Advertisement

ಖಾಸಗಿ ಶಾಲೆಗಳಲ್ಲೂ ಪರ್ಯಾಯ ವಿದ್ಯಾಗಮ

12:33 PM Jan 02, 2021 | Team Udayavani |

ಬೆಂಗಳೂರು: ವಿದ್ಯಾಗಮ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳು ಅನುಷ್ಠಾನ ಮಾಡಿಕೊಳ್ಳ ಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮುಕ್ತಅವಕಾಶ ನೀಡಿದ್ದರೂ, ಖಾಸಗಿ ಶಾಲಾಡಳಿತ ಮಂಡಳಿಗಳು ವಿದ್ಯಾಗಮದ ಬದಲಿಗೆ ಪರ್ಯಾಯ ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿವೆ.

Advertisement

ರಾಜ್ಯದಲ್ಲಿ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭವಾಗಿದೆ.ಹಾಗೆಯೇ ಸರ್ಕಾರಿ ಶಾಲೆಗಳ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿ ಶುರ ವಾಗಿದೆ. ಬಹುತೇಕ ಅನುದಾನಿತ ಶಾಲೆಗಳಲ್ಲೂವಿದ್ಯಾಗಮ ತರಗತಿಗಳನ್ನು ಆರಂಭಿಸಿವೆ. ಆದರೆ, ಖಾಸಗಿ ಶಾಲಾಡಳಿತ ಮಂಡಳಿಗಳು ವಿದ್ಯಾಗಮದಬದಲಿಗೆ ತಮ್ಮದೇ ವಿಧಾನದ ಮೂಲಕವಿದ್ಯಾರ್ಥಿಗಳಿಗೆ ಶಾಲಾವರಣದಲ್ಲಿ ಕಲಿಕೆಗೆ ವ್ಯವಸ್ಥೆ ಮಾಡಲು ಸಜ್ಜಾಗಿವೆ.

ವಿದ್ಯಾಗಮ ಅಥವಾ ಪರ್ಯಾಯ ಬೋಧನಾ ವಿಧಾನವನ್ನು 6 ರಿಂದ 9ನೇ ತರಗತಿ ವಿದ್ಯಾರ್ಥಿ ಗಳಿಗೆ ಶಾಲಾವರಣದಲ್ಲೇ ನಡೆಸಲು ಸರ್ಕಾರಹಾಗೂ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.ಅದಂತೆ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನುಎರಡು ದಿನಕ್ಕೊಮ್ಮೆ ಶಾಲೆಗೆ ಕರೆಸಿ, ಪಾಠಮಾಡಲು ಬೇಕಾದ ಎಲ್ಲ ತಯಾರಿಯಾಗಿದೆ.6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆಮಾಡುವ ಶಿಕ್ಷಕ ವೃಂದಕ್ಕೂ ಈ ಮಾಹಿತಿಯನ್ನು ಒದಗಿಸಿದ್ದೇವೆ. ಈ ಮಕ್ಕಳಿಗೆ ನಿತ್ಯದ ತರಗತಿ ನಡೆಸುವಂತಿಲ್ಲ. ಬದಲಾಗಿ ವಿದ್ಯಾಗಮ ಮಾದರಿಯ ಬೋಧನಾ ವಿಧಾನವನ್ನೇ ಅನುಸರಿಸಬೇಕು ಎಂದು ಸೂಚನೆ ನೀಡಿದ್ದೇವೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದಂತೆ ಆಯಾ ಶಾಲೆಗಳಲ್ಲಿ ತಮ್ಮದೇ ಬೋಧನಾ ವಿಧಾನವನ್ನು ಅನುಸರಿಸಿಕೊಂಡು ಶಾಲಾವರಣದಲ್ಲೇ ಪಾಠ ಆರಂಭಿಸಿದ್ದಾರೆ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ : ನೂತನ ಕೃಷಿ ಕಾಯ್ದೆ: ಜನವರಿ 4ರ ಮಾತುಕತೆ ವಿಫಲಗೊಂಡರೆ ಟ್ರ್ಯಾಕ್ಟರ್ ರಾಲಿ: ರೈತ ಸಂಘಟನೆ

