Advertisement

ಅಂಬೇಡ್ಕರ್‌ ಬ್ಯಾನರ್‌ ತೆರವಿಗೆ ಸದಸ್ಯರ ಅಸಮಾಧಾನ: ಕಾರ್ಕಳ ಪುರಸಭೆ ಸಾಮಾನ್ಯ ಸಭೆ

11:29 PM Dec 19, 2022 | Team Udayavani |

ಕಾರ್ಕಳ: ಬೆಂಗಳೂರಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ನಗರದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಅದನ್ನು ತೆರವುಗೊಳಿಸಿದ ಪುರಸಭೆ ಕ್ರಮದ ವಿರುದ್ಧ ಸದಸ್ಯೆ ಪ್ರತಿಮಾ ರಾಣೆ ಅಸಮಾಧಾನ ಹೊರಹಾಕಿದರು.

Advertisement

ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾಕೇಶವ್‌ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಪುರಸಭೆ ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ವೇದಿಕೆಯಲ್ಲಿದ್ದರು. ಬ್ಯಾನರ್‌ ತೆರವುಗೊಳಿಸಿದ ವಿಚಾರ ಪ್ರಸ್ತಾವಿಸಿದ ವಿಪಕ್ಷ ಸದಸ್ಯೆ ಪ್ರತಿಮಾ ರಾಣೆ ದಲಿತರ ಬಗ್ಗೆ ಕೀಳರಿಮೆ ಯಾಕೆ? ಅಂಬೇಡ್ಕರ್‌ ಬ್ಯಾನರ್‌ ತೆರವುಗೊಳಿಸಿ ಅವರಿಗೆ ನೀವು ಅವಮಾನ ಮಾಡಿದ್ದೀರಿ ಎಂದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉತ್ತರಿಸಿ, ನಾವು ಅನಧಿಕೃತ ಬ್ಯಾನರ್‌ಗಳನ್ನಷ್ಟೇ ತೆರವುಗೊಳಿಸಿದ್ದೇವೆ. ಅಂಬೇಡ್ಕರ್‌ ಬ್ಯಾನರ್‌ಗಳನ್ನು ತೆರವುಗೊಳಿಸಿಲ್ಲ ಎಂದರು. ಅನಧಿಕೃತ ಬ್ಯಾನರ್‌ಗಳ ಪಟ್ಟಿ ನೀಡಿ ಎಂದು ಪ್ರತಿಮಾ ಒತ್ತಾಯಿಸಿದರು.

ಪುರಸಭಾ ವ್ಯಾಪ್ತಿಯ ಅನಂತಶಯನ ವೃತ್ತದ ಸಮೀಪದಲ್ಲಿ ಪುರಾತಣ್ತೀ ಇಲಾಖೆಯ ನಿಷೇಧಿತ ವಲಯದಲ್ಲಿ ಖಾಸಗಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ತೆರವುಗೊಳಿಸಬೇಕೆಂದು ಪುರಸಭೆ ನೋಟಿಸ್‌ ನೀಡಿದ್ದರೂ ಅದನ್ನು ಮೀರಿ ಕಟ್ಟಡ ಕಾಮಗಾರಿ ಮುಂದುವರಿಸುತ್ತಿರುವ ಬಗ್ಗೆ ಸದಸ್ಯ ಸೋಮನಾಥ ನಾಯ್ಕ… ಪ್ರಶ್ನಿಸಿದರು.

ಪುರಸಭೆ ಹಾಗೂ ಪುರಾತಣ್ತೀ ಇಲಾಖೆಯ ಅನುಮತಿ ಪಡೆಯದೇ ನಿಷೇಧಿತ ವಲಯದಲ್ಲಿ ವಾಣಿಜ್ಯ ಕಟ್ಟಡ ಕಟ್ಟುತ್ತಿರುವುದಕ್ಕೆ ಪುರಸಭೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉತ್ತರಿಸಿ ಕಟ್ಟಡಕ್ಕೆ ಸಂಬಂಧಿಸಿ ನೋಟಿಸ್‌ ನೀಡಲಾಗಿದೆ, ಕಾಲಾವಕಾಶ ಕೇಳಿದ್ದು, ಖಾಸಗಿ ಜಾಗದಲ್ಲಿ ಕಟ್ಟಡವಿದೆ. ಕಾನೂನು ಪರಿಧಿಯಲ್ಲಿ ನಡೆದುಕೊಳ್ಳಬೇಕಿದೆ ಎಂದರು. ಅಧಿಕಾರಿಯ ಉತ್ತರಕ್ಕೆ ಅಸಮಾಧಾನಗೊಂಡು ಅವರು ಸಭೆಯಿಂದ ಹೊರ ನಡೆದರು. ಎಣ್ಣೆಹೊಳೆ ಏತನೀರಾವರಿ ಪೈಪ್‌ಲೈನ್‌ ಕಾಮಗಾರಿಗೆ ರಸ್ತೆ ಅಗೆದು ರಸ್ತೆ ಹದಗೆಟ್ಟಿದೆ. ವಾಹನ ಅಪಘಾತ ಸಂಭವಿಸುತ್ತಿದೆ. ಕ್ರಮಕೈಗೊಳ್ಳುವಂತೆ ಪ್ರತಿಮಾ ರಾಣೆ, ಶಶಿಕಲಾ ಶೆಟ್ಟಿ ಆಗ್ರಹಿಸಿದರು. ಅಧ್ಯಕ್ಷೆ ಸುಮಾ ಕೇಶವ ಉತ್ತರಿಸಿ, ನಗರದ ರಸ್ತೆಗಳ ದುರಸ್ತಿಗೆ ಸಚಿವ ವಿ.ಸುನಿಲ್‌ಕುಮಾರ್‌ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಟೆಂಡರ್‌ ಕರೆದು ಕಾಮಗಾರಿ ನಡೆಸಲಾಗುತ್ತದೆ ಎಂದರು.ಮುಂಡ್ಲಿ ಜಲಾಶಯದಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಗೇಟ್‌ ಹಾಕುವಲ್ಲಿ ಕಂಪೆನಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸದಸ್ಯರು ಪ್ರಸ್ತಾವಿಸಿದರು.

