Advertisement

ಕೋವಿಡ್‌ ಸೋಂಕಿತರಿಗಿನ್ನು ಮನೆಯಲ್ಲೇ ಚಿಕಿತ್ಸೆ ಅವಕಾಶ

11:12 AM Jul 10, 2020 | Suhan S |

ಧಾರವಾಡ: ಕೋವಿಡ್‌ ಸೋಂಕು ದೃಢಪಟ್ಟಿದ್ದರು ಕೂಡಾ ಸೋಂಕಿನ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣಗಳಿರುವವರಿಗೆ ಆರೋಗ್ಯ ತಂಡದಿಂದ ನಡೆಸಲಾಗುವ ಪ್ರಾಥಮಿಕ ಪರಿಶೀಲನೆ ಹಾಗೂ ಟ್ರಯೇಜ್‌ ಶಿಫಾರಸು ಆಧರಿಸಿ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಅವಕಾಶ ನೀಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತಾಲಯ ತಿಳಿಸಿದೆ.

Advertisement

ಈ ಕುರಿತು ಮಾರ್ಗಸೂಚಿ ಪ್ರಕಟಿಸಿರುವ ಆಯುಕ್ತಾಲಯವು ಪ್ರತ್ಯೇಕವಾಗಿರಲು ಮನೆಯು ಸೂಕ್ತವಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಪ್ರತ್ಯೇಕತೆಯ ಅವಧಿಯಲ್ಲಿ ವ್ಯಕ್ತಿಯನ್ನು ದೈನಂದಿನ ಅನುಸರಣೆ ಮಾಡಲು ಟೆಲಿ ಕನ್ಸಲ್ಟೆಶನ್‌ ಸಂಪರ್ಕ ಸ್ಥಾಪಿಸಲಾಗುವುದು. ಮನೆಯಲ್ಲಿ ಪ್ರತ್ಯೇಕವಾಗಿ ಇರಿಸುವುದು. ಕುಟುಂಬದ ಸದಸ್ಯರಿಗೆ, ಅಕ್ಕಪಕ್ಕದ ಮನೆಯವರಿಗೆ ತಿಳಿಸಬೇಕು.

ಆರೋಗ್ಯ ಸಿಬ್ಬಂದಿ ಪರಿಶೀಲಿಸುವ ಅಂಶಗಳು: ಶರೀರದ ತಾಪಮಾನ, ನಾಡಿಮಿಡಿತಕ್ಕಾಗಿ ಪಲ್ಸ್‌ ಆಕ್ಸಿಮೀಟರ್‌, ರಕ್ತದಲ್ಲಿನ ಸಕ್ಕರೆ ಅಂಶ, ರಕ್ತದೊತ್ತಡ, ಆರೋಗ್ಯ ಸಮಸ್ಯೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಾರೆ. ವ್ಯಕ್ತಿಯು ಲಕ್ಷಣ ರಹಿತ ಅಥವಾ ಸೌಮ್ಯಲಕ್ಷಣ ಹೊಂದಿದ್ದಾರೆ ಎಂದು ವೈದ್ಯಾಧಿಕಾರಿಗಳು ದೃಢಪಡಿಸುತ್ತಾರೆ. 38 ಡಿಗ್ರಿ ಸೆಲ್ಸಿಯಸ್‌ ಅಥವಾ 100.4 ಡಿಗ್ರಿ ಫ್ಯಾರನ್‌ಹೀಟ್‌ ಕಡಿಮೆ ಶರೀರ ತಾಪಮಾನ ಹೊಂದಿರಬೇಕು. ಆಮ್ಲಜನಕದ ಪರ್ಯಾಪ್ತತೆ ಶೇ.95ಕ್ಕಿಂತ ಹೆಚ್ಚಿರಬೇಕು. 60 ವಯಸ್ಸಿಗಿಂತ ಕಡಿಮೆ ವಯೋಮಾನದವರಾಗಿರಬೇಕು. ವ್ಯಕ್ತಿಯು ಸ್ವಯಂಪ್ರೇರಿತವಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಒಪ್ಪಿ ಮುಚ್ಚಳಿಕೆ ಪತ್ರ ನೀಡಿದಾಗ ಈ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next