Advertisement

Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ

07:07 PM Jun 17, 2024 | Team Udayavani |

ಅಳ್ನಾವರ: ಮಲೆನಾಡಿನ ಸೆರಗಿನ ಅಳ್ನಾವರ ಪಟ್ಟಣ ಮಧ್ಯ ಭಾಗದ ಹೊಲ ಗದ್ದೆಗಳಲ್ಲಿ ಹೊಸ ಅತಿಥಿಗಳಾಗಿ ಬಿಳಿ ಶುಭ್ರ ಬಣ್ಣದ ಹಕ್ಕಿಗಳ ದಂಡು ಬೀಡು ಬಿಟ್ಟಿದೆ.

Advertisement

ತುಸು ಎತ್ತರವಾದ ಬಿಳಿ ಶುಭ್ರ ಬಣ್ಣದ ಹಕ್ಕಿಗಳ ಕಲರವ ಹಸಿರು ಹೊದಿಕೆ ಹೊತ್ತ ಪರಿಸರದ ಸೌಂದರ್ಯ ಹೆಚ್ಚಿಸಿದೆ. ಇದರ ಕೊಕ್ಕೆ ಕಪ್ಪು ಬಣ್ಣದ್ದಾಗಿದೆ. ಈ ವಿಶೇಷ ಅತಿಥಿ ಹೊಲದಲ್ಲಿ ಹುಳು ಹಾಗೂ ತಮಗೆ ಬೇಕಾದ ಆಹಾರ ಹುಡುಕುತ್ತಾ ಹಾರಾಡುವ ಸುಂದರ ದೃಶ್ಯ ದಾರಿಹೂಕರು, ರೈತರು ಕಂಡು ಸಂತಸ ಪಡುತ್ತಿದ್ದಾರೆ.

ಊರ ಕೆರೆಯ ಪಕ್ಕದ ಹೊಲದಲ್ಲಿ ಕಳೆದ ಎರಡು ದಿನದಿಂದ ಈ ವಿಶೇಷ ಅತಿಥಿಗಳು ಬಾನಂಗಳದಲ್ಲಿ ಹಾರಾಡುತ್ತಾ ಹೊಸ ಲೋಕ ಸೃಷ್ಟಿಸಿದೆ.

ಮಳೆಗಾಲದ ಸಮಯದಲ್ಲಿ ಸರಿಯಾಗಿ ಬಂದ ಈ ಹಕ್ಕಿಗಳು ,ಗುಂಪು ಗುಂಪಾಗಿ ಆಕಾಶದಲ್ಲಿ ಹಾರಾಡುವ ದೃಶ್ಯ ಸವಿಯುವುದು ಅಮೋಘ.

Advertisement

Udayavani is now on Telegram. Click here to join our channel and stay updated with the latest news.

Next