Advertisement

ಕಾಲಾನಂತರದಲ್ಲೂ ಸಾಧನೆ ಸ್ಮರಣೀಯ

05:11 PM Jan 02, 2021 | Team Udayavani |

ರಾಮನಗರ: ಜಡಕಲ್ಲುಗಳಿಗೆ ಉಳಿಪೆಟ್ಟು ಕೊಟ್ಟು ಶಿಲ್ಪಗಳನ್ನಾಗಿ ರೂಪಿಸಿ, ದೇವಾಲಯಗಳನ್ನು ನಿರ್ಮಿಸಿದ ಅಮರಶಿಲ್ಪಿ ಜಕಣಾಚಾರಿಯವರು ಸದಾ ಸ್ಮರಣೀಯರು ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು.

Advertisement

ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ, ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಂಯುಕ್ತವಾಗಿಆಯೋಜಿಸಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ನಾವು ಬದುಕಿದ್ದಾಗ ಮಾಡಿದ ಒಳ್ಳೆಯ ಕೆಲಸ ಮತ್ತು ಸೇವೆಗಳು ನಮ್ಮ ಕಾಲಾನಂತರವೂ ಇತರರು ನೆನೆಸಿಕೊಳ್ಳುವಂತಾಗಬೇಕು, ಅಮರ ಶಿಲ್ಪಿ ಜಕಣಾಚಾರಿಯವರು ಇಂದು ಸಹ ಸ್ಮರಣೀಯರು ಎಂದರು.

ದಾರ್ಶನಿಕರು, ತತ್ವಜಾ`ನಿಗಳು, ಶಿವಶರಣರು, ಶಿಲ್ಪಿಗಳು ಅವರು ಮಾಡಿರುವ ಕೆಲಸ ಕಾರ್ಯಗಳ ಮೂಲಕ ಅವರು ಸಮಾಜದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದಾಗ ಅದರಲ್ಲಿ ದೋಷವಿರಿವುದಾಗಿ ಡಕಣಾಚಾರಿ ಎಂಬ ಮತ್ತೂಬ್ಬ ಶಿಲ್ಪಿ ಆಕ್ಷೇಪಿಸುತ್ತಾರೆ. ದೋಷವಿದ್ದರೆ ತನ್ನ ಬಲಗೈಯನ್ನು ಕತ್ತಿರಿಸಿಕೊಳ್ಳುವುದಾಗಿ ಜಕಣಾಚಾರಿ ಸವಾಲು ಒಡ್ಡುತ್ತಾರೆ. ಆದರೆ ಶಿಲ್ಪ ಪರೀಕ್ಷಿಸಿದಾಗ ದೋಷ ಕಂಡುಬರುತ್ತದೆ. ಜಕಣಾಚಾರಿಯವರು ತಾವಾಡಿದ ಮಾತಿ ನಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ನಂತರ ಮತ್ತೂಂದು ಶಿಲ್ಪವನ್ನು ಕೆತ್ತಿ ದೈವಾನುಗ್ರಹದಿಂದ ಮತ್ತೆ ತಮ್ಮ ಬಲಗೈಯನ್ನು ಪಡೆದುಕೊಂಡರೆಂಬ ಪ್ರತೀತಿ ಇದೆ ಎಂದ ಅವರು ಇಂತಹ ಸದ್ಗುಣಗಳಿಂದಾಗಿಯೇ ಇವರೆಲ್ಲ ಇಂದು ನಮಗೆ ಮಾದರಿಯಾಗಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿನಯ್ ಕುಮಾರ್‌ ಮಾತನಾಡಿದರು. ವಿಶ್ವ ಕರ್ಮ ಸಮುದಾಯದಮುಖಂಡರಾದ ಬಸವರಾಜಾಚಾರ್ಯ, ದೇವಿಕಾ,ಚಂದಶೇಖರಯ್ಯ, ಆರ್‌. ಬಸವಾಚಾರ್‌ ಸೇರಿದಂತೆ ಮುಂತಾದ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪುಟ್ಟಸ್ವಾಮಿ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next