Advertisement

ಹಿಂದುಳಿದವರ ಆಶಾಕಿರಣ ಅಂಬೇಡ್ಕರ್ 

04:02 PM Apr 15, 2018 | Team Udayavani |

ಬಾಗಲಕೋಟೆ: ಸಂವಿಧಾನ ಬರುವ ಪೂರ್ವದಲ್ಲಿ ನಮ್ಮ ಜನತೆ ದೇವರ ಹಾಗೂ ಧರ್ಮ ಗ್ರಂಥಗಳ ಮೊರೆಗುತ್ತಿದ್ದು, ಆ ಸಮಯದಲ್ಲಿ ಅನೇಕ ಬಾರಿ ಸತ್ಯಕ್ಕೆ ಸೋಲಾದುದು ಉಂಟು. ಸಂವಿಧಾನ ರಚನೆಯಾದ ನಂತರ ಅಂಬೇಡ್ಕರ್‌ ಅವರು ತುಳಿತಕ್ಕೊಳಗಾದವರ ಆಶಾಕಿರಣವಾದರು ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಜಿ.ಪಂ ಸಭಾಭವನದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 127ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಮಾತನಾಡಿದರು.

ಬುದ್ದ, ಬಸವ ಧರ್ಮ ಸಂಸ್ಥಾಪನೆ ಮಾಡಿದರೆ, ಅಂಬೇಡ್ಕರ್‌ ಸಂವಿಧಾನ ರಚಿಸಿ ಅವರ ಸರಿಸಮಾನರಾಗಿದ್ದು, ಇದು ಆಧುನಿಕ ಭಾರತದ ಧರ್ಮ ಗ್ರಂಥ ಎಂದರೆ ತಪ್ಪಾಗಲಾರದು ಎಂದರು.

ಸಂವಿಧಾನ ಸಮಗ್ರ ವಿಷಯಗಳ ನಿರ್ದೇಶನ ನೀಡುವ ಮಾರ್ಗಸೂಚಿಯಾಗಿದ್ದು ಇದರ ರಚನೆಯಲ್ಲಿ ಅಂಬೇಡ್ಕರ್‌ ಅವರಿಗಿದ್ದ ಪ್ರಭುತ್ವತೆ ಎತ್ತಿ ತೋರಿಸುತ್ತದೆ. ಅಂಬೇಡ್ಕರ್‌ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು, ದೇಶ-ವಿದೇಶಗಳಲ್ಲಿಯ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಬೇಕಾಗುವಂತ ಸಂವಿಧಾನ ರಚಿಸಿದ್ದಾರೆ. ಅವರು ರಚಿಸಿದ ಸಂವಿಧಾನ ಹಿಂದಿನ, ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಮಾರ್ಗಸೂಚಿಯಾಗಿದೆ. 70 ವರ್ಷಗಳ ಹಿಂದೆ ರಚಿತವಾದ ಈ ಸಂವಿಧಾನ ಅದ್ಬುತವಾದ ನೆಲೆಗಟ್ಟನ್ನು ಹೊಂದಿದೆ ಎಂದರು.

ಪ್ರೊ.ಮಹಾಲಿಂಗ ಉಪನ್ಯಾಸ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಜಿ.ಪಂ ಸಿಇಒ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಮುಂತಾದವರು ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿ.ವಿ.ಚೆ„ತ್ರಾ ಸ್ವಾಗತಿಸಿದರು. ಬಿ.ಜಿ.ನಿಂಗಪ್ಪನವರ ನಿರೂಪಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ಹಳೆಯ ಬಾಗಲಕೋಟೆಯಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ ಅವರ ಪುತ್ಥಳಿಗೆ ಪುಷ್ಪ ಮಾಲಾರ್ಪಣೆ ಮಾಡಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next