ಬೆಂಗಳೂರು: ದೇಶದಲ್ಲಿ ಬಹು ನಿರೀಕ್ಷಿತ “ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (ಜಿಐಎಫ್) ಇದೇ ಅ.8ರಿಂದ ಪ್ರಾರಂಭವಾಗಲಿದೆ. ಅಮೆಜಾನ್ ಸದಸ್ಯತ್ವ ಹೊಂದಿರುವವರು 24 ಗಂಟೆ ಮುಂಚಿತವಾಗಿಯೇ ವ್ಯಾಪಕ ಉತ್ಪನ್ನಗಳ ಮೇಲೆ ಹಿಂದೆಂದೂ ನೋಡಿರದ ರಿಯಾಯಿತಿಯಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ.
ಈ ಕುರಿತು ಮಾತನಾಡಿದ ಅಮೆಜಾನ್‌ನ ಭಾರತದ ಗ್ರಾಹಕ ವ್ಯಾಪಾರದ ಉಪಾಧ್ಯಕ್ಷ ಮತ್ತು ಕಂಟ್ರಿ ಮ್ಯಾನೇಜರ್ ಮನೀಷ್
ತಿವಾರಿ, ಪ್ಯಾನ್ ಇಂಡಿಯಾ ಇರುವ ಅಮೆಜಾನ್ ಗ್ರಾಹಕರಿಗೆ ವ್ಯಾಪಕವಾದ ಆಯ್ಕೆ, ಸಾಟಿಯಿಲ್ಲದ ಮೌಲ್ಯ ಹಾಗೂ ಅನುಕೂಲ ನೀಡಲು ಸಜ್ಜಾಗಿದ್ದೇವೆ. ಗ್ರಾಹಕರು ಎಲ್ಲಿಂ ದಾದರೂ, ಯಾವ ಸಮಯದಲ್ಲಿ ಬೇಕಾದರೂ ಶಾಪಿಂಗ್ ಮಾಡಬಹುದು. ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ 2023 ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಉಪಯುಕ್ತವಾಗಲಿದ್ದು, ಅಮೆಜಾನ್ ಲೈವ್ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಿದೆ. ಇದರಿಂದ ಗ್ರಾಹಕರು ಮತ್ತು ಮಾರಾಟಗಾರರು ಉತ್ತಮ ಕೊಡುಗೆಗಳನ್ನು ಪಡೆಯಬಹುದು ಎಂದು ಹೇಳಿದರು.
ಅಮೆಜಾನ್ ಇಂಡಿಯಾನಿಂದ ನಿಯೋಜಿಸಲಾದ “ನೀಲ್ಸನ್ ಮೀಡಿಯಾ’ ನಡೆಸಿದ ಇತ್ತೀಚಿನ ಅಧ್ಯಯನ ಪ್ರಕಾರ, ದೇಶಾದ್ಯಂತ ಗ್ರಾಹಕರು “ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್’ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡಲು ಹಿಂದಿಗಿಂತ ಈ ಬಾರಿ ಹೆಚ್ಚು ಉತ್ಸುಕರಾಗಿರುವುದು ತಿಳಿದುಬಂದಿದೆ. ಶೇ.81ರಷ್ಟು ಗ್ರಾಹಕರು ಬಲವಾದ ಉದ್ದೇಶ ಸೂಚಿಸಿದ್ದರೆ, ಶೇ.78ರಷ್ಟು ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚು ಒಲವು ತೋರಿಸಿದ್ದಾರೆ. ಶೇ.68ರಷ್ಟು ಗ್ರಾಹಕರಿಗೆ ಅಮೆಜಾನ್.ಇನ್ ಆನ್‌ಲೈನ್ ಶಾಪಿಂಗ್ ತಾಣವಾಗಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
ಈ ಫೆಸ್ಟಿವಲ್‌ನ ಅನುಕೂಲತೆಗಳು: ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು 5,699 ರೂ.ಗಳಿಂದ ಪ್ರಾರಂಭವಾದರೆ, 5ಜಿ ಮೊಬೈಲ್‌ಗಳು 8,999 ರೂ. ಗಳಿಂದ ಆರಂಭ. ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳು ಕೇವಲ 99 ರೂ.ನಿಂದ ಪ್ರಾರಂಭವಾಗಲಿದೆ.
ಉಪಕರಣಗಳ ಮೇಲೆ ಶೇ.65ರವರೆಗೆ, ಟಿವಿಗಳಿಗೆ ಶೇ.60ರವರೆಗೆ ರಿಯಾಯಿತಿ ಇರಲಿದೆ. ಅತ್ಯುತ್ತಮ ಫ್ಯಾಷನ್ ಮತ್ತು ಸೌಂದರ್ಯ ಬ್ರ್ಯಾಂಡ್‌ಗಳ ಮೇಲೆ ಶೇ.50ರಿಂದ 80ರಷ್ಟು ರಿಯಾಯಿತಿ, 18 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐನಲ್ಲಿ ಮೊಬೈಲ್, ಟಿವಿ, ಲ್ಯಾಪ್‌ಟಾಪ್, ಎಲೆಕ್ಟ್ರಾನಿಕ್ಸ ಉಪಕರಣಗಳನ್ನು ಖರೀದಿಸಬಹುದಾಗಿದೆ.
ಎಸ್‌ಬಿಐ ಬ್ಯಾಂಕಿನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಉಳ್ಳವರು ಶೇ.10ರಷ್ಟು ತ್ವರಿತ ರಿಯಾಯಿತಿ, ಅಮೆಜಾನ್ ಪೇ ಲೇಟರ್‌ನಲ್ಲಿ ಈಗ ಶಾಪಿಂಗ್ ಮಾಡಿ, ಮುಂದಿನ ತಿಂಗಳು ಪಾವತಿಸಲು ಒಂದು ಲಕ್ಷ ರೂ.ವರೆಗೆ ತ್ವರಿತ ಕ್ರೆಡಿಟ್ ಪಡೆಯಬಹುದಾಗಿದೆ. ಜೀವಮಾನದ ಉಚಿತ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು ಶೇ.5ರಷ್ಟು
ಅನಿಯಮಿತ ಕ್ಯಾಶ್‌ಬ್ಯಾಕ್ ಗಳಿಸಬಹುದು. ಕಾರ್ಡ್‌ಗೆ ಅರ್ಜಿ ಸಲ್ಲಿಸುವವರು 2,500 ರೂ. ಮೌಲ್ಯದ ಸ್ವಾಗತಾರ್ಹ ಬಹುಮಾನ ಸೇರಿದಂತೆ ನಾನಾ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.