ನವದೆಹಲಿ : ಅಮೆಜಾನ್ ಸಂಸ್ಥೆ ಪ್ರತಿ ವರ್ಷ ಪ್ರತಿ ವರ್ಷ ಜುಲೈನಲ್ಲಿ ಆಯೋಜಿಸುತ್ತಿರುವ ಅಮೆಜಾನ್ ಇಂಡಿಯಾ ಅಮೆಜಾನ್ ಪ್ರೈಮ್ ಡೇ ಸೇಲ್ ರದ್ದುಗೊಳಿಸಿರುವುದಾಗಿ ಸಂಸ್ಥೆ ತಿಳಿಸಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ಹೆಚ್ಚಳವಾಗುತ್ತಿರುವ ಕಾರಣದಿಂದಾಗಿ ಈ ವರ್ಷದ ಅಮೆಜಾನ್ ಪ್ರೈಮ್ ಡೇ ಸೇಲ್ ನನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಮಾಲ್ಡೀವ್ ಬಾರ್ ನಲ್ಲಿ ಡೇವಿಡ್ ವಾರ್ನರ್ -ಮೈಕಲ್ ಸ್ಲೇಟರ್ ಹೊಡೆದಾಟ! ವಾರ್ನರ್ ಹೇಳಿದ್ದೇನು?
ಈ ಸೇಲ್ ನಲ್ಲಿ ಪ್ರೈಮ್ ಮೆಂಬರ್ಸ್ ಅಥವಾ ಸದಸ್ಯರಿಗೆ ಮಾತ್ರ ಶಾಪಿಂಗ್ ಮಾಡಲು ಅವಕಾಶವಿರುತ್ತದೆ. ಪ್ರೈಮ್ ನ ಸದಸ್ಯರಿಗೆ ಹಲವು ಆಫರ್ ಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಫಾಸ್ಟ್ ಶಿಪಿಂಗ್ ಮೂಲಕ ವಸ್ತುಗಳನ್ನು ಬಹು ಬೇಗ ಡೆಲಿವೆರಿ ಮಾಡಲಾಗುತ್ತದೆ.
ದೇಶದಲ್ಲಿ ಕೋವಿಡ್ ಸೋಂಕು ದಾಖಲೆಯ ಪ್ರಮಾಣದಲ್ಲಿ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಅಮೆಜಾನ್, ಗೂಗಲ್ ಸೇರಿದಂತೆ, ಅನೇಕ ಕಂಪನಿಗಳು ಸರ್ಕಾರಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ದೇಶದಲ್ಲಿ ಐಸಿಯು, ಹಾಸಿಗೆಗಳು, ಆಮ್ಲಜನಕ ಮತ್ತು ಔಷಧಿಗಳ ನೆರವು ನೀಡಲು ಅನೇಕ ದೇಶಗಳು ಮುಂದೆ ಬಂದಿವೆ.
ಇದನ್ನೂ ಓದಿ : ವಿಟ್ಲ: ಎರಡು ಬಟ್ಟೆ ಅಂಗಡಿಗಳ ಮಾಲಕರ ವಿರುದ್ಧ ಪ್ರಕರಣ ದಾಖಲು