Advertisement

ರೈಲು ನಿಲ್ದಾಣಕ್ಕೆ ಗಾಳಿಯಿಂದ ನೀರು

06:00 AM May 22, 2018 | |

ನವದೆಹಲಿ: ಒಡಿಶಾದ ರಾಜಧಾನಿಯಿಂದ 460 ಕಿ.ಮೀ ದೂರದ ರೌಲಿ ಎಂಬ ಕುಗ್ರಾಮದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಬೋರ್‌ವೆಲ್‌ ಕೊರೆಯಲಾಗಿದ್ದರೂ ನೀರಿನ ಸೆಲೆಯೇ ಇಲ್ಲ. ಹೀಗಾಗಿ ಇದೀಗ ಗಾಳಿಯಿಂದ ನೀರನ್ನು ಸೆರೆಹಿಡಿಯುವ ಯಂತ್ರವನ್ನು ಅಳವಡಿಸಲಾಗಿದೆ. ವಾತಾವರಣದಲ್ಲಿನ ತೇವಾಂಶವನ್ನು ಈ ಯಂತ್ರವು ಸೆರೆಹಿಡಿದು, ನೀರನ್ನು ಸಂಗ್ರಹಿಸುತ್ತದೆ. ಏಪ್ರಿಲ್‌ 25ರಂದು ಈ ಯಂತ್ರವನ್ನು ಸ್ಥಾಪಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಿದೆ. ಇಲ್ಲಿ ಪ್ರತಿ ದಿನ ಮೂರು ರೈಲುಗಳು ನಿಲ್ಲುತ್ತವೆ. ಇದೇ ತಂತ್ರವನ್ನು ನೀರಿನ ಕೊರತೆ ಇರುವ ಇತರ ರೈಲು ನಿಲ್ದಾಣಗಳಲ್ಲೂ ಅಳವಡಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಈಸ್ಟ್‌ ಕೋಸ್ಟ್‌ ರೈಲ್ವೆ ಪ್ರಧಾನ ವ್ಯವಸ್ಥಾಪಕ ಉಮೇಶ್‌ ಸಿಂಗ್‌ ಹೇಳಿದ್ದಾರೆ. 

Advertisement

ಈ ಯಂತ್ರವು 30-35 ಡಿಗ್ರಿ ತಾಪಮಾನದಲ್ಲಿ ಒಂದು ದಿನದಲ್ಲಿ 120 ಲೀಟರ್‌ ನೀರನ್ನು ಉತ್ಪಾದಿಸಬಲ್ಲದು. ಯಂತ್ರಕ್ಕೆ 2 ಲಕ್ಷ ರೂ. ವೆಚ್ಚವಾಗುತ್ತದೆ. ಇದಕ್ಕೂ ಮೊದಲು ಸಮೀಪದಲ್ಲಿ ಹರಿಯುತ್ತಿದ್ದ ತೊರೆಯ ನೀರನ್ನು ಬಳಸಲಾಗುತ್ತಿತ್ತು. ಆದರೆ ಇದು ಕುಡಿಯುವುದಕ್ಕೆ ಸೂಕ್ತವಾಗಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next