Advertisement

ನಾಳೆಯಿಂದ ಅಮರನಾಥ ಯಾತ್ರೆ: ಸಕಲ ಸಿದ್ಧತೆಗಳೂ ಪೂರ್ಣ

09:35 PM Jun 29, 2023 | Team Udayavani |

ಪ್ರಸಕ್ತ ಸಾಲಿನ ಅಮರನಾಥ ಯಾತ್ರೆ ಜು.1ರಿಂದ ಅ.31ರಿಂದ 62 ದಿನಗಳ ಕಾಲ ನಡೆಯಲಿದೆ. ಈ ವರ್ಷದ ಅಮರನಾಥ ಯಾತ್ರೆಯು ಇದುವೆರಗಿನ ದೀರ್ಘ‌ಕಾಲದ ಯಾತ್ರೆಯಾಗಿದೆ. ಆನ್‌ಲೈನ್‌ ಜತೆಗೆ ಸ್ಥಳದಲ್ಲಿಯೇ ಯಾತ್ರಾರ್ಥಿಗಳಿಗೆ ನೋಂದಣಿ ಮಾಡಿಸಲೂ ಅನುಕೂಲ ಮಾಡಲಾಗಿದೆ.

Advertisement

ಟ್ರೆಕ್ಕಿಂಗ್‌ಗೆ ಎರಡು ಮಾರ್ಗ
ಯಾತ್ರಾರ್ಥಿಗಳು ಎರಡು ಮಾರ್ಗಗಳಲ್ಲಿ ನಡಿಗೆ ಮೂಲಕ ಗುಹಾ ದೇಗುಲ ತಲುಪಬಹುದು. ಬಲ್ತಾಲ್‌ ಮಾರ್ಗವಾಗಿ 14.5 ಕಿ.ಮೀ. ಟ್ರಕ್ಕಿಂಗ್‌ ಮಾಡಬೇಕಾಗುತ್ತದೆ. ಈ ದಾರಿ ಕೊಂಚ ಕಡಿದಾಗಿದೆ. ಮತ್ತೂಂದು ಚಂದನ್‌ವಾರಿ ಮಾರ್ಗವಾಗಿ 32 ಕಿ.ಮೀ. ಟ್ರಕ್ಕಿಂಗ್‌ ಮಾಡಬೇಕಾಗುತ್ತದೆ.

ಯಾತ್ರಿಗಳಿಗೆ ಏನೇನು ಸೌಲಭ್ಯ?
– ಗರಿಷ್ಠ 70 ವರ್ಷದ ವರೆಗೆ ಆರೋಗ್ಯ ಇರುವವರೂ ಯಾತ್ರೆ ಮಾಡಬಹುದು.
– ಕಾಲ್ನಡಿಗೆ ಮಾರ್ಗಗಳನ್ನು ವಿಸ್ತರಿಸಲಾಗಿದೆ. ಅಲ್ಲಿ ಹ್ಯಾಂಡ್‌ ರೇಲಿಂಗ್ಸ್‌ಗಳ ಅಳವಡಿಕೆ
– ಯಾತ್ರಾರ್ಥಿಗಳಿಗಾಗಿ ಟೆಂಟ್‌ಗಳನ್ನು ಸಿದ್ಧಪಡಿಸಲಾಗಿದೆ. ಕೆಲವು ಘಟ್ಟಗಳಲ್ಲಿ ಹೆಲ್ಮಟ್‌ಗಳು ಲಭ್ಯ.
– ಪ್ರತಿ ಯಾತ್ರಿಕನಿಗೆ ಆರ್‌ಎಫ್ಐಡಿ ಕಾರ್ಡ್‌. 5 ಲಕ್ಷ ರೂ ವಿಮೆ. ಪ್ರಾಣಿಗಳಿಗೆ 50 ಸಾವಿರ ರೂ. ಮೌಲ್ಯದ ವಿಮೆ.

ಐಟಿಬಿಪಿ ಯೋಧರ ನಿಯೋಜನೆ
ಯಾತ್ರೆಯ ಭದ್ರತೆಗಾಗಿ ಸಿಆರ್‌ಪಿಎಫ್ ಬದಲಾಗಿ ಇಂಡೊ-ಟಿಬೇಟನ್‌ ಗಡಿ ಪೊಲೀಸ್‌(ಐಟಿಬಿಪಿ) ಸಿಬ್ಬಂದಿ ನಿಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಪ್ರವಾಹದಿಂದ 16 ಮಂದಿ ಯಾತ್ರಿಕರು ಮೃತಪಟ್ಟರು. ಈ ವೇಳೆ ಐಟಿಬಿಪಿ ಯೋಧರು ಧಾವಿಸಿ ಯಾತ್ರಾರ್ಥಿಗಳನ್ನು ರಕ್ಷಿಸಿದರು. ಗುಡ್ಡಗಾಡು ಪ್ರದೇಶ ಕಾರ್ಯಾಚರಣೆಯಲ್ಲಿ ಅವರಿಗೆ ಹೆಚ್ಚಿನ ಅನುಭವ ಇರುವುದರಿಂದ ಈ ನಿರ್ಧಾರ. ಇದಲ್ಲದೆ ಬಿಎಸ್‌ಎಫ್ ಯೋಧರನ್ನೂ ಆರು ಸ್ಥಳಗಳಲ್ಲಿ ನಿಯೋಜಿಸಲಾಗುತ್ತದೆ.

ಇಂಟರ್ನೆಟ್‌ ಸೌಲಭ್ಯ:
ಭಾರಿ ಮಳೆ, ಪ್ರವಾಹ, ಭೂಕುಸಿತದಂತಹ ತುರ್ತು ಪರಿಸ್ಥಿತಿಗಳಲ್ಲಿ ಯಾತ್ರಾರ್ಥಿಗಳ ರಕ್ಷಣೆಗಾಗಿ ಪರ್ವತಾ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಯಾತ್ರಾರ್ಥಿಗಳಿಗಾಗಿ ಅಲ್ಲಲ್ಲಿ ಮೊಬೈಲ್‌ ವೈಫೈ, ಇಂಟರ್ನೆಟ್‌ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Advertisement

ಆನ್‌ಲೈನ್‌ನಲ್ಲಿ ನೋಂದಣಿಗೆ:https://jksasb.nic.in/onlineservices/agreeme.html ಭೇಟಿ ನೀಡಿ.

3 ಲಕ್ಷ ನೋಂದಣಿ- ಇದುವರೆಗೆ ಆನ್‌ಲೈನ್‌ನಲ್ಲಿ ನೋಂದಣಿಯಾದವರು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10 ಏರಿಕೆ.
13,000 ಅಡಿ– ಸಮುದ್ರ ಮಟ್ಟದಿಂದ ಇರುವ ಎತ್ತರ
ದೇಗುಲ ಎಲ್ಲಿದೆ? - ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next