Advertisement

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ಥಿರ ಸಾಧ್ಯವಿಲ್ಲ: ಖಾದರ್‌

12:11 AM Feb 25, 2019 | |

ಶಿವಮೊಗ್ಗ: ಕಳೆದ ಎಂಟು ತಿಂಗಳಿಂದಲೂ ಬಿಜೆಪಿಯಿಂದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ. ಆದರೆ, ಬಿಜೆಪಿ ತನ್ನ ಯತ್ನದಲ್ಲಿ ಯಶಸ್ವಿಯಾಗಿಲ್ಲ. ಅದಕ್ಕೆ ರಾಜ್ಯದ ಜನರು ಬಿಜೆಪಿಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಸಚಿವ ಯು.ಟಿ.ಖಾದರ್‌ ಟೀಕಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರದ ರಚನೆಗೆ ಬೇಕಾದ 113 ಸ್ಥಾನ ಬಿಜೆಪಿಯವರ ಬಳಿ ಇದ್ದರೆ ತೋರಿಸಲಿ. ನಾವು ಬಹುಮತ ಸಾಬೀತುಪಡಿಸಿಯೇ ಸರಕಾರ ರಚಿಸಿರುವುದು. ಬಿಜೆಪಿಯವರು ಹೇಗೆಲ್ಲಾ ಅಧಿ ಕಾರ ದುರ್ಬಳಕೆ ಮಾಡಿಕೊಂಡರು ಎಂಬುದು ಗೊತ್ತಿದೆ. ಬಿಜೆಪಿಯವರ ಮನಸ್ಸಿನಲ್ಲಿ ಏನಿದೆ ಅದರಂತೆ ಹೇಳಿಕೆ ನೀಡುತ್ತಿದ್ದಾರೆ. 5 ವರ್ಷ ಸರಕಾರ ಸುಸೂತ್ರವಾಗಿ ನಡೆಯಲಿದೆ. ಎಲ್ಲ ಸಮಸ್ಯೆಗಳನ್ನು ಮುಖಂಡರು ಬಗೆಹರಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next