Advertisement

ದಲಿತರು-ಸವರ್ಣಿಯರ ಆರೋಪ-ಪ್ರತ್ಯಾರೋಪ

07:38 PM Jun 18, 2021 | Girisha |

ಮುದ್ದೇಬಿಹಾಳ: ಪಿಎಸೈ ಎಂ.ಬಿ. ಬಿರಾದಾರ ಅವರನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು, ಸದಸ್ಯರು ರಾಜ್ಯ ಗೃಹ ಸಚಿವರಿಗೆ ಬರೆದ ಮನವಿಯನ್ನು ಗುರುವಾರ ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಅವರಿಗೆ ಸಲ್ಲಿಸಿದರು. ದಲಿತರ ಮೇಲೆ ಅನ್ಯಾಯವಾದಾಗ ದೂರು ಕೊಡಲು ಠಾಣೆಗೆ ಹೋದರೆ ಸರಿಯಾಗಿ ದೂರು ಸ್ವೀಕರಿಸದೆ ನಿಮ್ಮ ಊರಲ್ಲೇ ಕೇಸ್‌ ಬಗೆಹರಿಸಿಕೊಳ್ಳಿ ಅಂತ ಉಡಾಫೆ ಉತ್ತರ ಕೊಡುತ್ತಾರೆ.

Advertisement

ದಲಿತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಕೇಸ್‌ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೂjರ, ಹುನಕುಂಟಿ ಗ್ರಾಮಗಳಲ್ಲಿ ದಲಿತರ ಮೇಲೆ ಸವರ್ಣಿಯರಿಂದ ದೌರ್ಜನ್ಯ ಮತ್ತು ಜಾತಿನಿಂದನೆ ಕೇಸು ದಾಖಲಿಸಲು ಉದ್ದೇಶಪೂರ್ವಕ ನಿರ್ಲಕ್ಷé ಮಾಡಿದ್ದಾರೆ.

ದಲಿತರು ಯಾವುದೇ ತಪ್ಪು ಮಾಡದಿದ್ದರೂ ಸವರ್ಣಿಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದರೂ ಉದ್ದೇಶಪೂರ್ವಕ ದಲಿತರ ಮೇಲೆ ಕೇಸ್‌ ಗಳನ್ನು ಹಾಕುತ್ತಾರೆ. ದಲಿತರ ಮೇಲೆ ದೌರ್ಜನ್ಯವಾದಾಗ ದೂರು ಕೊಡಲು ಠಾಣೆಗೆ ಹೋದಾಗ ಕೇಸ್‌ ಹಾಕಬೇಡಿ ಎಂದು ಬೈದು ಕಳುಹಿಸುತ್ತಾರೆ. ಇವರನ್ನು ಇಲ್ಲಿಂದ ವರ್ಗಾವಣೆಗೊಳಿಸಬೇಕು.

ನಿರ್ಲಕ್ಷé ವಹಿಸಿದಲ್ಲಿ ಠಾಣೆ ಮುಂದೆ ದಲಿತಪರ, ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಧರಣಿ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮುಖಂಡರಾದ ಡಿ.ಬಿ. ಮುದೂರ, ಹರೀಶ ನಾಟೀಕಾರ, ಸಿ.ಜಿ. ವಿಜಯಕರ, ಬಸವರಾಜ ಪೂಜಾರಿ ಸಿದ್ದಾಪುರ, ಪ್ರಕಾಶ ಚಲವಾದಿ ಸರೂರ, ಖಯ್ಯೂಮ ಚೌದ್ರಿ, ಶೇಕಪ್ಪ ಮಾದರ, ಹುಲಗಪ್ಪ ನಾಗರಬೆಟ್ಟ, ಯಲ್ಲಪ್ಪ ಚಲವಾದಿ, ಹನುಮಂತ ಮಾದರ ಸೇರಿ ಹಲವರು ಇದ್ದರು. ಮನವಿ ಸಲ್ಲಿಕೆಗೂ ಮುನ್ನ ಮಿನಿ ವಿಧಾನಸೌಧವರೆಗೆ ಹಲಗೆ ಬಾರಿಸುತ್ತ ರ್ಯಾಲಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next