Advertisement

ಬಹುದಿನಗಳ ಬೇಡಿಕೆ ಈಡೇರಿಕೆ

05:46 PM Apr 13, 2022 | Team Udayavani |

ಗುಡಿಬಂಡೆ: ಪ್ರಗತಿ ಪರ ಸಂಘಟನೆಗಳ ಬಹು ದಿನಗಳ ಬೇಡಿಕೆಯಾದ ಅಂಬೇಡ್ಕರ್‌ ಭವನಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್‌.ಲತಾ ಗುಡಿಬಂಡೆ ಗ್ರಾಮದ ಸರ್ವೆ ನಂ. 250ರಲ್ಲಿ 30 ಗುಂಟೆ ಜಮೀನು ಸ್ವತ್ತನ್ನು ಕಾಯ್ದಿರಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

Advertisement

ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್‌ ಭವನಕ್ಕಾಗಿ ಜಾಗ ಗುರುತಿಸಿಕೊಡುವಂತೆ ಹಲವು ವರ್ಷಗಳಿಂದ ತಾಲೂಕಿನ ಜನತೆಯ ಬೇಡಿಕೆಯಾಗಿದ್ದು, ಆ ಕೂಗಿಗೆ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ನೇತೃತ್ವದಲ್ಲಿ ಒತ್ತಾಯ ಕೇಳಿಬಂದು, ಕೊನೆಗೂ ತಹಶೀಲ್ದಾರ್‌ ಸಿಗ್ಬತುಲ್ಲಾ ಗುಡಿಬಂಡೆಯಲ್ಲಿ 30 ಗುಂಟೆ ಜಮೀನು ಗುರುತಿಸಿ, ಮಂಜೂರಾತಿಗಾಗಿ ಕಡತ ಸಿದ್ಧಪಡಿಸಿ ಜಿಲ್ಲಾಧಿ ಕಾರಿಗಳಿಗೆ ಸಲ್ಲಿಸಿದ್ದರು.

ಕಡತವನ್ನು ಪರಿಶೀಲಿಸಿ ಜಮೀನಿನಲ್ಲಿ 2 ವರ್ಷಗಳ ಒಳಗಾಗಿ ಪ್ರಸ್ತಾವಿತ ಉದ್ದೇಶಕ್ಕಾಗಿ ಜಮೀನನ್ನು ಬಳಸತಕ್ಕದ್ದು ಹಾಗೂ ಇನ್ನಿತರೆ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿಗಳು ಜಮೀನನ್ನು ಮಂಜೂರು ಮಾಡಿದ್ದಾರೆ.

ಜಾಗ ಮಂಜೂರಾತಿ ಬಳಿಕವೆ ಜಯಂತಿ: ಪ್ರತಿ ವರ್ಷವು ಅಂಬೇಡ್ಕರ್‌ ಜಯಂತಿಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಜಾಗಕ್ಕಾಗಿ ಒತ್ತಾಯ ಕೇಳಿ ಬರುತ್ತಿದ್ದು, ಆದರೆ ಈ ಭಾರಿ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ರವರು ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸರ್ಕಾರದ ನಿಯಮಾವಳಿಯಂತೆ 14 ರಂತೆ ಸರಳವಾಗಿ ಜಯಂತಿ ಆಚರಣೆ ಮಾಡಿ, ಏ. 30ರ ಒಳಗೆ ಭವನ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿ, ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡಿ, ಜಯಂತಿ ದಿನದಂದು ಭೂಮಿ ಪೂಜೆ ಮಾಡುತ್ತೇನೆ ಎಂದು ಶಪಥ ಮಾಡಿದ್ದರು.

ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳಿಗೆ, ಹಾಗೂ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಮತ್ತು ತಹಶೀಲ್ದಾರ್‌ ಸಿಗ್ಬತುಲ್ಲಾ ರವರಿಗೆ ಪ್ರಗತಿ ಪರ ಸಂಘಟನೆಗಳ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.