Advertisement
#AmazonFestivYatra ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಗಳು, ದೊಡ್ಡ ವಸ್ತುಗಳು, ಸಲಕರಣೆಗಳು ಮತ್ತು ಟಿವಿಗಳು, ಗೃಹೋಪಯೋಗಿ ಮತ್ತು ಅಡುಗೆ ಉತ್ಪನ್ನಗಳು, ಫ್ಯಾಷನ್, ದಿನಸಿ ಮತ್ತು ಸೌಂದರ್ಯ ವಸ್ತುಗಳು, ಎಲೆಕ್ಟ್ರಾನಿಕ್ಸ್ ಮುಂತಾದ ಉತ್ಪನ್ನಗಳನ್ನು ಗ್ರಾಹಕರು ಮಾರಾಟಗಾರರಿಂದ ನೇರವಾಗಿ ಅಮೆಜಾನ್.ಇನ್ ಮೂಲಕ ಖರೀದಿಸಬಹುದಾಗಿದೆ.
Related Articles
Advertisement
ಅಮೆಜಾನ್ ಫೆಸ್ಟಿವ್ ಯಾತ್ರಾ ದೆಹಲಿಯಿಂದ ಪ್ರಾರಂಭವಾಗಿ ಲಕ್ನೊ, ಅಹಮದಾಬಾದ್, ಹೈದರಾ ಬಾದ್ ಮೂಲಕ ಬೆಂಗಳೂರಿನಲ್ಲಿ ತನ್ನ ಪ್ರವಾಸವನ್ನು ಕೊನೆಗೊಳಿಸಲಿದೆ. ಯಾತ್ರಾ ವಾಹನ, ಪ್ರಯಾಣದ ದಾರಿಯಲ್ಲಿ ತನ್ನ ಗ್ರಾಹಕರು ಮತ್ತು ಮಾರಾಟಗಾರರೊಂದಿಗೆ ಆಗ್ರಾ, ಚೆನ್ನೈ, ಇಂಡೋರ್, ಕೋಲ್ಕತಾ, ಕೊಚ್ಚಿ, ಮಥುರಾ, ಮುಂಬೈ ಮತ್ತು ವಿಶಾಖಪಟ್ಟಣಂನಲ್ಲಿ ಮಾರಾಟದಲ್ಲಿ ತೊಡಗಿಸಿಕೊಳ್ಳಲಿದೆ.
ಉಪಾಧ್ಯಕ ಗೋಪಾಲ್ ಪಿಳ್ಳೈ ಮಾತನಾಡಿ, ಅಮೆಜಾನ್ ಇಂಡಿಯಾದ ಸೆಲ್ಲರ್ ಸರ್ವೀಸಸ್ ಪ್ರತಿವರ್ಷ ನಮ್ಮ ಲಕ್ಷಾಂತರ ಗ್ರಾಹಕರಿಗೆ ಹಾಗೂ ನಮ್ಮ ಲಕ್ಷಾಂತರ ಮಾರಾಟಗಾರರಿಗೆ ಈ ಬ್ಲಾಕ್ ಬಸ್ಟರ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವನ್ನು ತಲುಪಿಸಲು ಅನುಕೂಲವಾಗಿದೆ. ಈ ಹಬ್ಬದ ಆಚರಣೆಯನ್ನು ಆಚರಿಸಲು ಭಾರತದಾದ್ಯಂತದ ಬ್ರಾಂಡ್‌ಗಳು, ಎಸ್‌ಎಂಬಿಗಳು, ಕುಶಲ ಕರ್ಮಿಗಳು, ನೇಕಾರರು, ಟೆಕ್ ಸ್ಟಾರ್ಟ್‌ಅಪ್‌ಗ್ಳು ಇತ್ಯಾದಿಗಳನ್ನು ಒಳಗೊಂಡಿರುವ ವೈವಿಧ್ಯಮಯ 5 ಲಕ್ಷ ವ್ಯವಹಾರಗಳು ಅಮೆಜಾನ್.ಇನ್‌ನ್ನು ತಮ್ಮ ಆಯ್ಕೆಯ ಮಾರುಕಟ್ಟೆಯನ್ನಾಗಿ ಆರಿಸಿಕೊಳ್ಳುತ್ತಿವೆ ಎಂದು ವಿವರಿಸಿದರು.
ಸಿಬಿಯುವಿನ ಉಪಾಧ್ಯಕ್ಷರು, ಮಾರಾಟ ಮತ್ತು ಮಾರುಕಟ್ಟೆ (ದೇಶೀಯ) ರಾಜೇಶ್ ಕೌಲ್ ಮಾತನಾಡಿ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು Amazon.inಗೆ ಲಾಗ್ ಇನ್ ಮಾಡಲು ತಿಳಿಸಿದರು.
ಇದೊಂದು ವಿಶಿಷ್ಟ ಆಚರಣೆ – ಮನೀಶ್ ತಿವಾರಿ: ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್, ಭಾರತೀಯ ಗ್ರಾಹಕರು ನಿರೀಕ್ಷಿಸುವ ಸಮಯ. ಈ ಅವಧಿಯಲ್ಲಿ ಗ್ರಾಹಕರಿಗೆ ಸಾಕಷ್ಟು ಉತ್ತೇಜಕ ಮತ್ತು ವ್ಯಾಪಕ ಕೊಡುಗೆಗಳಿರುತ್ತವೆ. ಬ್ಯಾಂಕ್ ರಿಯಾಯಿತಿ ಗಳು, ಅಮೆಜಾನ್ ಪೇ ಇಎಂಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು ಬಜಾಜ್ ಫಿನ್ಸರ್ವ್ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐಗಳು, ತ್ವರಿತ ವಿತರಣೆ ಮತ್ತು ಉಪಕರಣಗಳ ಸ್ಥಾಪನೆ, ಮೊಬೈಲ್ ಫೋನ್‌ಗಳ ವಿನಿಮಯ ಮತ್ತು ದೊಡ್ಡ ಉಪಕರಣ ಗಳು, ಆಕರ್ಷಕ ಕ್ಯಾಶ್‌ಬ್ಯಾಕ್ ಮತ್ತಿತರ ಕೊಡುಗೆ ಗಳು ಇರುವುದರಿಂದ ನಮ್ಮ ಗ್ರಾಹ ಕರು ಈ ವಿಶಿಷ್ಟ ಆಚರಣೆಯನ್ನು ಎದುರು ನೋಡುತ್ತಿರುತ್ತಾರೆ ಎಂದು ಅಮೆಜಾನ್ ಇಂಡಿಯಾ ಉಪಾಧ್ಯಕ್ಷ ಮನೀಶ್ ತಿವಾರಿ ತಿಳಿಸಿದರು.