ಗಾಂಧಿನಗರ : ಭಾರತೀಯ ಜನತಾ ಪಕ್ಷ ಸೇರಲಿದ್ದಾರೆಂಬ ವದಂತಿಗಳ ನಡುವೆಯೇ ಗುಜರಾತ್‌ನ ಮಾಜಿ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಇಂದು ಸೋಮವಾರ ಉಪ ಮುಖ್ಯಮಂತ್ರಿ ನಿತಿನ್‌ಭಾಯಿ ಪಟೇಲ್ ಅವರನ್ನು ಭೇಟಿಯಾದರು.
ಠಾಕೂರ್ ಅವರು 2017ರ ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಸೇರಿ ಪಠಾಣ್ ಜಿಲ್ಲೆಯ ರಾಧಾನ್‌ಪುರ ಕ್ಷೇತ್ರದಿಂದ ಗೆದ್ದಿದ್ದರು.
ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ದ ಒತ್ತಡಕ್ಕೆ ಮಣಿದು ಅಲ್ಪೇಶ್ ಈ ವರ್ಷ ಎಪ್ರಿಲ್ ನಲ್ಲಿ ಲೋಕಸಭಾ ಚುನಾವಣೆಗೆ ಮುನ್ನ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಬಿಜೆಪಿ ಸೇರುವಿರಾ ಎಂಬ ಮಾಧ್ಯಮ ಪ್ರಶ್ನೆಗೆ ಅಲ್ಪೇಶ್, ‘ಬಿಜೆಪಿ ಸೇರಬಯಸುವ ಯಾರಿಗೇ ಆದರೂ ಪಕ್ಷದ ಬಾಗಿಲು ತೆರೆದುಕೊಂಡೇ ಇದೆ’ ಎಂದು ಹೇಳಿದರು.