Advertisement
ಮಹಾರಾಷ್ಟ್ರವಲ್ಲದೆ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು, ಬೀದರ ಮತ್ತು ಯಾದಗಿರಿ ಜಿಲ್ಲೆಗಳಿಂದ ಮಂಗಳವಾರ ಬೆಳಗ್ಗೆ ಬಸ್ ಮತ್ತು ರೈಲುಗಳ ಮೂಲಕ ಸೊಲ್ಲಾಪುರಕ್ಕೆ ಆಗಮಿಸಿ ಇಲ್ಲಿನ ರೂಪಾಭವಾನಿ ದೇವಿ ದರ್ಶನ ಪಡೆದು ಪಾದಯಾತ್ರೆ ಮೂಲಕ ತುಳಜಾಪುರಕ್ಕೆತೆರಳಿದರು.
ಪಡೆಯುತ್ತಾರೆ. ವಿವಿಧ ರಾಜ್ಯಗಳಿಂದ ಮಂಗಳವಾರ ಸಂಜೆ ದೇವಾಲಯ ಪ್ರವೇಶಿಸಿದ ಭಕ್ತರು ಬುಧವಾರ ಬೆಳಗಿನ ಜಾವ 2:30ರಿಂದಲೇ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ನಾಡಿನ ವಿವಿಧ ರಾಜ್ಯಗಳಿಂದ ಹೆಚ್ಚಿನ ಭಕ್ತರು ಪಾದಯಾತ್ರೆಯಿಂದಲೇ ತುಳಜಾಪುರಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು. ಸೀಗೆ ಹುಣ್ಣಿಮೆಗಿಂತ ಎರಡು ದಿನ ಮೊದಲೇ ತಮ್ಮೂರಿನಿಂದ ತುಳಜಾಪುರದತ್ತ ಹೊರಟಿದ್ದರು. ದರ್ಶನಕ್ಕೆ ಬಂದ ಭಕ್ತರಿಗಾಗಿ ವಿವಿಧ ಸಂಘ- ಸಂಸ್ಥೆಗಳು ಹೆಜ್ಜೆ ಹೆಜ್ಜೆಗೂ ಮಹಾಪ್ರಸಾದ ಹಾಗೂ ಕುಡಿಯುವ ನೀರು, ಔಷಧೋಪಚಾರದ ವ್ಯವಸ್ಥೆ ಮಾಡಿದ್ದರು. ಪಾದಯಾತ್ರಿಕರು ಮಹಾಪ್ರಸಾದ ರುಚಿ ಸವಿಯುವ ಮೂಲಕ ತುಳಜಾಪುರ ಅಂಬಾಭವಾನಿ ದರ್ಶನ ಪಡೆದರು.
ಸಾರಿಗೆ ವ್ಯವಸ್ಥೆ: ಭಕ್ತರಿಗೆ ತೊಂದರೆಯಾಗದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿಯಾಗಿ ಬಸ್ ಗಳು ಸಂಚರಿಸಿದವು. ಅಲ್ಲದೆ ಖಾಸಗಿ ವಾಹನಗಳ ಮೂಲಕ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ಮಹಾರಾಷ್ಟ್ರದ ತುಳಜಾಭವಾನಿ ಎಲ್ಲರಿಗೂ ಆರಾಧ್ಯ
ದೇವತೆ. ಹೀಗಾಗಿ ಬುಧವಾರ ಸೀಗೆ ಹುಣ್ಣಿಮೆ ದಿನ ವಿಶೇಷ ದರ್ಶನ ಪಡೆದರು. ಯಾವ ರಸ್ತೆಗಳಲ್ಲಿ ನೋಡಿದರೂ ಭಕ್ತರ ದಂಡು ಹರಿದು ಬರುತಿತ್ತು.
Related Articles
Advertisement