ಬೇಲೂರು: ತಾಲೂಕಿನ ಹಳೇಬೀಡು ಹೋಬಳಿ ಪೊನ್ನಾಥಪುರ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ 131ನೇ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಇತ್ತೀಚೆಗೆ ಚರ್ಚೆಯಲ್ಲಿರುವ ವಿಷಯ ಪ್ರಸ್ತಾಪಿಸಿ ಜಿಲ್ಲೆಯಲ್ಲಿ ಗಂಗಾಧರ್ ಬಹುಜನ್ ಒಬ್ಬ ಪ್ರಾಮಾಣಿಕ ಹೋರಾಟಗಾರ.
ಪ್ರಗತಿಪರ ಚಿಂತಕರಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯ ನಾಯಕರಾದ ಇವರು ಈ ಹಿಂದೆ ಬೇಲೂರು ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಸಹ ಶೋಷಿತರು, ರೈತರು ಮತ್ತು ಮಹಿಳೆಯರ ಪರ ಹೋರಾಟ ಮುಂದುವರೆಸಿದ್ದಾರೆ. ಇವರಿಗೆ ಕ್ಷೇತ್ರದ ಸಮಸ್ಯೆ ಬಗ್ಗೆ ಆಳವಾದ ಅರಿವಿದೆ.
ಬೇಷರತ್ ಬೆಂಬಲಿಸುತ್ತೇನೆ: ದಲಿತ ಸಮುದಾಯಗಳ ಮತ ಸೆಳೆಯುವ ಸಲುವಾಗಿ ಬೇಲೂರು ಕ್ಷೇತ್ರದ ಹಾಲಿ ಶಾಸಕ ಕೆ.ಎಸ್. ಲಿಂಗೇಶ್ ಗಂಗಾಧರ್ ಬಹುಜನ್ ಅವರಿಗೆ ಓಟು ಕೊಟ್ಟು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಕೇವಲ ಅನುಕಂಪದ ಮಾತುಗಳನ್ನಾಡಿದರೆ ಸಾಲದು. ನಿಜವಾಗಿಯೂ ಈ ಕ್ಷೇತ್ರ ಶಾಸಕರಿಗೆ ಗಂಗಾಧರ್ ಬಗ್ಗೆ ಕಾಳಜಿ ಇದ್ದರೆ ಈ ಬಾರಿ ಚುನಾವಣೆ ಯಲ್ಲಿ ಶಾಸ ಕರು ಗಂಗಾಧರ್ ಬಹು ಜನ್ ವಿರುದ್ಧ ವಾಗಿ ಅಭ್ಯರ್ಥಿ ಹಾಕದೇ ಬೆಂಬಲಿಸುವುದಾದರೆ ನಾನೂ ಕೂಡ ಸ್ಪರ್ಧಿಸದೇ ಗಂಗಾಧರ್ ಅವರನ್ನು ಬೆಂಬಲಿಸಲು ಸಿದ್ಧ ಎಂದು ಸವಾಲು ಹಾಕಿದರು.
ಸ್ವ ಕ್ಷೇತ್ರದವರನ್ನೇ ಕೈ ಹಿಡಿಯಿರಿ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೇಲೂರು ಕ್ಷೇತ್ರದ ಶಾಸಕರಾದ ಲಿಂಗೇಶ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾ ಡುತ್ತಾ ಮುಂದಿನ ಚುನಾವಣೆಯಲ್ಲಿ ನನ್ನ ಕೆಲಸ ನೋಡಿ ನನಗೆ ಮತಕೊಡಿ. ಇಲ್ಲವಾದರೆ ಗಂಗಾಧರ್ ಬಹುಜನ್ ಸ್ಥಳೀಯರಾಗಿದ್ದಾರೆ. ಮತ್ತು ಸದಾಕಾಲ ಜನರ ಸಮಸ್ಯೆ ಪರಿಹಾರಕ್ಕಾಗಿ ಟೊಂಕಕಟ್ಟಿ ನಿಂತಿರುವ ಹೋರಾಟಗಾರ. ಇವರಿಗೆ ಓಟು ಕೊಟ್ಟು ಗೆಲ್ಲಿಸಿ ಬೇಲೂರು ಕ್ಷೇತ್ರ ದಲ್ಲಿ ಶಾಸಕರಾಗಿ ಮಾಡೋಣ. ಯಾವುದೇ ಕಾರಣಕ್ಕೂ ಬೇರೆ ಕ್ಷೇತ್ರದಿಂದ ಬರುವ ಅಭ್ಯರ್ಥಿಗಳಿಗೆ ಮಣೆ ಹಾಕು ವುದು ಬೇಡ ಎಂದು ಹೇಳಿದರು.
ಶಾಸಕರಿಗೆ ಸುರೇಶ್ ಸವಾಲು: ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ತಾಲೂಕು ಮತ್ತು ಜಿಲ್ಲೆಯಾ ದ್ಯಂತ ಸಾಕಷ್ಟು ಚರ್ಚೆ ಆಗುತ್ತಿರುವ ಹಿನ್ನೆಲೆ ಹುಲ್ಲಳ್ಳಿ ಸುರೇಶ್ ಈ ಸವಾಲು ಹಾಕಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಗಂಗಾಧರ್ ಬಹುಜನ್ ಅವರು ಅಂಬೇಡ್ಕರ್ ಅವರ ಬಗ್ಗೆ ಉಪನ್ಯಾಸ ನೀಡಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ಕೊರಟಗೆರೆ ಪ್ರಕಾಶ್, ಸಂತೋಷ್ ಕೆಂಚಾಂಬ, ಎನ್.ಯೋಗೇಶ್, ಮಲ್ಲಿಕಾರ್ಜುನ, ಪತ್ರಕರ್ತರಾದ ದಿನೇಶ್ ಬೆಳ್ಳಾವರ, ಶಿಕ್ಷಕರಾದ ಹುಲಿಯಪ್ಪ, ಮಲ್ಲೇಶ್, ಮುಖಂಡರಾದ ಯೋಗೇಶ್, ಕೇಶವಯ್ಯ, ಮಂಜುನಾಥ್, ಯತೀಶ್, ಟೈ ಕುಮಾರ್ ಸೇರಿದಂತೆ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.