ಹೊಸದಿಲ್ಲಿ: ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) ಇ ಕಾಮರ್ಸ್ ದೈತ್ಯ ಅಮೆಜಾನ್ ಗೆ ನೊಟೀಸ್ ಜಾರಿ ಮಾಡಿದೆ. ಅಯೋಧ್ಯೆ ರಾಮ ಮಂದಿರದ ಪ್ರಸಾದದ ಹೆಸರಿನಲ್ಲಿ ತಪ್ಪು ಸಿಹಿ ತಿಂಡಿ ಮಾರಾಟ ಮಾಡಿದ ಕಾರಣಕ್ಕೆ ನೊಟೀಸ್ ಜಾರಿ ಮಾಡಲಾಗಿದೆ.
ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ ಸಜ್ಜಾಗಿರುವ ಅಯೋಧ್ಯೆಯ ರಾಮ ಮಂದಿರದ ಪ್ರಸಾದದ ಹೆಸರಲ್ಲಿ ಅಮೆಜಾನ್ ಸಿಹಿತಿಂಡಿಗಳ ಮಾರಾಟವನ್ನು ಒಳಗೊಂಡ ಮೋಸಗೊಳಿಸುವ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ದೂರಿನ ಆಧಾರದ ಮೇಲೆ ಕೇಂದ್ರ ಸರ್ಕಾರದ ಅಡಿಯಲ್ಲಿ ನಿಯಂತ್ರಣ ಪ್ರಾಧಿಕಾರವು ಈ ಕ್ರಮವನ್ನು ಪ್ರಾರಂಭಿಸಿದೆ.
ಏಳು ದಿನದೊಳಗೆ ಉತ್ತರ ನೀಡುವಂತೆ ಪ್ರಾಧಿಕಾರವು ಅಮೆಜಾನ್ ಗೆ ತಿಳಿಸಿದೆ. ಒಂದು ವೇಳೆ ಉತ್ತರ ಕೊಡಲು ಅಸಾಧ್ಯವಾದರೆ ಗ್ರಾಹಕ ಸಂರಕ್ಷಣಾ ಕಾಯಿದೆ, 2019ರ ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಪ್ರಕರಣದ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಅಮೆಜಾನ್ ಮಾಹಿತಿ ನೀಡಿದೆ.
ಅಮೆಜಾನ್ ನಲ್ಲಿ ವಿವಿಧ ಸಿಹಿತಿಂಡಿಗಳು/ ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ ಎಂದು ಅಧಿಕಾರಿಗಳು ಗಮನಿಸಿದ್ದಾರೆ, ಅವುಗಳನ್ನು “ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ” ಎಂದು ಹೇಳಿಕೊಂಡು ಮಾರಾಟ ಮಾಡಲಾಗುತ್ತಿದೆ. ಆಹಾರ ಉತ್ಪನ್ನಗಳ ಮಾರಾಟವನ್ನು ಆನ್ ಲೈನ್ ನಲ್ಲಿ ಸಕ್ರಿಯಗೊಳಿಸಿದ್ದಾರೆ ಸಿಸಿಪಿಎ ಹೇಳಿದೆ.
‘ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ, ರಘುಪತಿ ತುಪ್ಪದ ಲಡ್ಡು, ಅಯೋಧ್ಯಾ ರಾಮಮಂದಿರ ಅಯೋಧ್ಯಾ ಪ್ರಸಾದ, ಖೋಯಾ ಖೋಬಿ ಲಡ್ಡು, ರಾಮಮಂದಿರ ಅಯೋಧ್ಯಾ ಪ್ರಸಾದ, ದೇಸಿ ಹಸುವಿನ ಹಾಲಿನ ಪೇಡಾ,’ ಇತ್ಯಾದಿಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.