Advertisement
ಪ್ರತೀ ವರ್ಷ ಸೆಪ್ಟಂಬರ್ 21ನ್ನು ವಿಶ್ವ ಅಲ್ಜಿಮರ್ ದಿನವನ್ನಾಗಿ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಈ ಅನಾರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಈ ಕಾಯಿಲೆಯ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ದೂರ ಮಾಡುವುದು ಮತ್ತು ಈ ರೋಗಿಗಳ ಆರೈಕೆಗೆ ಇರುವ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಸರಕಾರಗಳು, ನೀತಿರೂಪಕರನ್ನು ಒತ್ತಾಯಿಸುವುದಕ್ಕೆ ಈ ದಿನ ಪ್ರಯತ್ನ ಪಡಲಾಗುತ್ತಿದೆ. ಅಲ್ಜೀಮರ್ ಡಿಮೆನ್ಶಿಯಾ ವಯೋವೃದ್ಧರನ್ನೇ ಹೆಚ್ಚಾಗಿ ಬಾಧಿಸುತ್ತದೆಯಾಗಿದ್ದು, ಒಟ್ಟು ಡಿಮೆನ್ಶಿಯಾ ಪ್ರಕರಣಗಳಲ್ಲಿ ಶೇ. 50ರಿಂದ 60ರಷ್ಟಿರುತ್ತದೆ. ವಯಸ್ಸು ಹೆಚ್ಚಿದಂತೆ ಡಿಮೆನ್ಶಿಯಾ ಬಾಧಿಸುವ ಪ್ರಮಾಣವೂ ಹೆಚ್ಚುತ್ತದೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಈ ತೊಂದರೆ ಶೇ. 0.6ರಷ್ಟಿದ್ದರೆ, 85 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಶೇ. 20ರಷ್ಟಿರುತ್ತದೆ. ಭಾರತದ ಜನಸಂಖ್ಯೆ 138 ಕೋಟಿಗಳಷ್ಟಿದ್ದು, ಇವರಲ್ಲಿ 14 ಕೋಟಿಯಷ್ಟು ಮಂದಿ ಹಿರಿಯ ನಾಗರಿಕರಾಗಿದ್ದಾರೆ. ಇವರಲ್ಲಿ ಶೇ.5ರಷ್ಟು ಮಂದಿ ಅಂದರೆ, 50 ಲಕ್ಷ ಮಂದಿ ಡಿಮೆನ್ಶಿಯಾದಿಂದ ಬಳಲುತ್ತಿದ್ದಾರೆ. ಡಿಮೆನ್ಶಿಯಾದ ವಿಧಗಳಲ್ಲಿ ಅಲ್ಜೀಮರ್ ಡಿಮೆನ್ಶಿಯಾ ಅತ್ಯಂತ ಸಾಮಾನ್ಯವಾದುದಾಗಿದೆ.
Related Articles
Advertisement
ಅಲ್ಜೀಮರ್ ಡಿಮೆನ್ಶಿಯಾ ಉಂಟಾಗಲು ಕಾರಣವೇನು ಎಂಬುದು ಇನ್ನೂ ಕೂಡ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಅಧ್ಯಯನಗಳು ಮತ್ತು ಸಂಶೋಧನೆಗಳು ಹೇಳುವ ಪ್ರಕಾರ, ನ್ಯೂರಾನ್‌ಗಳು (ಮಿದುಳಿನ ಅಂಗಾಂಶಗಳು) ಕ್ಷಯಿಸಲು ಆರಂಭವಾಗುತ್ತದೆ, ಪರಸ್ಪರ ಸಂಪರ್ಕ ಕಳೆದುಕೊಳ್ಳುತ್ತವೆ ಮತ್ತು ನಿಧಾನವಾಗಿ ಸಾಯುತ್ತವೆ.
