10:27 PM May 19, 2019 | Lakshmi GovindaRaj |

ಕೊಳ್ಳೇಗಾಲ: ಗೌತಮ ಬುದ್ಧ ಹುಟ್ಟಿದ ಬುದ್ಧ ಪೂರ್ಣಿಮೆ ದಿನದಂದು ಡಾ.ಬಿ.ಆರ್‌.ಅಂಬೇಡ್ಕರ್‌ರ 128ನೇ ಜಯಂತಿ ಆಯೋಜನೆ ಮಾಡಲಾಗಿದ್ದು, ಅವರ ತತ್ವ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಶಾಸಕ ಎನ್‌.ಮಹೇಶ್‌ ತಿಳಿಸಿದರು.

Advertisement

ತಾಲೂಕಿನ ಹೊಂಡರಬಾಳು ವಿಶ್ವಜ್ಞಾನಿ ಭೀಮರಾವ್‌ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ರ 128ನೇ ಜಯಂತಿ ಹಾಗೂ ಬುದ್ಧ ಪೂರ್ಣಿಮೆ ಉದ್ಘಾಟಿಸಿ ಮಾತನಾಡಿದರು.

ಗೌತಮ ಬುದ್ಧ ಪೂರ್ಣಿಮೆ ದಿನದಂದು ಜನ್ಮ ತಾಳಿದರು. ಅದೇ ದಿನ ಅವರಿಗೆ ಜ್ಞಾನೋದಯವಾಯಿತು. ಇಹಲೋಕ ತ್ಯಜಿಸಿದ ದಿನವೇ ವೈಶಾಖ ಪೂರ್ಣಿಮೆ ದಿನದಂದು ಆಗಿದ್ದು, ಜಗತ್ತಿನಲ್ಲಿ ಈ ರೀತಿ ಏಕಕಾಲದಲ್ಲಿ ನಡೆದಿರುವುದು ಗೌತಮ ಬುದ್ಧರಿಗೆ ಮಾತ್ರ ಎಂದು ಹೇಳಿದರು.

ಆದರ್ಶ ಪಾಲಿಸಿ: ಹನೂರು ಶಾಸಕ ಆರ್‌.ನರೇಂದ್ರ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದಿರುವ ಪವಿತ್ರ ಸಂವಿಧಾನದ ಅಡಿಯಲ್ಲೇ ಗ್ರಾಪಂ ಸದಸ್ಯರಿಂದಲೂ ಸಂಸದರ ವರೆವಿಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಅವರ ಆದರ್ಶಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಬೇಸರಿಸಿದರು.

ಅಭಿನಂದಿಸುವೆ: ಬೇರೆ ಬೇರೆ ಗ್ರಾಮಗಳಲ್ಲಿ ಸಾಮಾನ್ಯವಾಗಿ ಅಂಬೇಡ್ಕರ್‌ ಸಂಘ ಎಂದು ಹೆಸರಿಸುತ್ತಾರೆ. ಆದರೆ ಹೊಂಡರಬಾಳು ಗ್ರಾಮದವರು ವಿಶ್ವಜ್ಞಾನಿ ಭೀಮರಾವ್‌ ಯುವಕ ಸಂಘ ಎಂದು ಹೆಸರಿಟ್ಟಿರುವುದರಿಂದ ಇಂತಹ ಹೆಸರನ್ನು ಕೇಳಿದರೆ ಮೈಎಲ್ಲಾ ರೋಮಾಂಚನವಾಗುತ್ತದೆ. ಇಂತಹ ಹೆಸರನ್ನು ಇಟ್ಟ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದರು.

