Advertisement
ಜ. 23ರಂದು ಕೋಲ್ಕತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದಲ್ಲಿ ನಡೆದ ಬೃಹತ್ ರ‍್ಯಾಲಿಯನ್ನು ಉಲ್ಲೇಖೀಸಿ ಮಾತನಾಡಿದ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.ತಮಿಳುನಾಡಿನ ಮಧುರೆಯಲ್ಲಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಮಾ. 3ಕ್ಕೆ ರ‍್ಯಾಲಿ: ಪಾಟ್ನಾದಲ್ಲಿ ಮಾ.3ಕ್ಕೆ ಎನ್‌ಡಿಎ ರ್ಯಾಲಿ ನಡೆಯಲಿದ್ದು, ಅದರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಭಾಗವಹಿಸುವ ಸಾಧ್ಯತೆ ಇದೆ.
ಬಿಪಿಸಿಎಲ್ ರಿಫೈನರಿ ಉದ್ಘಾಟನೆ: ಸರಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್)ನ ಏಕೀಕೃತ ತೈಲ ಶುದ್ಧೀಕರಣ ಕೇಂದ್ರವನ್ನು ಪ್ರಧಾನಿ ಮೋದಿ ಕೊಚ್ಚಿಯಲ್ಲಿ ಉದ್ಘಾಟಿಸಿದ್ದಾರೆ. ಇದರ ಜತೆಗೆ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್ ಮತ್ತು ಕೌಶಲಾಭಿವೃದ್ಧಿ ಕೇಂದ್ರದ ಸ್ಥಾಪನೆಗೆ ಭೂಮಿ ಪೂಜೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಉಜ್ವಲ ಯೋಜನೆಯಡಿ 6 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ ಎಂದಿದ್ದಾರೆ.
ವಾಗ್ಧಾಳಿ: ತ್ರಿಶ್ಶೂರ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಯುವ ಮೋರ್ಚಾ ರ್ಯಾಲಿಯಲ್ಲಿ ಕೇರಳ ಎಲ್‌ಡಿಎಫ್ ಸರಕಾರದ ವಿರುದ್ಧ ಪ್ರಧಾನಿ ವಾಗ್ಧಾಳಿ ನಡೆಸಿದ್ದಾರೆ. ಕೇರಳದ ಸಂಸ್ಕೃತಿಗೆ ಎಡಪಕ್ಷಗಳು ಯಾವ ರೀತಿಯ ಗೌರವ ನೀಡುತ್ತವೆ ಎನ್ನುವುದು ಶಬರಿಮಲೆ ಪ್ರಕರಣ ಸಾಕ್ಷಿ ಎಂದರು. ಒಂದು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಪ್ರಧಾನಿ ಮೋದಿ ಎಲ್‌ಡಿಎಫ್ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಿಯಾಂಕಾಗೆ ಜನರ ಥಳಿಸುವ ಕಾಯಿಲೆಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಜನರನ್ನು ಥಳಿಸುವ ಕಾಯಿಲೆ ಇದೆ. ಅದು ಅವರ ಸಾರ್ವಜನಿಕ ಜೀವನಕ್ಕೆ ಹೇಳಿಸಿದ್ದಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. “ಎಎನ್‌ಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, ಅವರಿಗೆ ಬೈಪೋಲಾರ್ ಸಮಸ್ಯೆ ಇದೆ ಎಂದಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಒಳಗಾಗಿದ್ದು, ಕಾಂಗ್ರೆಸ್ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಇದೇ ವೇಳೆ ಉತ್ತರ ಪ್ರದೇಶ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಕೂಡ ಪ್ರಿಯಾಂಕಾ ವಾದ್ರಾ ರಾಜಕೀಯ ಪ್ರವೇಶಕ್ಕೆ ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ವೈಫಲ್ಯದ ಹಿನ್ನೆಲೆಯಲ್ಲಿ ಅವರನ್ನು ಕರೆತರಲಾಗಿದೆ ಎಂದಿದ್ದಾರೆ. 2008ರಿಂದ 2014ರ ಅವಧಿಯಲ್ಲಿ ಯುಪಿಎ ಸರಕಾರ ರಾಹುಲ್ ಗಾಂಧಿ ಪರ ನಿಲುವು ಹೊಂದಿರುವ ವಿಜಯ ಮಲ್ಯ, ನೀರವ್ ಮೋದಿ ಸೇರಿದಂತೆ ಹಲವು ಮಂದಿ ಉದ್ಯಮಿಗಳ 34 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವರ್ಚಸ್ಸಿಗೆ ಚ್ಯುತಿ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಉತ್ತಮ ಪ್ರಧಾನಿಯಾಗುವ ಎಲ್ಲಾ ಅರ್ಹತೆಯನ್ನು ಅವರು ಹೊಂದಿದ್ದಾರೆ.
– ತೇಜಸ್ವಿ ಯಾದವ್ ಆರ್‌ಜೆಡಿ ನಾಯಕ ರಾಮ ಮಂದಿರ ವಿಚಾರ ಸುಪ್ರೀಂಕೋರ್ಟ್ ನಿರ್ಧರಿಸಲಿದೆ. ಯೋಗಿ ಆದಿತ್ಯನಾಥ್ ಅವರೇ ಮೊದಲು ರೈತರ ಸಮಸ್ಯೆಯನ್ನು ಬಗೆಹರಿಸಿ. ಅದಕ್ಕಾಗಿ ಉ.ಪ್ರ.ದ ಜನರು 90 ದಿನಗಳನ್ನು ನೀಡುತ್ತಿದ್ದಾರೆ.
– ಅಖೀಲೇಶ್ ಯಾದವ್ ಎಸ್‌ಪಿ ಅಧ್ಯಕ್ಷ