Advertisement
ಈ ಎರಡೂ ಕಂಪನಿಗಳ ವಿಲೀನವನ್ನು 6 ತಿಂಗಳ ಹಿಂದೆಯೇ ಪ್ರಕಟಿಸಲಾಗಿತ್ತು. ಈಗ ಉಭಯ ಕಂಪನಿಗಳು ಮೂಲ ಒಪ್ಪಂದದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ ಬಳಿಕ ಅನುಮೋದನೆ ದೊರೆತಿದೆ.
ರಿಲಯನ್ಸ್ ಇಂಡಸ್ಟ್ರೀಸ್, ವಯಾಕಾಮ್18 ಮೀಡಿಯಾ, ಡಿಜಿಟಲ್ 18 ಮೀಡಿಯಾ ಮತ್ತು ಸ್ಟಾರ್ ಇಂಡಿಯಾ ಪ್ರೈ.ಲಿ., ಸ್ಟಾರ್ ಟೆಲಿವಿಷನ್ ಪ್ರೊಡಕ್ಷನ್ ಲಿ.ಗಳು ಕೆಲವು ಮಾರ್ಪಾಟುಗಳೊಂದಿಗೆ ವಿಲೀನವಾಗಲಿವೆ ಎಂದು ಸಿಸಿಐ ಟ್ವೀಟ್ ಮಾಡಿದೆ. ರಿಲಯನ್ಸ್ ಇಂಡಸ್ಟೀಸ್ ಶೇ.63.16 ಪಾಲು
ಒಪ್ಪಂದದ ಪ್ರಕಾರ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಅದರ ಸಹವರ್ತಿ ಸಂಸ್ಥೆಗಳು ಶೇ.63.16 ಪಾಲು ಹೊಂದಲಿವೆ. ಇದರಲ್ಲಿ 2 ಸ್ಟ್ರೀಮಿಂಗ್ ವೇದಿಕೆಗಳು, 120 ಟಿವಿ ಚಾನೆಲ್‌ಗಳು ಇರಲಿವೆ. ವಾಲ್ಟ್ ಡಿಸ್ನಿ ಶೇ.36.84 ಪಾಲು ಹೊಂದಲಿದೆ. ಜಪಾನ್‌ನ ಸೋನಿ ಮತ್ತು ನೆಟ್‌ಫ್ಲಿಕ್ಸ್‌ಗೆ ತೀವ್ರ ಪೈಪೋಟಿ ನೀಡಲು ರಿಲಯನ್ಸ್ ಇಂಡಸ್ಟ್ರಿ 11,500 ಕೋಟಿ ರೂ. ಜಂಟಿಯಾಗಿ ಹೂಡಿಕೆ ಮಾಡಲಿದೆ. ಈ ಜಂಟಿ ಪಾಲುದಾರಿಕೆ ನೇತೃತ್ವವನ್ನು ನೀತಾ ಅಂಬಾನಿ ವಹಿಸಲಿದ್ದು, ಉದಯಶಂಕರ್ ಉಪಾಧ್ಯಕ್ಷರಾಗಲಿದ್ದಾರೆ.
Related Articles
Advertisement