ಅಲ್ಜೀಮರ್ಸ್ ಡಿಮೆನ್ಶಿಯಾ ಉಂಟಾಗಲು ಖಚಿತವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಆದರೆ ನ್ಯೂರಾನ್‌ಗಳು (ಮಿದುಳಿನ ಅಂಗಾಂಶಗಳು) ಕ್ಷಯಿಸಲು ಆರಂಭಿಸುತ್ತವೆ, ಪರಸ್ಪರ ಸಂಪರ್ಕ ಕಳೆದುಕೊಳ್ಳುತ್ತವೆ ಮತ್ತು ನಿಧಾನವಾಗಿ ಸಾಯುತ್ತವೆ. ಅಸಹಜ ಪ್ರೊಟೀನ್‌ಗಳು ಶೇಖರಣೆಯಾಗಿ ಮಿದುಳಿನ ಅಂಗಾಂಶಗಳ ಸುತ್ತ “ಅಮೈಲಾಯ್ಡ ಪ್ಲೇಕ್ಸ್’ ಮತ್ತು “ಟ್ಯಾಂಗಲ್ಸ್’ ಶೇಖರವಾಗುತ್ತವೆ. ಎಪಿಒಇ ಜೀನ್‌ನ ಇ4 ಆವೃತ್ತಿಯು ಅಪೊಲಿಪೊಪ್ರೊಟೀನ್ ಎಂಬ ಪ್ರೊಟೀನ್ ತಯಾರಾಗಲು ಸೂಚನೆಗಳನ್ನು ನೀಡುತ್ತದೆ. ಈ ವಂಶವಾಹಿಯು ಅಮಲಾಯ್ಡ ಪ್ಲೇಕ್‌ಗಳು ಮತ್ತು ಟ್ಯಾಂಗಲ್‌ಗಳು ಉಂಟಾಗಲು ಕಾರಣವಾಗಿರಬಹುದು.
ಹೆಚ್ಚುತ್ತಿರುವ ವಯಸ್ಸು, ಕೌಟುಂಬಿಕ ಚರಿತ್ರೆ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ತಲೆಯ ಗಾಯದ ಚರಿತ್ರೆ, ಮಾದಕ ದ್ರವ್ಯ ಮತ್ತು ಧೂಮಪಾನ, ಆಲಸಿ ಜೀವನಶೈಲಿ, ಕಳಪೆ ನಿದ್ದೆಯ ಅಭ್ಯಾಸಗಳು, ಔಪಚಾರಿಕ ಶಿಕ್ಷಣದ ಕೊರತೆ ಇತ್ಯಾದಿಗಳು ಡಿಮೆನ್ಶಿಯಾದ ಅಪಾಯಾಂಶಗಳಾಗಿವೆ.
ಅಲ್ಜೀಮರ್ಸ್ ಕಾಯಿಲೆ ಪತ್ತೆ ಮಾಡುವ ಸಂದರ್ಭದಲ್ಲಿ ಮಾದಕದ್ರವ್ಯ ಸೇವನೆ, ಪೌಷ್ಟಿಕಾಂಶ, ಹೃದ್ರೋಗ, ಎನ್‌ಪಿಎಚ್/ಎಸ್‌ಒಎಲ್/ ಗಡ್ಡೆಗಳು, ಸಬ್‌ಡ್ನೂರಲ್ ಹೆಮಟೋಮಾ, ಸೋಂಕುಗಳು, ಮೂಛೆìರೋಗ, ಕುಶಿಂಗ್ಸ್/ ಅಡಿಸನ್ಸ್/ ಹೈಪೊಥೈರಾಯಿxಸಂ, ದೀರ್ಘಕಾಲಿಕ ಮೂತ್ರಪಿಂಡ ವೈಫಲ್ಯ/ ಪಿತ್ತಕೋಶ ವೈಫಲ್ಯ ಮತ್ತು ವಿಲ್ಸನ್ಸ್ ಕಾಯಿಲೆಗಳು ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಸಂಪೂರ್ಣವಾದ ವೈದ್ಯಕೀಯ ಮತ್ತು ಮಾನಸಿಕ ಚರಿತ್ರೆ ಹಾಗೂ ಸಂಪೂರ್ಣವಾದ ದೈಹಿಕ ಮತ್ತು ನರಶಾಸ್ತ್ರೀಯ ತಪಾಸಣೆಗಳನ್ನು ನಡೆಸಲಾಗುತ್ತದೆ. ರೂಢಿಗತ ರಕ್ತ ಮತ್ತು ಮೂತ್ರ ಪರೀಕ್ಷೆಗಳು, ಸಿಟಿ ಸ್ಕ್ಯಾನ್ ಮತ್ತು/ ಎಂಆರ್‌ಐ ಸ್ಕ್ಯಾನ್, ಮಾನಸಿಕ ಸ್ಥಿತಿಗತಿಯ ಪರೀಕ್ಷೆಗಳನ್ನು ಮಾನಸಿಕ ಕ್ಷಯಿಸುವಿಕೆಯನ್ನು ನಿರ್ಧರಿಸಲು ನಡೆಸಬೇಕಾಗುತ್ತದೆ. ಅವಲಂಬನೆಯ ಪ್ರಮಾಣವನ್ನು ತಿಳಿದುಕೊಳ್ಳಲು ಆರೈಕೆದಾರರ ಜತೆಗೆ ಸಮಾಲೋಚಿಸಲಾಗುತ್ತದೆ.