ಕಾಮಗಾರಿ ನಡೆದ ಸ್ಥಳದಲ್ಲಿ ಗುಣಮಟ್ಟದ ನಾಮಫ‌ಲಕ ಅಳವಡಿಸುವಂತೆ ಮತ್ತು ರಸ್ತೆಗೆ ತಾಗಿಕೊಂಡೇ ನಾಮಫ‌ಲಕ ಹಾಕದಂತೆ ಸಂತೋಷ್‌ ರಾವ್‌ ಹೇಳಿದದರು. ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ ಅವರು ಗುತ್ತಿಗೆದಾರರೇ ನಾಮಫ‌ಲಕ ಅಳವಡಿಸುವಂತೆ ಆಗಬೇಕು ಎಂದರು. ಈ ಬಗ್ಗೆ ಅಧ್ಯಕ್ಷೆ ಸುಮಾಕೇಶವ್‌ ಎಂಜಿನಿಯರ್‌ಗಳಿಗೆ ಸೂಚಿಸುವುದಾಗಿ ಹೇಳಿದರು. ರಾಮಸಮುದ್ರ ಸಾರ್ವಜನಿಕ ರುದ್ರಭೂಮಿಗೆ ಸಿಸಿ ಕೆಮರಾ ಅಳವಡಿಸುವ ಬಗ್ಗೆ ಪ್ರಸ್ತಾವವಾಯಿತು. ರುದ್ರಭೂಮಿ ಬಳಕೆಯಾಗುತ್ತಿಲ್ಲ ಎಂದು ಸದಸ್ಯರು ಹೇಳಿದರು.

Advertisement

ರುದ್ರಭೂಮಿ ತಗ್ಗು ಪ್ರದೇಶದಲ್ಲಿರುವುದರಿಂದ ಶವದ ದಫ‌ನದ ಬಳಿಕದ ಮಲಿನ ನೀರು ಸೇರುವ ಸಾಧ್ಯತೆಯಿದೆ ಎಂದು ಯೋಗೀಶ್‌ ದೇವಾಡಿಗ, ಪ್ರದೀಪ್‌ ರಾಣೆ ಹೇಳಿದಾಗ ಹೇಳಿದಾಗ ರಾಮಸಮುದ್ರ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಲಾಗುತ್ತಿದೆ. ಆವಾಗ ಸಮಸ್ಯೆ ಬಗೆಹರಿಯಲಿದೆ ಎಂದು ಅಧ್ಯಕ್ಷೆ ಉತ್ತರಿಸಿದರು. ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

ಆರೋಪ ಸತ್ಯಕ್ಕೆ ದೂರ
ಪುರಸಭೆ ವ್ಯಾಪ್ತಿಯಲ್ಲಿ ಹಿಂದಿನ ಸಾಲಿನ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್‌ ಪಾವತಿಯಾಗಿಲ್ಲ. ಗುತ್ತಿಗೆದಾರರಿಗೆ ಬಿಲ್‌ಅನ್ನು ಅಧ್ಯಕ್ಷರೇ ತಡೆ ಹಿಡಿದಿದ್ದಾರೆ ಎನ್ನುವ ಆರೋಪವನ್ನು ಈ ಹಿಂದಿನ ಸಭೆಯಲ್ಲಿ ಕೆಲವು ಸದಸ್ಯರು ವ್ಯಕ್ತಪಡಿಸಿದ್ದರು. ಅದು 2017-18ನೇ ಸಾಲಿನ ಕಾಮಗಾರಿಗೆ ಸಂಬಂಧಿಸಿದ ಬಿಲ್‌ ಆಗಿತ್ತು. ಅಂದು ಕಡತ ತರಿಸಿ ನೋಡಿರಲಿಲ್ಲ. ಬಳಿಕ ಈಗ ಕಡತ ಪರಿಶೀಲಿಸಿದಾಗ ಅಂದಿನ ಮುಖ್ಯಾಧಿಕಾರಿಗಳು ಕಾಮಗಾರಿ ಬಿಲ್‌ಗ‌ಳನ್ನು ಮುಂದೆಯೂ ಪಾವತಿಸಬಹುದು ಎಂದು ಬರೆದಿದ್ದರು. ಪುರಸಭೆಯ ಅಧಿಕಾರಿಗಳಿಗೆ ಬಿಲ್‌ ಪಾವತಿಸಬಹುದಿತ್ತು. ಅದನ್ನು ಮಾಡಿರಲಿಲ್ಲ. ಅಂದು ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿತ್ತು. ಅಲ್ಲಿ ನನ್ನದೇನು ಪಾತ್ರವಿರಲಿಲ್ಲ. ಆರೋಪ ಸತ್ಯಕ್ಕೆ ದೂರವಾದ್ದದ್ದು ಎಂದು ಅಧ್ಯಕ್ಷೆ ಸುಮಾಕೇಶವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next