Advertisement

ಈಗ ಅಮರನಾಥ ದೇಗುಲದವರೆಗೆ ರಸ್ತೆ: ಬಹುನಿರೀಕ್ಷಿತ ಕಾಮಗಾರಿ ಮುಕ್ತಾಯ, ಬಿಆರ್‌ಒ ಸಾಧನೆ

01:23 AM Nov 08, 2023 | Team Udayavani |

ಶ್ರೀನಗರ: ಮುಂದಿನ ವರ್ಷದಿಂದ ಪವಿತ್ರ ಅಮರನಾಥ ಯಾತ್ರೆ ಇನ್ನಷ್ಟು ಆರಾಮ ದಾಯಕವಾಗಲಿದೆ. ಹಿಮಾಚ್ಛಾದಿತ ಗುಹೆಯಲ್ಲಿ ಇರುವ ಶಿವ ದೇವರ ದರ್ಶನಕ್ಕೆ ವಾಹನ ಗಳಲ್ಲಿಯೇ ತೆರಳಲು ಅನುಕೂಲಕರವಾದ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬಾರ್ಡರ್‌ ರೋಡ್‌ ಆರ್ಗನೈಸೇಶನ್‌ (ಬಿಆರ್‌ಒ) ಈ ಐತಿಹಾಸಿಕ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

Advertisement

ಸಮುದ್ರ ಮಟ್ಟದಿಂದ 13 ಸಾವಿರ ಅಡಿ ಎತ್ತರದಲ್ಲಿ ಇರುವ ಈ ಪವಿತ್ರ ಸ್ಥಳಕ್ಕೆ “ಪ್ರಾಜೆಕ್ಟ್ ಬೀಕನ್‌’ ಹೆಸರಿ ನಲ್ಲಿ ರಸ್ತೆ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಬಿಆರ್‌ಒ ಕೈಗೆತ್ತಿಕೊಂಡಿತ್ತು. ಸದ್ಯ ಅಮರನಾಥಕ್ಕೆ ಪಾದಯಾತ್ರೆಯ ಮೂಲಕ ತೆರಳಲು ಎರಡು ದಾರಿಗಳಿವೆ.

ಕೇಂದ್ರ ಕಾಶ್ಮೀರದ ಸೋನಾ ಮಾರ್ಗದಲ್ಲಿರುವ ಬಲ್ತಾಲ್‌ನಿಂದ 14 ಕಿ.ಮೀ. ಮತ್ತು ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪೆಹಲ್‌ಗಾಂವ್‌ನಿಂದ 20 ಕಿ.ಮೀ. ಈ ಪೈಕಿ ಬಲ್ತಾಲ್‌ ಮೂಲಕ ತೆರಳುವುದೇ ಸನಿಹದ ಮಾರ್ಗ.

ಗಡ್ಕರಿ ಘೋಷಣೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಅಮರನಾಥದ ವರೆಗೆ 5,300 ಕೋಟಿ ರೂ. ವೆಚ್ಚದಲ್ಲಿ 110 ಕಿ.ಮೀ. ದೂರದ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಘೋಷಣೆ ಮಾಡಿದ್ದರು. ಕಾಮಗಾರಿ ಪೂರ್ತಿಗೊಂಡಿರುವುದರಿಂದ ಮುಂದಿನ ವರ್ಷದಿಂದ ಅದರ ಮೂಲಕವೇ ಯಾತ್ರಾರ್ಥಿಗಳು ದೇಗುಲ ಸಮೀಪದವರೆಗೆ ತೆರಳಲು ಸಾಧ್ಯವಾಗಲಿದೆ.

ದೇಗುಲದವರೆಗೆ ರಸ್ತೆ ನಿರ್ಮಾಣವನ್ನು ಪಿಡಿಪಿ ಟೀಕಿಸಿದ್ದು, “ಹಿಂದೂ ಸಮುದಾಯದ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿ ಇದಾಗಿದೆ. ಪ್ರಕೃತಿಯ ಮೇಲೆ ನಡೆಸಲಾಗಿರುವ ಹಲ್ಲೆ ಇದು’ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next