Advertisement

ದಿ. ಅಂಬರೀಷ ಅಂತಿಮ ಸಂಸ್ಕಾರ ವೆಚ್ಚದ ಮಾಹಿತಿ ಸರ್ಕಾರದ ಬಳಿ ಇಲ್ಲ: ಗಡಾದ ಆರೋಪ

05:23 PM Jul 13, 2021 | Team Udayavani |

ಬೆಳಗಾವಿ : ಮಾಜಿ ಸಚಿವ ದಿ. ಅಂಬರೀಷ್ ಅವರ ಅಂತಿಮ ಸಂಸ್ಕಾರದ ಸಲುವಾಗಿ ವೆಚ್ಚ ಮಾಡಿರುವ ಹಣ ಎಷ್ಟು ಎಂಬುದು ಸರ್ಕಾರದ ಬಳಿ ಮಾಹಿತಿ ಇಲ್ಲ. ಈ ಮಾಹಿತಿ ಯಾರ ಬಳಿ ಇದೆ ಎಂಬುದೂ ಮುಖ್ಯ ಕಾರ್ಯದರ್ಶಿಯವರ ಕಚೇರಿಯವರಿಗೆ ಗೊತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.

Advertisement

ಅಂಬರೀಷ್ ಅವರ ವೈದ್ಯಕೀಯ ಉಪಚಾರಕ್ಕಾಗಿ ಸರ್ಕಾರದಿಂದ ವೆಚ್ಚ ಮಾಡಿದ ಹಣ, ಹಾಗೂ ಅಂತಿಮ ಸಂಸ್ಕಾರಕ್ಕೆ ವೆಚ್ಚ ಮಾಡಿರುವುದು ಹಾಗೂ ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ನಿಗದಿ ಪಡಿಸಿದ ಮೊತ್ತದ ಬಗ್ಗೆ ಮಾಹಿತಿ ನಿಡುವಂತೆ ಭೀಮಪ್ಪ ಗಡಾದ ಅವರು 5 ಜನವರಿ 2019 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಿದ್ದರು. ವೈದ್ಯಕೀಯ ವೆಚ್ಚದ ಬಗ್ಗೆ ಬೆಂಗಳೂರಿನ ವಿಕ್ರಮ ಆಸ್ಪತ್ರೆ ಹಾಗೂ ಸಿಂಗಾಪುರ ಆಸ್ಪತ್ರೆಯ ವೆಚ್ಚ 1.22 ಕೋಟಿ ರೂ. ಮೊತ್ತವನ್ನು ಸಕಾರವೇ ಭರಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಅಮೀರ್ ಅವರಂತವರಿಂದ ದೇಶದ ಜನಸಂಖ್ಯೆ ಜಾಸ್ತಿ ಆಗ್ತಿದೆ: ಬಿಜೆಪಿ ಸಂಸದ ಸುಧೀರ್

ಅಂಬರೀಷರ ಅಂತಿಮ ಸಂಸ್ಕಾರಕ್ಕೆ ವೆಚ್ಚ ಮಾಡಿದ ಮಾಹಿತಿಯನ್ನು ಮಂಡ್ಯ ಜಿಲ್ಲಾಧಿಕಾರಿ ಬಳಿ ಹಾಗೂ ಸ್ಮಾರಕಕ್ಕೆ ನಿಗದಿಪಡಿಸಿದ ಮೊತ್ತದ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪಡೆಯುವಂತೆ ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಅರ್ಜಿ ವರ್ಗಾಯಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಮಂಡ್ಯ ಜಿಲ್ಲಾಧಿಕಾರಿಗಳು ಅಂಬರಿಷ ಅವರ ಅಚಿತಿಮ ಸಂಸ್ಕಾರಕ್ಕೆ ವೆಚ್ಚವಾದ ಹಣದ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದಲೇ ಪಡೆಯುವಂತೆ 5 ನವೆಂಬರ್ 2019ರಂದು ಆದೇಶ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನ ಶ್ರೀ ಕಂಠೀರವ ಸ್ಟುಡಿಯೋದವರೂ ಅಂಬರೀಷ್‌ಗೆ ಸಂಬಂಧಿಸಿದ ಯಾವುದೇ ವೆಚ್ಚ ಭರಿಸಿಲ್ಲ ಎಂದು ತಿಳಿಸಿದ್ದಾರೆ.

Advertisement

ಅಂಬರೀಷರ ಅಂತ್ಯ ಸಂಸ್ಕಾರದ ವೆಚ್ಚದ ಕುರಿತು ಒಬ್ಬರು ಇನ್ನೊಬ್ಬರ ಮೇಲೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಈ ಮಾಹಿತಿ ಯಾರ ಬಳಿ ಇದೆ. ಅಂತಿಮ ಸಂಸ್ಕಾರಕ್ಕೆ ವೆಚ್ಚವಾದ ಹಣವೆಷ್ಟು ಎಂಬುದೂ ಸರ್ಕಾರ ಮತ್ತು ಅಂಬರೀಷ ಕುಟುಂಬದವರು ಈಗಲಾದರೂ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕೇರಳಕ್ಕೆ ಮತ್ತೆ ಝೀಕಾ ಆಘಾತ : ಮತ್ತೀರ್ವರಲ್ಲಿ ಹೊಸ ವೈರಸ್ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next