Advertisement

ನಾಳೆ ಅಂಬೇಡ್ಕರ್‌ ಭವನ ಲೋಕಾರ್ಪಣೆ: ಕುಮಾರಸ್ವಾಮಿ

12:53 PM Jan 21, 2021 | Team Udayavani |

ಚನ್ನಪಟ್ಟಣ: ಪಟ್ಟಣದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್‌ ಭವನವನ್ನು ಜ.22ರಂದು ಲೋಕಾರ್ಪಣೆಗೊಳಿಸಲು ತೀರ್ಮಾನಿಸಲಾಗಿದ್ದು, ಸಮಾಜ ಕಲ್ಯಾಣ ಸಚಿವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಅಂಬೇಡ್ಕರ್‌ ಭವನದ ಕಟ್ಟಡ ಕಾಮಗಾರಿಯ ವೀಕ್ಷಣೆಯ ಬಳಿಕ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದಾರೆ, ಎರಡು ದಿನದಲ್ಲಿ ಎಲ್ಲ ಸಿದ್ಧತೆ ಪೂರ್ಣಗೊಳಿಸಬೇಕು ಎಂದು ಸಂಬಂಧಿ ಸಿದ ಎಂಜಿನಿಯರ್‌ಗೆ ಸೂಚಿಸಿದರು. ಈಗಾಗಲೇ ಶೇ.90ರಷ್ಟು ಕಾಮಗಾರಿ ಮುಗಿದಿದ್ದು, ಭವನದ ಉಳಿಕೆ ಕಾಮಗಾರಿಯನ್ನು 15 ದಿನಗಳ ಒಳಗೆ ಮುಕ್ತಾಯಗೊಳಿಸಲಾಗುವುದು, ತಾಲೂಕಿನ ಜನತೆಗೆ ಈ ಭವನ ಸದ್ಬಳಕೆಯಾಗುವಂತೆ ನೋಡಿ ಕೊಳ್ಳುತ್ತೇವೆ. ಅಂಬೇಡ್ಕರ್‌ ಭವನ ಎಲ್ಲಾ ರೀತಿಯಲ್ಲೂ ಜನತೆಯ ಸದ್ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಕಳೆದ 17ನೇ ವರ್ಷಗಳಿಂದ ಅಂಬೇಡ್ಕರ್‌ ಭವನದ ಕಾಮಗಾರಿ ನಡೆಯುತ್ತಿದ್ದರೂ ಪೂರ್ಣ ಗೊಂಡಿಲ್ಲ, ಇದುವರೆಗೆ 5 ಕೋಟಿ ರೂ. ಹಣ ಖರ್ಚುಮಾಡಲಾಗಿದೆ. ಇನ್ನೂ ಒಂದೂವರೆ ಕೋಟಿ ರೂ. ಹಣವನ್ನು ಮಂಜೂರು ಮಾಡಿದ್ದೇನೆ. ಒಂದು ವರ್ಷದಲ್ಲಿ ಮುಗಿಯಬೇಕಾದ ಭವನ ಇಷ್ಟುವರ್ಷವಾದರೂ ಯಾಕೆ ಮುಗಿದಿಲ್ಲ ಎಂದು ತಿಳಿಯುತ್ತಲೇ ಇಲ್ಲ ಎಂದರು.

ಅಂಬೇಡ್ಕರ್‌ ಭವನ ಉದ್ಘಾಟನೆ ಜ.22 ರಂದು ಬೇಡ ಎಂದು ಹೇಳಿದ ಕೆಲ ದಲಿತ ಮುಖಂಡರನ್ನು ಎಚ್‌ಡಿಕೆ ತರಾಟೆಗೆ ತೆಗೆದುಕೊಂಡು, ಇಷ್ಟು ವರ್ಷ ಸಂಘ ಸಂಸ್ಥೆಯವರು ಎಲ್ಲಿದ್ದಿರಿ, ನಾನು ಸಿಎಂ ಆದಾಗಲೂ ನೀವು ನನ್ನ ಬಳಿಗೆ ಬರಲಿಲ್ಲ, ಈಗ ಯಾಕೆ ಬೇಡ ಎನ್ನುತ್ತಿದ್ದೀರಿ ಎಂದು ತರಾಟೆಗೆ ತೆಗದುಕೊಂಡರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಸಮನ್ವಯದ ಕೊರತೆಯಿಂದಾಗಿ ಭವನದ ಉದ್ಘಾಟನೆ ವಿಳಂಭವಾಗಿದೆ, ಮುಖ್ಯಮಂತ್ರಿಯಾಗಿ ದ್ದಾಗಲೇ ಹಣ ಬಿಡುಗಡೆ ಗೊಳಿಸಿದ್ದೆ, ನನ್ನ ಅವಧಿ ಯಲ್ಲೇ ಕಾಮಗಾರಿಯನ್ನು ಪೂರ್ಣ ಗೊಳಿಸ ಲಾಗಿದೆ. ಗುತ್ತಿಗೆದಾರನ ಜತೆ ಸಹ ಕಾಮಗಾರಿ ವಿಳಂಬವಾಗುತ್ತಿರುವುದು ಯಾಕೆ ಎಂದು ಚರ್ಚೆ ಮಾಡಿದ್ದು, ಸಮಯ ನೀಡಿದರೆ ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ನನ್ನನ್ನು ಭೇಟಿಯಾಗಿ ವಿವರ ನೀಡುವಂತೆ ಹೇಳಿದ್ದೇನೆ ಎಂದರು.

Advertisement

ಇದನ್ನೂ ಓದಿ:ಸಾಧ್ಯವಾದರೆ ಬನ್ನಿ, ಇಲ್ಲವಾದರೆ ಸುಮ್ಮನಿರಿ

ಕಾಮಗಾರಿಗೆ ಇಷ್ಟೊಂದು ಹಣ ಖರ್ಚಾಗಿ ದ್ದರೂ ಪೂರ್ಣ ಗೊಳ್ಳದಿರುವುದು ಯಾಕೆ ಎಂಬ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ವರದಿ ನೀಡಿದ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಇನ್ನು ತಾಲೂಕಿನ ಮಹದೇಶ್ವರ ದೇವಾಲಯದ ಅಭಿವೃದ್ಧಿಗೆ ಸರ್ಕಾರದಿಂದ 2.95 ಕೋಟಿ ರೂ. ಹಣವನ್ನು ಮಂಜೂರು ಮಾಡಿಸಲಾಗಿದೆ. ನೀಲಿ ನಕ್ಷೆ ಸಿದ್ದಪಡಿಸುವವರೆಗೆ ಹಣ ಮಂಜೂರು ಮಾಡ ದಂತೆ ತಡೆ ಹಿಡಿಯಲು ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಹಣ ದುರ್ಬಳಕೆಯಾಗು ವುದಕ್ಕೆ ನಾನು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ. ಜಯಮುತ್ತು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡ ಬೋರ್‌ ವೆಲ್‌ ರಾಮಚಂದ್ರು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next