Advertisement

ದೇಶದಲ್ಲೇ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಿ

03:43 PM Mar 18, 2022 | Team Udayavani |

ರಾಯಚೂರು: ಯುದ್ಧಪೀಡಿತ ಉಕ್ರೇನ್‌ ದೇಶ ದಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳು ಭಾರತದಲ್ಲೇ ವ್ಯಾಸಂಗ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು.

Advertisement

ಉಕ್ರೇನ್‌ನಲ್ಲಿ ಓದುತ್ತಿರುವ ಜಿಲ್ಲೆಯ 17 ವಿದ್ಯಾ ರ್ಥಿಗಳಲ್ಲಿ ಬಹುತೇಕರು ಡಿಸಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ನಾವು ವೈದ್ಯಕೀಯ ವ್ಯಾಸಂಗಕ್ಕೆಂದು ಉಕ್ರೇನ್‌ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದವು. ಆದರೆ, ಈಗ ಅಲ್ಲಿ ಯುದ್ಧ ನಡೆಯುತ್ತಿದ್ದು, ಮರಳಿ ನಮ್ಮ ತಾಯ್ನಾಡಿಗೆ ಬಂದಿದ್ದೇವೆ. ಆದರೆ, ನಮ್ಮ ವ್ಯಾಸಂಗ ಪೂರ್ಣಗೊಂಡಿಲ್ಲ. ಮರಳಿ ಹೋಗಬೇಕೆಂದರೆ ಅಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ಭಾರತೀಯ ವೈದ್ಯ ಕೀಯ ಕಾಲೇಜುಗಳಲ್ಲೇ ನಮಗೆ ಮುಂದಿನ ವ್ಯಾಸಂಗ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ರಷ್ಯಾ ಮತ್ತು ಉಕ್ರೇನ್‌ ನಡುವಿನ ಈವರೆಗಿನ ಬೆಳ ವಣಿಗೆಗಳನ್ನು ಗಮನಿಸಿದರೆ ವಾತಾವರಣ ತಿಳಿಯಾ ಗಲು ಸಾಕಷ್ಟು ಸಮಯ ಬೇಕಾಗಬಹುದು ಎನ್ನುವಂ ತಿದೆ. ಈ ಯುದ್ಧದಿಂದಾಗಿ ನಮ್ಮ ವ್ಯಾಸಂ ಗವೂ ನಿಂತು ಹೋಗಿದೆ. ಐರೋಪ್ಯ ದೇಶಗಳಲ್ಲಿನ ಯುದ್ಧ ಪರಿಸ್ಥಿತಿ ಮುಂದಿನ ವರ್ಷಗಳವರೆಗೂ ಮುಂದುವರಿ ಯುವ ಸಾಧ್ಯತೆಗಳೇ ಹೆಚ್ಚಾಗಿದೆ. ಅಲ್ಲದೇ, ಉಕ್ರೇನ್‌ ನಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು, ಅಲ್ಲಿ ಪರಿಸ್ಥಿತಿ ಮೊದಲಿನಂತಾಗಲು ಬಹಳ ವರ್ಷಗಳೇ ಬೇಕಾಗ ಬಹುದು. ಇಂಥ ಸನ್ನಿವೇಶದಲ್ಲಿ ನಮ್ಮ ಹೆತ್ತವರು ಅಲ್ಲಿಗೆ ಮರಳಿ ಕಳುಹಿಸಲು ಆತಂಕ ಪಡುತ್ತಿ ದ್ದಾರೆ. ಹೀಗಾಗಿ ಉಳಿದ ವ್ಯಾಸಂಗವನ್ನು ಭಾರತದಲ್ಲೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next