Advertisement

Ambani; ‘ಅನಂತ’ ಸಂಪದ್ಭರಿತ ವಿವಾಹ ಸಮಾರಂಭ!; ನವದಂಪತಿಗೆ ಮೋದಿ ಶುಭಾಶೀರ್ವಾದ

11:57 PM Jul 13, 2024 | Team Udayavani |

ಮುಂಬಯಿ: ಅನಂತ್‌ ಅಂಬಾನಿ- ರಾಧಿಕಾ ಮರ್ಚೆಂಟ್‌ ವಿವಾಹ ಅದ್ದೂರಿಯಾಗಿ ನಡೆದಿದ್ದು, ಮಗನ ಮದುವೆಗೆ ಅಂಬಾನಿ ದುಡ್ಡಿನ ಹೊಳೆಯನ್ನೇ ಹರಿಸಿದ್ದಾರೆ. ಮದುವೆಗಾಗಿ ಅನಂತ್‌ ಧರಿಸಿದ್ದ ಶೇರ್ವಾನಿಯೇ ಬರೋಬ್ಬರಿ 214 ಕೋಟಿ ರೂ.ಗಳದ್ದು. ಇತ್ತ ಮದುಮಗನ ತಾಯಿ ನೀತಾ ಅಂಬಾನಿ ಕೂಡ 100 ಕ್ಯಾರೆಟ್‌ ವಜ್ರದ ನೆಕ್ಲೇಸ್‌ ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದಾರೆ.

Advertisement

ಮದುಮಗನ ಶೇರ್ವಾನಿ ಬೆಲೆ 214 ಕೋ.ರೂ., 54 ಕೋ.ರೂ. ವಾಚ್‌ ಧರಿಸಿದ್ದ ಅನಂತ್‌ ಅಂಬಾನಿ

ಕೆಂಪು ಮಿಶ್ರಿತ ಚಿನ್ನದ ಬಣ್ಣದ ಶೇರ್ವಾನಿಯನ್ನು ಅನಂತ್‌ ಮದುವೆ ಯಲ್ಲಿ ಧರಿಸಿದ್ದರು. ಇದ ರಲ್ಲಿ ಬರೋಬ್ಬರಿ 200 ಕೋಟಿ ರೂ. ಮೌಲ್ಯದ ವಜ್ರಗಳನ್ನು ಅಳವಡಿಸಲಾಗಿತ್ತು. ಚಿನ್ನದ ದಾರದ ಎಳೆಗಳನ್ನೂ ಬಟ್ಟೆಯಲ್ಲಿ ಬಳಸಲಾಗಿದೆ. ಶೇರ್ವಾನಿಯಲ್ಲಿ ಅನಂತ್‌ ಅವರ ಕನಸಿನ “ವನತಾರ’ವನ್ನು ಪ್ರತಿನಿಧಿಸುವ ಆನೆಯ ಬ್ರೂಚ್‌ ಇರಿಸಲಾಗಿತ್ತು. ಈ ಬ್ರೂಚ್‌ ಒಂದಕ್ಕೇ 14 ಕೋಟಿ ರೂ., ಇಡೀ ಶೇರ್ವಾನಿಯ ಒಟ್ಟು ಮೊತ್ತ 214 ಕೋಟಿ ರೂ.ಗ ಳು.
ಖ್ಯಾತ ವಾಚ್‌ ಬ್ರ್ಯಾಂಡ್‌ ರಿಚರ್ಡ್‌ ಮಿಲ್ಲೆ ಅವರ 52-05 ಮಾಡೆಲ್‌ ವಾಚನ್ನು ಅನಂತ್‌ ಧರಿಸಿದ್ದರು. ಇದರ ಬೆಲೆ ಬರೋಬ್ಬರಿ 54 ಕೋಟಿ ರೂ.ಗಳು. ಶುಕ್ರವಾರ ಮದುವೆ ನಡೆದಿದ್ದು, ಶನಿವಾರ ಶುಭಾಶೀರ್ವಾದ ಕಾರ್ಯಕ್ರಮ ನಡೆದಿದೆ. ರವಿವಾರ ಆರತಕ್ಷತೆ ಸಮಾರಂಭ ಮೂಲಕ ಮದುವೆ ಸಮಾರಂಭಗಳು ಮುಕ್ತಾಯಗೊಳ್ಳಲಿವೆ.

ಮೋದಿ ಶುಭಾಶೀರ್ವಾದ
ಅನಂತ್‌-ರಾಧಿಕಾ ಮದುವೆಯ ಶುಭಾಶೀರ್ವಾದ ಕಾರ್ಯಕ್ರಮವು ಶನಿವಾರ ನಡೆದಿದ್ದು, ಪ್ರಧಾನಿ ಮೋದಿ ಅವರು ಸಮಾರಂಭಕ್ಕೆ ತೆರಳಿ, ವಧು-ವರರಿಗೆ ಶುಭ ಹಾರೈಸಿದ್ದಾರೆ.

Advertisement

ನೀತಾರ 100 ಕ್ಯಾರೆಟ್‌ ವಜ್ರದ ನೆಕ್ಲೇಸ್‌ಗೆ 1,000 ಗಂಟೆ ವಿನ್ಯಾಸ
100 ಕ್ಯಾರೆಟ್‌ ವಜ್ರದ ನೆಕ್ಲೇಸ್‌ ಅನ್ನು ನೀತಾ ಧರಿಸಿ ದ್ದರು. ಮುಂಬಯಿ ಮೂಲದ ಕಾಂತಿಲಾಲ್‌ಛೋಟಾ ಲಾಲ್‌ ಜುವೆಲರ್ ಈ ನೆಕ್ಲೇಸ್‌ನ ವಿನ್ಯಾಸ ಕ್ಕಾಗಿ 1,000 ಗಂಟೆಗಳ ಕಾಲ ಶ್ರಮಿಸಿರುವುದಾಗಿ ಹೇಳಿದೆ. 100 ಕ್ಯಾರೆಟ್‌ನ ಹಳದಿ ವಜ್ರದಲ್ಲಿ ನೆಕ್ಲೇಸ್‌ನ ಪೆಂಡೆಂಟ್‌, 80 ಕ್ಯಾರೆಟ್‌ನ ಪಚ್ಚೆಕಟ್‌ ವಿನ್ಯಾಸದ ವಜ್ರಗಳಿಂದ 5 ಎಳೆಗಳಲ್ಲಿ ಸಂಪೂರ್ಣ ನೆಕ್ಲೇಸ್‌ ತಯಾರಿಸಲಾಗಿದೆ.

ಈ ಮದುವೆ 10 ಆಸ್ಕರ್‌ ಕಾರ್ಯಕ್ರಮಕ್ಕೆ ಸಮ!
ವಿವಾಹಕ್ಕೆ ಮುಕೇಶ್‌ ಅಂಬಾನಿ ತಮ್ಮ ನಿವ್ವಳ ಆಸ್ತಿಯ ಶೇ.05ರಷ್ಟು ಮಾತ್ರ ವ್ಯಯಿಸಿದ್ದಾರೆ. ಆದರೆ ಈ 5 ಸಾವಿರ ಕೋಟಿ ರೂ.ಗಳಲ್ಲಿ ಅಮೆರಿಕದಲ್ಲಿ 10 ಬಾರಿ ಆಸ್ಕರ್‌ ಪ್ರಶಸ್ತಿ ಸಮಾರಂಭ ಆಯೋಜಿಸಬಹುದಾಗಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next