ಅಲ್ಜೀಮರ್ಸ್ ಡಿಮೆನ್ಶಿಯಾ ಗುಣವಾಗುವುದಿಲ್ಲ. ಕಾಯಿಲೆಯ ಪ್ರಗತಿಯನ್ನು (ಮಿದುಳಿನ ಅಂಗಾಂಶಗಳ ಕ್ಷಯಿಸುವಿಕೆಯನ್ನು) ವಿಳಂಬಗೊಳಿಸುವುದು, ಆರೈಕೆಯನ್ನು ಸಮುದಾಯದಲ್ಲಿ ಹಂಚಿಕೊಳ್ಳುವ ಮೂಲಕ ಆರೈಕೆದಾರರ ಮೇಲಣ ಹೊರೆಯನ್ನು ಕಡಿಮೆ ಮಾಡಲಾಗುತ್ತದೆ. ಕೊಲೈನ್‌ಸ್ಟಿರೇಸ್ ಇನ್‌ಹಿಬಿಟರ್‌ಗಳು-ಗಲಾಟಾಮೈನ್, ರಿವಾಸ್ಟಿಜಿಮೈನ್, ಡೊನೆಪಿಜಿಲ್ ಮತ್ತು ಮೆಮಾಂಟೈನ್ ಲಭ್ಯವಿರುವ ಕಾಯಿಲೆಯ ಪ್ರಗತಿಯನ್ನು ನಿಧಾನಗೊಳಿಸುವ ಏಜೆಂಟ್‌ಗಳಾಗಿವೆ. ಅಡುಕನುಮಾಬ್ ಔಷಧವನ್ನು ಈಚೆಗೆ ಎಫ್ಡಿಎ ಮನುಷ್ಯರಲ್ಲಿ ಆ್ಯಂಟಿಬಾಡಿ ಅಥವಾ ಇಮ್ಯುನೊಥೆರಪಿಗೆ ಅನುಮೋದಿಸಿದೆ. ಇದು ಪ್ರೊಟೀನ್ ಬೀಟಾ-ಅಮಲಾಯ್ಡಗಳನ್ನು ಗುರಿಪಡಿಸುತ್ತಿದ್ದು, ಅಮಲಾಯ್ಡ ಪ್ಲೇಕ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನಿತರ ಯಾವುದೇ ವೈದ್ಯಕೀಯ ಮತ್ತು ಮನೋಶಾಸ್ತ್ರೀಯ ಸಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕಾಗಿರುತ್ತದೆ. – ಡಾ| ಕೃತಿಶ್ರೀ ಸೋಮಣ್ಣ
ಕನ್ಸಲ್ಟಂಟ್ ಸೈಕಿಯಾಟ್ರಿ
ಕೆಎಂಸಿ ಆಸ್ಪತ್ರೆ, ಮಂಗಳೂರು