ನಿರೀಕ್ಷೆ. ಆದರೆ ಕೊರೊನಾ ಮಹಾಮಾರಿ ಮಾಡಿದ ಆಘಾತ ಮತ್ತು ಹಳದಿ ನೋಣದ ಕಾಟಕ್ಕೆ ಹೆದರಿದ ಮಾವು ದಲ್ಲಾಳಿಗಳು.
Advertisement
ಹೌದು, ರಾಜ್ಯದಲ್ಲಿಯೇ ಅತೀ ಹೆಚ್ಚು ಅಲ್ಫೋನ್ಸೋ ಮಾವು ಬೆಳೆಯುವ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಮಾವು ಬೆಳೆ ಹುಲುಸಾಗಿ ಹೂವು ಹೀಚು ಬಿಡುತ್ತಿದ್ದು, ಬೆಳೆಗಾರರು ಸಂತಸದಲ್ಲಿದ್ದಾರೆ. ಸಂಕ್ರಾಂತಿ ಸಮಯಕ್ಕಾಗಲೇ ಎಲ್ಲಾ ತೋಟಗಳು ಹೂ ಬಿಟ್ಟಿದ್ದು, ಈ ವರ್ಷ ಪ್ರೋಲಾಂಗ್ ಪ್ರೊಸೆಸ್ ಅಂದರೆ ಸುದೀರ್ಘ ಸುಗ್ಗಿಯ ಕಾಟಮಾವಿನ ತೋಪುಗಳಿಗೆ ಇಲ್ಲವಾಗಿದೆ. ಹಿಂದಾಗಿ ಹೂ ಬಿಡುವ ತೋಟಗಳು ಸಹ ಈ ವರ್ಷ ಈಗಲೇ ಹೂ ಹಿಡಿದಿದ್ದು, ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿಯೇ ಉತ್ತಮ ಫಸಲಿನೊಂದಿಗೆ ರೈತರ ಕೈಗೆ ಲಭಿಸುವ ವಿಶ್ವಾಸ ಮೂಡಿದೆ.
Related Articles
Advertisement
ಕಳೆದ ವರ್ಷಗಳಿಗೆ ಹೊಲಿಸಿದರೆ ಈ ವರ್ಷ ಚೆನ್ನಾಗಿ ಬೆಳೆ ಬರುವ ನಿರೀಕ್ಷೆ ಈಗಲೂ ಇದೆ. ಆದರೆ ಜಿಗಿರೋಗ ಮತ್ತು ಇಬ್ಬನಿ ಕಾಟ ಹೆಚ್ಚಾಗಿರುವುದು ರೈತರಲ್ಲೂ ಆತಂಕ ಮೂಡಿಸಿದೆ.ಮೂಡಣ ಗಾಳಿ ಚೆನ್ನಾಗಿ ಬೀಸಿದರೆ, ಯಾವುದೇ ದೊಡ್ಡ ಗಾಳಿ ಮಳೆ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಕಾಣಿಸಿಕೊಳ್ಳದೆ ಹೋದರೆ ಸಾಕು ಎನ್ನುತ್ತಿದ್ದಾರೆ ತೋಟಗಾರಿಕೆ ಇಲಾಖೆ ಮಾವು ತಜ್ಞರು.
ಹೊರ ರಾಜ್ಯ, ದೇಶಕ್ಕೂ ಸೈ: ಉತ್ತರ ಕರ್ನಾಟಕ ಸೇರಿದಂತೆ, ಗೋವಾ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಅಲ್ಫೋನ್ಸೋ ಮಾವಿನ ಹಣ್ಣಿನ ಖಣಜಗಳೇ ಧಾರವಾಡ ಮತ್ತು ಬೆಳಗಾವಿ ಜಿಲ್ಲೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಧಾರವಾಡ ಜಿಲ್ಲೆಯ ಅಲ್ಫೋನ್ಸೋ ಮಾವು ಸ್ಥಾನಪಡೆದುಕೊಂಡಿದೆ. ಸರ್ಕಾರ ಇದರ ಮೌಲ್ಯವರ್ಧನೆಗೆ ಶ್ರಮಿಸುತ್ತಿದೆಯಾದರೂ ಇನ್ನೂ ಅಚ್ಚುಕಟ್ಟು ವ್ಯವಸ್ಥೆ ಜಾರಿಯಾಗಿಲ್ಲ. ಮಾವು ಬೆಳೆಗಾರರು ಅಲ್ಫೋನ್ಸೋ ಮಾವು ರಫ್ತಿಗೆ ಬೇಕಾಗುವ ತಂತ್ರಜ್ಞಾನ, ಪ್ಯಾಕಿಂಗ್, ಸಂಸ್ಕರಣೆಗೆ ಆದ್ಯತೆ ಸಿಗಬೇಕು ಎನ್ನುತ್ತಲೇ ಇದ್ದಾರೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಸದ್ಯಕ್ಕೆ ಜಿಲ್ಲೆಯಲ್ಲಿ ಕಾಣಿಸುತ್ತಲೇ ಇಲ್ಲ.