Advertisement

520 ಗ್ರಾಮದಲ್ಲಿ ಅಂಬೇಡ್ಕರ್‌ ಜಯಂತಿ

12:02 PM Apr 12, 2021 | Team Udayavani |

ನೆಲಮಂಗಲ: ಪ್ರತಿ ತಾಲೂಕಿಗೆ 130ರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 520 ಗ್ರಾಮಗಳಲ್ಲಿ ಡಾ.ಬಿ. ಆರ್‌.ಅಂಬೇಡ್ಕರ್‌ 130ನೇ ಜನ್ಮ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್‌.ರಾಮ್‌ ತಿಳಿಸಿದರು.

Advertisement

ತಾಲೂಕಿನ ಡಾ.ಬಿಆರ್‌ ಅಂಬೇಡ್ಕರ್‌ ನಗರದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದಆಯೋಜಿಸಿದ್ದ 130ನೇ ಡಾ.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿಮಾತನಾಡಿ, ಪ್ರತಿ ತಾಲೂಕಿನಲ್ಲಿ 130ಗ್ರಾಮಗಳಲ್ಲಿ ಸರಳವಾಗಿ ಅಂಬೇಡ್ಕರ್‌ಜಯಂತಿ ಆಚರಣೆ ಮಾಡಲಾಗುತ್ತಿದೆ.ಈ ಮೂಲಕ “ಮಹಾನಾಯಕನ’ ಸೇವಯನ್ನು ನೆನೆಯಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ 1950 ಮತ್ತು 1952ರಲ್ಲಿದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್‌ ಅವರನ್ನು ಸೋಲಿಸಿತು, ಅವರ ಮರಣ ನಂತರ ನವದೆಹಲಿಯಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ, ಇದು ಕಾಂಗ್ರೆಸ್‌ ಕೊಡುಗೆ.ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್‌ಅವರ ಸೇವೆಗಾಗಿ ಪಂಚತೀರ್ಥ ಕ್ಷೇತ್ರಗಳನ್ನು ಮಾಡಿ, ಜನರ ಮನಸ್ಸಿನಲ್ಲಿ ಸಂವಿಧಾನ ಶಿಲ್ಪಿ ಸದಾ ನೆಲೆನಿಲ್ಲುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ತಾಲೂಕು ಕಾರ್ಯದರ್ಶಿ ರವಿಕುಮಾರ್‌, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೈಯದ್‌ ಅಹಮದ್‌,ನಗರ ಶಕ್ತಿಕೇಂದ್ರದ ಅಧ್ಯಕ್ಷ ರವಿ,ಮಾಧ್ಯಮ ಪ್ರಮುಖ್‌ ಸಿದ್ದರಾಜು, ನಗರಸಭೆ ನಾಮ ನಿರ್ದೇಶನ ಸದಸ್ಯೆರಾಜಮ್ಮ, ಯುವಮೋರ್ಚಾ ತಾಲೂಕುಅಧ್ಯಕ್ಷ ವಿಜಯಕುಮಾರ್‌, ಮುಖಂಡ ಮುನಿರಾಮಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next