Advertisement
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, 30 ವರ್ಷಗಳಿಂದ ಪರಿಶುದ್ಧ ರಾಜಕಾರಣ ಮಾಡಿದ್ದೇನೆ. ಕಾಂಗ್ರೆಸ್‌ನ ಚಿಲ್ಲರೆ ಹಾಗೂ ಬಾಲಿಶತನದ ಹೇಳಿಕೆಗೆ ಮಿತಿ ಇರಬೇಕು ಎಂದರು.ರೈಲ್ವೆ ಜಾಗಕ್ಕೆ ಸಂಬಂಧಿಸಿ ಇದುವರೆಗೆ ಐದು ಬಾರಿ ಟೆಂಡರ್ ಕರೆದರೂ ಯಾರೂ ಭಾಗಿಯಾಗಿಲ್ಲ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ. ಕಾಂಗ್ರೆಸ್‌ನವರಲ್ಲಿ ಹೇಗೂ ಭ್ರಷ್ಟಾ ಚಾರದ ಹಣ ಸಾಕಷ್ಟಿದೆಯಲ್ಲ. ಅವರೇ ಈ ಟೆಂಡರ್‌ನಲ್ಲಿ ಭಾಗಿಯಾಗಬಹುದು. ನಿಮ್ಮ ಹಾಗೆ ಕಲ್ಲಿದ್ದಲ್ಲಿನಲ್ಲಿ ಚೀಟಿ ಬರೆದು ಟೆಂಡರ್ ಕರೆದಿಲ್ಲ.ಆನ್‌ಲೈನ್ ಮುಖಾಂತರ ಕರೆಯ ಲಾಗಿದೆ. ಇದರಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ಹೇಳಿದರು.
ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅ ಜನವರಿ ಅಂತ್ಯದವರೆಗೆ ಎಲ್ಲಿಗೂ ಬರುವುದಿಲ್ಲ. ಆ ಬಳಿಕ ಬಂದು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಇದರಲ್ಲಿ ಯಾವುದೇ ದೊಡ್ಡ ರಾಜಕೀಯ ಬದಲಾವಣೆ ಇಲ್ಲ ಎಂದರು.