Advertisement

ಅಮರನಾಥ ಯಾತ್ರೆ ಪುನರಾರಂಭ; ಸೇನೆಯಿಂದ ಪರ್ಯಾಯ ಮಾರ್ಗ

03:31 PM Jul 11, 2022 | Team Udayavani |

ಜಮ್ಮು : ಪ್ರತಿಕೂಲ ಹವಾಮಾನ ಮತ್ತು ಮೇಘಸ್ಫೋಟದಿಂದಾಗಿ ಮೂರು ದಿನಗಳ ಕಾಲ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಸೋಮವಾರ ಪುನರಾರಂಭಗೊಂಡಿದೆ.

Advertisement

ಪವಿತ್ರ ಗುಹೆಯ ಮಾರ್ಗವನ್ನು ತೆರವುಗೊಳಿಸಿದ ನಂತರ 4,026 ಯಾತ್ರಿಕರ ಹೊಸ ತಂಡವು ಸೋಮವಾರ ಜಮ್ಮು ಮೂಲ ಶಿಬಿರದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದೆ. ಅಮರನಾಥ ಲಿಂಗ ಗುಹೆ ಮತ್ತು ಸುತ್ತಮುತ್ತಲಿನ ಪ್ರದೇಶದ ಇತ್ತೀಚಿನ ಎಲ್ಲಾ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗಿದೆ ಮತ್ತು ತಾಜಾ ಬ್ಯಾಚ್ ಭಕ್ತರಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿರಲು ಮಾರ್ಗವನ್ನು ಸಿದ್ದಪಡಿಸಲಾಗಿದೆ.

ಮೇಘಸ್ಫೋಟದಿಂದಾಗಿ ಶಿವನ ಪವಿತ್ರ ಗುಹೆಯ ಸುತ್ತಲಿನ ಪ್ರದೇಶವನ್ನು ಪ್ರವಾಹಕ್ಕೆ ಸಿಲುಕಿ ಕೆಲವು ಡೇರೆಗಳು ಸಹ ಕೊಚ್ಚಿಹೋಗಿ ಕೆಲವು ಭಕ್ತರು ಪ್ರಾಣ ಕಳೆದುಕೊಂಡಿದ್ದರು. ಸೋಮವಾರದ ಇತ್ತೀಚಿನ ವರದಿಗಳ ಪ್ರಕಾರ, ಕೆಲ ಯಾತ್ರಿಗಳು ಇನ್ನೂ ಕಾಣೆಯಾಗಿದ್ದು, ಅವರನ್ನು ಹುಡುಕುವ ಪ್ರಯತ್ನಗಳು ಭರದಿಂದ ಸಾಗುತ್ತಿದೆ. ಸೇನಾ ಪಡೆಗಳು, ಅರೆಸೇನಾ ಪಡೆಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಆಂಧ್ರ ಪ್ರದೇಶದ ಯಾತ್ರಾರ್ಥಿಗಳ ಕುರಿತು ಸರ್ಕಾರ ಸ್ಪಷ್ಟೀಕರಣ ನೀಡಿದ್ದು, ನಾಪತ್ತೆಯಾಗಿದ್ದ 35 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಇಬ್ಬರು ಕಾಣೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ಲಭ್ಯವಾಗಿವೆ.

ಯೋಧರು ಯಾತ್ರೆಗಾಗಿ ಸುರಕ್ಷಿತ ಮಾರ್ಗಗಳನ್ನು ಸಿದ್ದಪಡಿಸಿದ್ದಾರೆ. ಹೆಲಿಕ್ಯಾಪ್ಟಾರ್ ಮತ್ತು ತುರ್ತು ವಾಹನಗಳನ್ನು ಮುಂಜಾಗ್ರತಾ ಕ್ರಮವಾಗಿ ಸೇನೆ ಸಿದ್ಧಪಡಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next