Advertisement

ಎಲ್ಲಾ ಮಹನೀಯರ ಜಯಂತಿ ಆಚರಣೆ ಮಾಡಿ ಕುಣಿದು ಕುಪ್ಪಳಿಸಿ ಒಂದು ದಿನ ಕಾಲ ಕಳೆಯುತ್ತಾರೆ. ಮಹಾನಿಯರು ಸಾಧನೆ ಮಾಡಿರುವ ತತ್ವ ಆದರ್ಶ ಪಾಲಿಸುತ್ತಿಲ್ಲ. ಅವರ ಆದರ್ಶಗಳಲ್ಲಿ ಅಲ್ಪಸ್ವಲ್ಪವಾದರೂ ಪಾಲನೆ ಮಾಡಿದರೆ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಅವಶ್ಯಕ: ವಿಶ್ವಜ್ಞಾನಿ ಭೀಮರಾವ್‌ ಯುವಕ ಸಂಘದ ವತಿಯಿಂದ ವರ್ಷವೆಲ್ಲಾ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕಮ್ರಗಳನ್ನು ಹಮ್ಮಿಕೊಂಡು ಒಳ್ಳೆಯ ಮಾರ್ಗದರ್ಶನ ನೀಡುತ್ತಿರುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕ ಎಂದು ಹೇಳಿದರು.

ಚೆನ್ನಾಲಿಂಗನಹಳ್ಳಿ ಜೇತವನ ಬೌದ್ಧವಿಹಾರದ ಮನೋರಖೀತ ಬಂಜೇಜಿ, ತಾಪಂ ಸದಸ್ಯ ಗುಣಶೇಖರ, ಮುಖ್ಯ ಭಾಷಣಕಾರ ಕೃಷ್ಣಮೂರ್ತಿ, ಮುಖಂಡರಾದ ಚೆನ್ನರಾಜು, ಸಿದ್ದಪ್ಪಸ್ವಾಮಿ, ಚರಣ್‌ರಾಜ್‌, ಮಹೇಶ್‌, ಮೋಹನ್‌, ಸುಂದರಮ್ಮ, ಗೌರಮ್ಮ ಹರ್ಷ, ಗೀತಮ್ಮ, ಲೀಲಾವತಿ, ವರದಿಗಾರ ನಿಂಗರಾಜು, ಸಂಘದ ಅಧ್ಯಕ್ಷ ನಾಗೇಶ್‌, ಉಪಾಧ್ಯಕ್ಷ ಕುಮಾರ, ಕಾರ್ಯದರ್ಶಿ ಅಭಿಷೇಕ್‌, ಖಜಾಂಚಿ ಭಾಗ್ಯರಾಜ್‌, ಪ್ರಧಾನ ಕಾರ್ಯದರ್ಶಿ ಚೇತನ್‌ ಇದ್ದರು.

ಅಂಬೇಡ್ಕರ್‌ರ ಜಯಂತಿ ಮತ್ತು ಬುದ್ಧಪೂರ್ಣಿಮೆ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಎಲ್ಲರೂ ಮದ್ಯಸೇವನೆ ಬಿಡಬೇಕೆಂದು ಪ್ರಮಾಣ ಮಾಡಿದರೆ ಅಂಬೇಡ್ಕರ್‌ ಆಚರಣೆ ಮಾಡಿದಕ್ಕೂ ಸಾರ್ಥಕವಾಗುತ್ತದೆ. ಅಂಬೇಡ್ಕರ್‌ ಅನುಯಾಯಿಗಳು ಮದ್ಯಸೇವೆನ ಮಾಡಬಾರದು. ನಾವು ಏನನ್ನು ಕುಡಿಯುತ್ತೇವೆ ಅದು ನಮ್ಮ ದೇಹಕ್ಕೆ ಬೇಡವಾದದ್ದು. ಯಾರನ್ನು ದ್ವೇಷ ಮಾಡಬಾರದು. ಅಸೂಯೆ ಪಡುವುದು, ಅಸಮಾಧಾನಗಳು ಸೃಷ್ಟಿಯಾದಾಗ ಬಗೆಹರಿಸಿಕೊಳ್ಳೋಣ.
-ಎನ್‌.ಮಹೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next