Advertisement
ಈ ಬಾರಿಯ ಚಿತ್ರಸಿರಿ ಸಮಕಾಲೀನ ಕಲಾ ಶಿಬಿರದಲ್ಲಿ 25 ಮಂದಿ ರಾಜ್ಯಮಟ್ಟದ ಚಿತ್ರಕಲಾವಿದರು ಹಾಗೂ 28 ವ್ಯಂಗ್ಯಚಿತ್ರ ಕಲಾವಿದರು ಭಾಗವಹಿಸಿದ್ದು ನೂರಕ್ಕೂ ಹೆಚ್ಚು ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿದರು. ಆ ಕಲಾಕೃತಿಗಳನ್ನು ವೀಕ್ಷಣೆಗಾಗಿ ಅಚ್ಚುಕಟ್ಟಾಗಿ ಜೋಡಿಸಿಡಲಾಗಿತ್ತು. ಕಲಾವಿದರಾದ ಗಣಪತಿ ಹೆಗಡೆ, ಉಮೇಶ್ ವಿ.ಎಂ., ಭವನ್ ಪಿ.ಜಿ., ಹೆಚ್. ಸುಪ್ರೀತ್, ಸತೀಶ್ಚಂದ್ರ ಎಸ್.ಎಸ್., ಆಕಾಶ್ ಎಸ್. ಅಳ್ಳಿ., ಯೋಗೀಶ್ ಸಿ. ಮಾತಡ್, ಶೀಲವಂತ್, ಡಾ. ಅಶೋಕ್ ಎಸ್. ಶಟಕಾರ, ಬಿ.ವಿ.ಕಾಮಾಜಿ, ಗಣೇಶ್ ಪಿ. ದೊಡಮನಿ, ಸಂಜೀವ ಕುಲಕರ್ಣಿ, ದಿಲೀಪ್ ಡಿ.ಆರ್., ರೇಣುಕಾ ಕೇಸರಮಡು, ಕುಮಾರ್ ಕೆ.ಜಿ. ,ಮಂಜುನಾಥ್ ಹೆಚ್.ಪಿ., ದೇವರಾಜ್, ಅಬ್ದುಲ್ಲತೀಫ್ ಸಿ., ಅಶ್ವಿನಿ ಎನ್.ಕೆ., ಮಂಜುನಾಥ್ ಬಿ. ಬಡಿಗೇರ್, ಮಂಜುನಾಥ್ ಕೆ.ಭಂಡಾರೆ, ಮಾಲೆ¤àಶ್ ಎಂ. ಗರಡಿಮನೆ, ಕೆ.ವಿ.ಕಾಳೆ, ಡಾ.ಸಂತೋಷ್ ಕುಮಾರ್ ಕುಲಕರ್ಣಿ, ಮಂಜುನಾಥ್ ಬಿ ಸೊರಟೂರು ಮುಂತಾದವರು ಕ್ಯಾನ್ವಾಸ್ ಮೇಲೆ ತಮ್ಮ ಕೌಶಲವನ್ನು ತುಂಬಿಸಿದರು. ಜನಪದೀಯ ಆಚರಣೆಗಳು, ಪ್ರಚಲಿತ ಸಮಸ್ಯೆಗಳನ್ನು ವಿಷಯವಾಗಿಟ್ಟುಕೊಂಡು ಅದಕ್ಕೆ ಸೃಜನಶೀಲತೆಯ ಸ್ಪರ್ಶಕೊಟ್ಟು ಸಾಂಪ್ರದಾಯಿಕ ಹಾಗೂ ನವ್ಯ ಕೃತಿಗಳನ್ನು ಚಿತ್ರಿಸಿದರು. ಸಾದೃಶ್ಯತೆಯನ್ನು ಮಾತ್ರ ಚಿತ್ರಿಸುವುದು ಕಲಾವಿದನ ಕೆಲಸವಲ್ಲ. ಇಂದ್ರಿಯಗೋಚರ ವಿಷಯವನ್ನು ಸಮಕಾಲೀನತೆಯೊಂದಿಗೆ ಮಂಥನ ಮಾಡಿ ಕ್ಯಾನ್ವಾಸ್ ಮೇಲೆ ರೂಪಿಸುವುದು ಕಲಾವಿದನ ಮುಖ್ಯ ಕೆಲಸವಾಗುತ್ತದೆ ಎಂಬ ಅಂಶ ಕಲಾಕೃತಿಗಳನ್ನು ವೀಕ್ಷಿಸಿದಾಗ ನಮಗೆ ಅರಿವಾಗುತ್ತದೆ. ಕೊನೆಯಲ್ಲಿ ಗಣೇಶ ಸೋಮಯಾಜಿ ಅವರಿಗೆ ಚಿತ್ರಸಿರಿ ಪ್ರಶಸ್ತಿ, ಕೆ.ಆರ್.ಸ್ವಾಮಿಯವರಿಗೆ ವ್ಯಂಗ್ಯಸಿರಿ ಪ್ರಶಸ್ತಿ ಹಾಗೂ ಎಸ್. ತಿಪ್ಪೇಸ್ವಾಮಿಯವರಿಗೆ ಛಾಯಾಚಿತ್ರಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಕಲಾಸಂಗಮವಾದ ಚಿತ್ರಸಿರಿ
06:10 AM Dec 21, 2018 | |
Advertisement
Udayavani is now on Telegram. Click here to join our channel and stay updated with the latest news.