Advertisement
ಖಾಶೆಂಪುರ್ (ಪಿ) ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈತ್ರಿ ವಿಷಯದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಹಿಂದೆ ನಡೆದ ಎರಡು ಸಭೆಗಳಲ್ಲಿಯೂ ಮೈತ್ರಿಗೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ರಾಜಕೀಯದಲ್ಲಿ ಸಂದರ್ಭಕ್ಕೆ ಅನುಸಾರ ಪಕ್ಷಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಅದರಂತೆ ಜೆಡಿಎಸ್ ಸಹ ಎನ್‌ಡಿಎ ಜತೆಗಿನ ಮೈತ್ರಿ ನಿರ್ಧಾರವನ್ನು ತೆಗೆದುಕೊಂಡಿದೆ. ಪಕ್ಷದಲ್ಲಿ ಒಬ್ಬಿಬ್ಬರು ಅಸಮಾಧಾನ ಹೊಂದಿದ್ದರೂ ಕುಮಾರಸ್ವಾಮಿ ಅದನ್ನು ಸರಿಪಡಿಸುತ್ತಾರೆ. ಕರ್ನಾಟಕದ ಒಳಿತಿಗಾಗಿ ನಾವು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದ ಪರವಾಗಿ ನಮ್ಮ ಪಕ್ಷ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದೆ. ಅದರೊಟ್ಟಿಗೆ ನಮ್ಮ ಪಕ್ಷವನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷರು ರಾಜೀನಾಮೆ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷದಲ್ಲಿ ಬಹಳಷ್ಟು ಜನ ಉಪಾಧ್ಯಕ್ಷರಿದ್ದಾರೆ ಎಂದರು.
ರಾಯಚೂರು: ಬಿಜೆಪಿ ಮೈತ್ರಿ ಬಗ್ಗೆ ನಾನು ಬೇಸರ ವ್ಯಕ್ತಪಡಿಸಿಲ್ಲ. ಆದರೆ, ನನ್ನ ಕ್ಷೇತ್ರದಲ್ಲಿನ ವಿಚಾರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದೆ. ನನಗೆ ಪಕ್ಷ ಎಷ್ಟು ಮುಖ್ಯವೋ ಕ್ಷೇತ್ರದ ಮತದಾರರು ಕೂಡ ಅಷ್ಟೇ ಮುಖ್ಯ. ಪಕ್ಷದ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆಂದು ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಜಿ. ಕರೆಮ್ಮ ನಾಯಕ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಯಾವ ಫಲಾಪೇಕ್ಷೆ ಇಲ್ಲದೆ ಜೆಡಿಎಸ್ ಬೆಂಬಲಿಸಿದ್ದಾರೆ. ಕಾರ್ಯಕರ್ತರಿಗೆ ನನ್ನ ಪ್ರಥಮಾದ್ಯತೆ. ಅವರು ತೋರಿಸಿದ ದಾರಿಯಲ್ಲಿ ನಡೆಯುತ್ತೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಸೆಣಸಾಡಿ ಗೆಲುವು ಸಾ ಧಿಸಿದ್ದು, ಕ್ಷೇತ್ರದ ಮತದಾರರು ಜೆಡಿಎಸ್‌ಗೆ ಮನ್ನಣೆ ನೀಡಿದ್ದಾರೆ ಎಂದರು.