Advertisement
ಹುಬ್ಬಳ್ಳಿ: ಚಿತ್ರದುರ್ಗದ ಮುರುಘಾ ಶರಣರ ಬಂಧನ ಆಗಿದೆಯೋ ಇಲ್ಲವೋ ಎಂಬುವುದರ ಬಗ್ಗೆ ಗೊತ್ತಿಲ್ಲ. ಸಂಪೂರ್ಣ ತನಿಖೆ ಪ್ರಕರಣದ ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಬಂಧನವಾಗಿದ್ದರೆ ಅಧಿಕಾರಿಗಳು ನನಗೆ ಮಾಹಿತಿ ನೀಡುತ್ತಿದ್ದರು ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
Related Articles
Advertisement
ರಾಜ್ಯದಲ್ಲಿ ಗಣೇಶ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಅದ್ದೂರಿತನ ಇರುತ್ತದೆ. ಈ ಆಚರಣೆಗೆ ಯಾವುದೇ ದಕ್ಕೆ ಬರಬಾರದು ಎನ್ನುವ ಕಾರಣಕ್ಕೆ ಕೆಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತು ಸೇರಿದಂತೆ ಹಲವು ತಂತ್ರಜ್ಞಾನದ ಸಾಧನಗಳನ್ನು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಕಿಡಿಗೇಡಿಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ರೂಟ್ ಮಾರ್ಚ್ ನಡೆಸಿ ವಿಜೃಂಬಣೆಯ ಆಚರಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ ಮೈದಾನದ ಮಾಲೀಕರಾದ ಮಹಾನಗರ ಪಾಲಿಕೆಗೆ ಬಿಟ್ಟ ವಿಚಾರವಾಗಿದೆ. ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ. ಈ ವಿಚಾರದಲ್ಲಿ ಕೇಳದ ಹೊರತು ಸುಖಾ ಸುಮ್ಮನೆ ಸಲಹೆಯಯನ್ನು ಪೊಲೀಸ್ ಇಲಾಖೆ ಕೊಡುವುದಿಲ್ಲ. ಪಾಲಿಕೆ ಸದನ ಸಮಿತಿ ರಚಿಸಿದ್ದು, ಅದರ ವರದಿ ಏನಿರುತ್ತದೆ ಎನ್ನುವುದರ ಮೇಲೆ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ. ಈಗಾಗಲೇ ಮುನ್ನೆಚ್ವರಿಕಾ ಕ್ರಮವಾಗಿ ಬಿಗಿ ಬಂದೋಬಸ್ತು ಏರ್ಪಡಿಸಲಾಗಿದೆ ಎಂದು ತಿಳಿಸಿದರು.