ಕ್ಯಾಮ್ಸ್‌ ಮತ್ತು ಕರ್ನಾಟಕ ಅನುದಾನ ರಹಿತ ಶಾಲಾಡಳಿತ ಮಂಡಳಿಗಳ ಸಂಘ( ಕುಸ್ಮಾ),ಕರ್ನಾಟಕ ಸ್ವತಂತ್ರ ಸಿಬಿಎಸ್‌ಇ ಶಾಲೆಗಳಸಂಘ(ಎಂಐಸಿಎಸ್‌ಎ-ಕೆ) ಮೊದಲಾದಸಂಘಟನೆಗಳ ವ್ಯಾಪ್ತಿಯ ಶಾಲೆಯಲ್ಲಿ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮದೇ ವಿಧಾನದಮೂಲಕ ಪಾಠ ನಡೆಸಲು ಯೋಜನೆ ಹಾಗೂ ವೇಳಾಪಟ್ಟಿಯನ್ನು ರೂಪಿಸಿಕೊಂಡಿವೆ. ವಿದ್ಯಾಗಮ ಅನುಷ್ಠಾನ: ಆದರೆ, ರಾಜ್ಯದಲ್ಲಿ 12 ಸಾವಿರಕ್ಕೂ ಅಧಿಕ ಶಾಲೆಗಳನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತಿರುವ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ( ರುಪ್ಸಾ)ವು 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗಾಗಿ ರೂಪಿಸಿರುವ ವಿದ್ಯಾಗಮ ಕಾರ್ಯಕ್ರಮವನ್ನೇ ಅನುಷ್ಠಾನ ಮಾಡಿವೆ. ಬಹುತೇಕ ಶಾಲಾಡಳಿತ ಮಂಡಳಿಗಳು ಶುಕ್ರವಾರದಿಂದ ವಿದ್ಯಾಗಮ ತರಗತಿ ಆರಂಭಿಸಿವೆ. ಇನ್ನು ಕೆಲವು ಶಾಲೆಗಳು ಸೋಮವಾರದಿಂದ ವಿದ್ಯಾಗಮ ತರಗತಿ ಆರಂಭಿಸಲಿವೆ ಎಂದು ರುಪ್ಸಾ ಮೂಲಗಳು ಖಚಿತಪಡಿಸಿವೆ.

Advertisement

ಪಾಲಕರಿಗೆ ಮಾಹಿತಿ :  ಸೋಮವಾರದಿಂದ ವ್ಯವಸ್ಥಿತವಾಗಿ ಶಾಲಾ ವರಣದಲ್ಲೇ ವಿದ್ಯಾಗಮ ಅಥವಾ ಅದೇ ಮಾದರಿಯ ತರಗತಿ ನಡೆಯಲಿದೆ. ಈ ಬಗ್ಗೆ ಪಾಲಕ, ಪೋಷಕರಿಗೆ ಮಾಹಿತಿ ತಲುಪಿಸುವ ವ್ಯವಸ್ಥೆ ಶಾಲಾಡಳಿತ ಮಂಡಳಿ ಯಿಂದ ಆಗಲಿದೆ ಎಂದು ಕ್ಯಾಮ್ಸ್‌ ಮೂಲಗಳು ತಿಳಿಸಿವೆ.

ಸರ್ಕಾರ ಮಕ್ಕಳಿಗೆ ಶಾಲೆಯಲ್ಲೇ ಬೋಧನೆಗೆ ಅವಕಾಶ ನೀಡಿರುವುದ ರಿಂದ ಆಯಾ ಶಾಲೆಗಳು ನಿರ್ದಿಷ್ಟ ಮಾರ್ಗಸೂಚಿ ಅನ್ವಯ ತಮ್ಮದೇ ವಿಧಾನ ಅಳವಡಿಸಿಕೊಂಡು ಬೋಧನೆ ಮಾಡಲಿದ್ದಾರೆ. ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್‌

ರುಪ್ಸಾ ಅಧೀನದ ಎಲ್ಲ ಶಾಲೆಗಳಲ್ಲೂ ವಿದ್ಯಾಗಮವನ್ನೇ ಅನುಷ್ಠಾನ ಮಾಡುತ್ತೇವೆ. ವಿದ್ಯಾಗಮಕ್ಕೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿ ನೀಡಿರುವ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತೇವೆ. ಶಶಿಧರ್‌ ಎಲ್‌.ದಿಂಡೂರ್‌, ಪ್ರಧಾನ ಕಾರ್ಯದರ್ಶಿ, ರುಪ್ಸಾ

 

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next