Advertisement
ಸ್ಮಾರ್ಟ್ ಪೋನ್ ಗಳು ಕೂಡ ಡಿಸ್ಕೌಂಟ್ ದರದಲ್ಲಿ ದೊರಕುತ್ತಿದ್ದು, ಗ್ರಾಹಕರಿಗೆ ತಮ್ಮ ನೆಚ್ಚಿನ ಫೋನ್ ಗಳನ್ನು ಕೊಳ್ಳಲು ಇದು ಒಳ್ಳೆಯ ಸಮಯ. ಯಾವೆಲ್ಲಾ ಸ್ಮಾರ್ಟ್ ಪೋನ್ ಗಳು ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.
Related Articles
Advertisement
ಆ್ಯಪಲ್ ಐಫೊನ್- 7: ಐಷಾರಾಮಿ ಆ್ಯಪಲ್ ಸಂಸ್ಥೆಯ ಫೋನ್ ಕೊಳ್ಳಬೇಕೆಂದು ಬಯಸುವವರಿಗೆ ಐಪೋನ್ -7 24,999ಕ್ಕೆ ದೊರಕುತ್ತಿದೆ. ಇದು 4.7 ಇಂಚಿನ ರೆಟಿನಾ HD LCD ಮತ್ತು 12 ಎಂಪಿ ವೈಡ್ ಆ್ಯಂಗಲ್ ಕ್ಯಾಮೆರಾವನ್ನು ಹೊಂದಿದೆ. ಇತ್ತೀಚಿನ ಐಫೋನ್ ಖರೀದಿಸಬೇಕೆಂದುಕೊಂಡರೇ ಐಫೊನ್ SE 64GB 29,999ಕ್ಕೆ ಫ್ಲಿಫ್ ಕಾರ್ಟ್ ನಲ್ಲಿ ಲಭ್ಯವಿದೆ.
ಇದನ್ನೂ ಓದಿ: ಅಪ್ಪು ಪ್ಲೀಸ್… ಒಮ್ಮೆ ಭೇಟಿಯಾಗಿ: ಪವರ್ ಸ್ಟಾರ್ ಆಗಮನದ ನಿರೀಕ್ಷೆಯಲ್ಲಿ ಅಂಧ ಸಹೋದರಿಯರು !
ಒಪ್ಪೋ A5 2020: ಅಮೇಜಾನ್ ಇಂಡಿಯಾದಲ್ಲಿ ಒಪ್ಪೋ ಎ5 2020 ಕೂಡ 9,990 ರೂ. ಗಳಿಗೆ ರಿಯಾಯಿತಿ ದರದಲ್ಲಿ ದೊರಕುತ್ತಿದೆ. ಇದರ ಮೂಲ ಬೆಲೆ 14,990. ಈ ಸ್ಮಾರ್ಟ್ ಪೋನ್ ಅತ್ಯುತ್ತಮ ಫೀಚರ್ ಗಳನ್ನು ಒಳಗೊಂಡಿದ್ದು ಇದರಲ್ಲಿ ಕ್ಯಾಡ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ S10 ಪ್ಲಸ್: 79 ಸಾವಿರ ಮೂಲ ಬೆಲೆ ಹೊಂದಿರುವ ಗ್ಯಾಲಕ್ಸಿ ಎಸ್ 10 ಪ್ಲಸ್ 44,990ಕ್ಕೆ ದೊರಕುತ್ತಿದೆ. ಇದರಲ್ಲಿ 6.4 ಇಂಚಿನ ಕ್ವಾಡ್ HD+ ಅಮೋಲ್ಡ್ ಡಿಸ್ ಪ್ಲೇ ಹೊಂದಿದೆ. ಎಕ್ಸಿನೋಸ್ 9820 ಪ್ರೊಸೆಸ್ಸರ್ ಇದ್ದು 12 ಜಿಬಿ ವರೆಗೂ ವಿಸ್ತರಿಸಬಹುದಾದ ರ್ಯಾಮ್ ಹಾಗೂ 1ಟಿಬಿ ಇನ್ ಬಿಲ್ಟ್ ಸ್ಟೋರೇಜ್ ಒಳಗೊಂಡಿದೆ. ಇದರ ಬ್ಯಾಟರಿ ಸಾಮರ್ಥ್ಯ 4,100mAh
ಇದನ್ನೂ ಓದಿ: ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆಯ ಬಾಗಿಲಿನಲ್ಲಿಟ್ಟ ಪತಿ: ಬೆಚ್ಚಿಬೀಳುವ ಘಟನೆ !